• Home
 • »
 • News
 • »
 • uttara-kannada
 • »
 • Siddi Community: ಬರ್ತಿದೆ ಸಿದ್ದಿ ಸಮುದಾಯದ ಸಿನಿಮಾ!

Siddi Community: ಬರ್ತಿದೆ ಸಿದ್ದಿ ಸಮುದಾಯದ ಸಿನಿಮಾ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಸಿನೆಮಾ ಮಾಡ್ತಿದ್ದಾರೆ. ಇದು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ತಮ್ ಬಗ್ಗೆ ಸಿನಿಮಾ ಆಗ್ತಿದೆ ಅನ್ನೋದು ಸಿದ್ದಿ ಸಮುದಾಯದ ಜನರಲ್ಲಿ ಖುಷಿ ಮೂಡ್ಸಿದೆ.

 • Share this:

  ಉತ್ತರ ಕನ್ನಡದ ಸಿದ್ದಿ ಸಮುದಾಯದಲ್ಲಿ ಈಗ ಸಂಭ್ರಮವೋ ಸಂಭ್ರಮ. ಎಲ್ರ ಕಣ್ಣು ಈಗ ಕ್ಯಾಮೆರಾ, ಸಿನೆಮಾ ಮೇಲೆ ನೆಟ್ಟಿದೆ. ನಮ್ದೂ ಒಂದು ಸಿನೆಮಾ ಬರ್ತಿದೆ ಅನ್ನೋ ಖುಷಿ. ಹಾಗಾಗಿಯೇ ನೋಡಿ ಸಿದ್ಧಿ ಜನಾಂಗದ ಮಕ್ಕಳಿಂದ ಹಿಡಿದು ಹಿರಿಯವರೆಗೂ ಸಿನಿಮಾ ಶೂಟಿಂಗ್ ಅಂತ ಓಡಾಡ್ತಿದ್ದಾರೆ. ಹೌದು, ಉತ್ತರ ಕನ್ನಡದಲ್ಲಿ (Uttara Kannada) ನೆಲೆಸಿರೋ ಸಿದ್ದಿ ಸಮುದಾಯದ (Siddi Community) ಬಗ್ಗೆ ಸಿನಿಮಾ ಶೂಟಿಂಗ್ ನಡೀತಿದೆ! ಈ ಸಿನಿಮಾ ಹೆಸ್ರು ಏನಂತ ಕೇಳಿದ್ರೆ ದಮಾಮ್ ಅಂತಾರೆ ನಿರ್ದೇಶಕರು. ಬಹುತೇಕ ಕಲಾವಿದರು ಸಿದ್ದಿ ಸಮುದಾಯದವರೇ ಆಗಿದ್ದಾರೆ ಅನ್ನೋದು ಈ ಸಿನಿಮಾ ವಿಶೇಷ. ಜೊತೆಗೆ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಸಿನೆಮಾ ಮಾಡ್ತಿದ್ದಾರೆ. ಇದು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ತಮ್ ಬಗ್ಗೆ ಸಿನಿಮಾ ಆಗ್ತಿದೆ ಅನ್ನೋದು ಸಿದ್ದಿ ಸಮುದಾಯದ ಜನರಲ್ಲಿ ಖುಷಿ ಮೂಡ್ಸಿದೆ.


  ಸಿದ್ಧಿ ಜನಾಂಗದ ಹೆಸ್ರನ್ನ ನೀವೂ ಕೇಳಿರಬಹುದು. ಆದರೆ ಅವರ ಆಚಾರ, ವಿಚಾರ, ಸಂಸ್ಕೃತಿ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿರಲ್ಲ. ಅದ್ರಲ್ಲೂ ಸಿದ್ಧಿ ಭಾಷೆ, ಅವರಲ್ಲಿರುವ ಪ್ರತಿಭೆಗಳು ಇತ್ತೀಚಿನ ವರ್ಷಗಳವರೆಗೂ ಯಾರಿಗೂ ತಿಳಿದೇ ಇರಲಿಲ್ಲ.


  ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


  ಇದೀಗ ಸಿದ್ಧಿ ಭಾಷೆಯಲ್ಲೇ ಕೇರಳ ಮೂಲದ, ಅನಿವಾಸಿ ಭಾರತೀಯ ಜಯನ್ ಕೆ.ಸಿ. ಸಿನೆಮಾ ರಚಿಸಿ ನಿರ್ದೇಶಿಸುತ್ತಿದ್ದಾರೆ. ಮುಖ್ಯವಾಗಿ ಈ ಚಿತ್ರದಲ್ಲಿ ಸಿದ್ದಿ ಸಮುದಾಯದ ಮಕ್ಕಳದ್ದೇ ಪ್ರಮುಖ ಪಾತ್ರವಂತೆ.


  ಇದನ್ನೂ ಓದಿ: Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!


  ಕನ್ನಡ ಚಿತ್ರರಂಗದ ಈಗಾಗ್ಲೇ ಫೇಮಸ್ ಆಗಿರೋ ಮೋಹನ್ ಸಿದ್ದಿ, ಗಿರಿಜಾ ಸಿದ್ದಿ ಹಾಗೂ ಕಾಗೆಬಂಗಾರ ಖ್ಯಾತಿಯ ಪ್ರಶಾಂತ್ ಸಿದ್ಧಿಯವರೂ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ ಮೂಲಕ ಸಿದ್ಧಿ ಜನಾಂಗ ಮುನ್ನೆಲೆಗೆ ಬರೋ ಆಶಾಭಾವನೆ ಮೂಡಿಸಿರೋದಂತೂ ಸತ್ಯ. ಸದ್ಯ ಕಾಡಿನ ಪ್ರತಿಭೆಗಳ ಈ ಸಿನಿಮಾ ಸೂಪರ್ ಹಿಟ್ ಆಗೋ ನಿರೀಕ್ಷೆ ಉತ್ತರ ಕನ್ನಡದ ಸಿದ್ದಿ ಸಮುದಾಯದ ಜನರ ಕಣ್ಣುಗಳಲ್ಲಿ ಕಾಣಿಸ್ಕೊಂಡಿದೆ.


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: