ಉತ್ತರ ಕನ್ನಡ: ಇದೇನಿದು ತೋಟದ ಮಧ್ಯೆ ರೋಪ್ ವೇ ಮಾಡ್ಕೊಂಡಿದ್ದಾರ? ಅದೂ ಬೇರೆ, ನೆಲಕ್ಕೆ ತಾಗಿಸಿ ಬಿಟ್ಟು? ಅಲ್ವ, ನೀವೂ ಕನ್ಫೂಶನ್ ಆಗ್ತಿದ್ದೀರಲ್ವ? ಹೌದು, ಇದು ಪ್ರವಾಸಿಗರಿಗಾಗಿ ಮಾಡಿದ ರೋಪ್ ವೇ ಖಂಡಿತಾ ಅಲ್ವೇ ಅಲ್ಲ. ಇದೇನಿದ್ರು ರೈತರು (Farmer's Tips) ತಮ್ಮ ಕೆಲಸವನ್ನ ಇನ್ನಷ್ಟು ಸ್ಮಾರ್ಟ್ ಆಗಿ ಮಾಡಲು ಕಂಡುಕೊಂಡ ಸೂಪರ್ ಐಡಿಯಾ! (Super Idea) ಹೀಗೆ ತಮ್ಮ ತೋಟದ ಮಧ್ಯೆ ರೋಪ್ ವೇ ಅಳವಡಿಸಿಕೊಂಡಿರೋ ಇವರು ಉತ್ತರ ಕನ್ನಡದ (Uttara Kannada) ಸಿದ್ದಾಪುರದ ಹದಿನಾರನೇ ಮೈಲಿಗಲ್ಲಿನ ಗೊಡ್ವಿಮನೆಯ ರವಿ ಭಟ್ಟರು.
ಪ್ರಾಯೋಗಿಕವಾಗಿ ಮಾಡಿದ ಈ ರೋಪ್ ವೇ ಕೃಷಿ ಸಲಕರಣೆ, ಇತರೆ ಭಾರದ ವಸ್ತು, ಬೆಳೆಗಳನ್ನ ಮೇಲಿನಿಂದ ಕೆಳಕ್ಕೂ, ಕೆಳಗಿನಿಂದ ಮೇಲಕ್ಕೂ ಕಳುಹಿಸಲು ಉಪಯೋಗಿಸುವ ಸಾಧನವಾಗಿದೆ. ಇದೊಂಥರಾ ರವಿ ಭಟ್ಟರ ಪಾಲಿಗೆ ಎಸ್ಕಲೇಟರ್ ಇದ್ದಂತೆ.
ಮನೆ ಬೆಟ್ಟದ ಕೆಳಗಿರೋದೇ ಕಾರಣ
ಇವರ ಮನೆ ಇರೋದು ಬೆಟ್ಟದ ಕೆಳಗೆ. ಜಮೀನು, ತೋಟಗಳು ಇರೋದು ಬೆಟ್ಟದ ಮೇಲೆ. ಒಮ್ಮೆ ಬೆಟ್ಟ ಹತ್ತಿ ಹೋದರೆ ಮತ್ತೆ ಕೆಳಗಿಳಿದರೆ ಮತ್ತೊಂದಿಷ್ಟು ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ರವಿಭಟ್ಟರು ಎಸ್ಕಲೇಟರ್ ಮಾದರಿಯಲ್ಲಿ ಈ ರೋಪ್ ವೇ ಕಂಡು ಹಿಡಿದಿದ್ದಾರೆ. ಹಾಗಾಗಿ ಈ ರೋಪ್ ವೇ ಮೂಲಕನೇ ತೋಟಕ್ಕೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುವುದು, ವಾಪಸ್ ಮನೆಗೆ ಕಳುಹಿಸುವುದನ್ನು ಮಾಡುತ್ತಾರೆ.
ಇದನ್ನೂ ಓದಿ: Uttara Kannada: ನೀವು ಕಂಡು ಕೇಳಿರದ ಗಡ್ಡೆ ಗೆಣಸುಗಳು ಇಲ್ಲಿವೆ ನೋಡಿ!
ಒಂದು ರೋಪ್ ವೇ 10 ಸಾವಿರ ಖರ್ಚು
ಇವರ ತೋಟದಲ್ಲಿ ಮೂರು ರೋಪ್ ವೇ ಗಳಿದ್ದು, ಒಂದು ರೋಪ್ ವೇ ನಿರ್ಮಿಸಲು ಹತ್ತು ಸಾವಿರ ವೆಚ್ಚ ತಗುಲಿದೆ. ಈ ಮೂರು ರೋಪ್ ವೇಗಳು ರವಿ ಭಟ್ಟರ ಹಲವು ಕೃಷಿ ಕಾರ್ಯಗಳಿಗೆ ಸಹಕಾರಿಯಾಗಿದೆ. ಬೆಟ್ಟದ ಕೆಳಗಡೆ ವಾಸಿಸೋ ಜನರಿಗಂತೂ ಇಂತಹ ರೋಪ್ ವೇ ಅರ್ಧದಷ್ಟು ಕೆಲಸವನ್ನು ಕಡಿಮೆ ಮಾಡುತ್ತದೆ. ಗುಡ್ಡವನ್ನ ಹತ್ತಿ ಇಳಿಯೋ ಕೆಲಸವೂ ಇರದು.
ಇದನ್ನೂ ಓದಿ: Gokarna Kotitirtha: ಗೋಕರ್ಣದ ಪವಿತ್ರ ಕೋಟಿತೀರ್ಥಕ್ಕಿದೆ ಅಪಾರ ಮಹಿಮೆ!
ಹೀಗೆ ರೈತನೊಬ್ಬ ಕಂಡು ಹಿಡಿದ ರೋಪ್ ವೇ ತನ್ನ ತೋಟದ ಕೆಲಸಕ್ಕೆ ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನ ಕಲ್ಪಿಸಿದೆ. ರವಿ ಭಟ್ಟರ ಈ ರೋಪ್ ವೇ ತಂತ್ರಗಾರಿಕೆಗೆ ನಿಜಕ್ಕೂ ತಲೆದೂಗಲೇಬೇಕು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ