ಉತ್ತರ ಕನ್ನಡ: ಸ್ವಿಮ್ಮಿಂಗ್ ಫೂಲ್ನಲ್ಲಿ ಈಜು ಕಲಿಯೋದನ್ನ ನೋಡಿದ್ದೀವಿ. ಆದ್ರಿಲ್ಲಿ ಕೆರೆಯಲ್ಲೇ ಸ್ವಿಮ್ ಮಾಡ್ತಿರೋ ಈ ಪುಟ್ಟ ಪುಟ್ಟ ಮಕ್ಕಳನ್ನ (Swimming Training To Children) ನೋಡಿ. ಅಗತ್ಯ ರಕ್ಷಣಾ ವಿಧಾನದ ಮೂಲಕ ಈಜಿನ ಜೊತೆ ಜೊತೆಗೆ ಯೋಗ, ಪ್ರಾಣಾಯಾಮ ಕಲಿಯುವ ಅವಕಾಶ. ಇಷ್ಟೆಲ್ಲ ಸವಲತ್ತು ಉಚಿತ ಅಂದ್ರೆ ನೀವ್ ನಂಬ್ಲೇಬೇಕು. ಅಷ್ಟಕ್ಕೂ ಸ್ವಚ್ಛಂದ ಕೆರೆಯಲ್ಲಿ (Swimming Pool) ಈಜಾಡೋ ಈ ಅವಕಾಶ ಮಕ್ಕಳಿಗೆ ಸಿಕ್ಕಿದಾದ್ರೂ ಎಲ್ಲಿ ಅಂತೀರ? ನೋಡಿ ಈ ಸ್ಟೋರೀಲಿ.
ಹೌದು, ಹೀಗೆ ಕೆರೆಯಲ್ಲಿ ಬಾತುಕೋಳಿಗಳಂತೆ ಈಜಾಡುತ್ತಿರೋ ಈ ಪುಟ್ಟ ಮಕ್ಕಳಿಗಂತೂ ರಜೆಯ ಮಜಾ ಕಳೆಯಲು ಒಳ್ಳೆಯ ಅವಕಾಶ. ಉತ್ತರ ಕನ್ನಡದ ಸಿದ್ದಾಪುರ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆ ವತಿಯಿಂದ ಪುಟ್ಟಪ್ಪನ ಕೆರೆಯಲ್ಲಿ ಖ್ಯಾತ ಈಜುಪಟು ಶ್ಯಾಮ್ ಸುಂದರ್ ಅವರಿಂದ ಈಜು ತರಬೇತಿಯನ್ನ ನೀಡುತ್ತಿದೆ. ಈಜು ಅಷ್ಟೇ ಅಲ್ದೇ ಯೋಗ, ಪ್ರಾಣಾಯಾಮ, ಈಜಿನ ವಿಧಗಳು ಹಾಗೂ ರಕ್ಷಣಾ ವಿಧಗಳನ್ನು ಕಲಿಸಿಕೊಡುತ್ತಿದ್ದಾರೆ.
ಇದನ್ನೂ ಓದಿ: Haigunda: ಹವ್ಯಕ ಬ್ರಾಹ್ಮಣರ ಮೂಲ ಈ ದ್ವೀಪ, ಇಲ್ಲಿ ಮನೆ ಕಟ್ಟೋಕೆ ಇಟ್ಟಿಗೆಯೇ ಬೇಡ!
ಉಚಿತ ತರಬೇತಿ
ಒಂದು ತಿಂಗಳ ಅವಧಿಯವರೆಗೆ ತರಬೇತಿ ನಡೆಯಲಿದ್ದು ಇದರಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವನ್ನು ನೀಡುತ್ತಿದೆ. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ 2 ಬ್ಯಾಚ್ಗಳಲ್ಲಿ ತರಬೇತಿ ನಡೆಯುತ್ತಿದೆ. ಈ ಉಚಿತ ತರಬೇತಿ ಪಡೆಯಲು 65 ಮಕ್ಕಳು ಪ್ರತಿದಿನವೂ ಆಗಮಿಸುತ್ತಾರೆ. ಮಕ್ಕಳಂತೂ ಬಿಸಿಲ ಧಗೆಯ ನಡುವೆ ಕೆರೆಯಲ್ಲಿ ಈಜುವುದನ್ನು ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ: Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ
ಪ್ರಕೃತಿ ಮಡಿಲಲ್ಲಿ ಈಜು ಕಲಿಯುತ್ತಾ ಭವಿಷ್ಯದ ಈಜುಗಾರನಾಗಲು ಮಕ್ಕಳು ಮುಂದಾಗಿದ್ದಾರೆ. ಒಟ್ಟಿನಲ್ಲಿ ರಜೆಯ ಮಜಾ ಕಳೆಯಲು ಮಕ್ಕಳಿಗೆ ಉತ್ತಮ ಅವಕಾಶದ ಜೊತೆಗೆ, ಈಜು ವಿದ್ಯೆ ಕಲಿಯುವ ಅವಕಾಶ ಒದಗಿ ಬಂದಿರುವುದು ಖುಷಿಯ ಸಂಗತಿಯೇ ಸರಿ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ