Uttara Kannada: ಶಾಲ್ಮಲೆಯ ನಡುಗಡ್ಡೆಯಲ್ಲಿ ಸಾಸಿವೆಯಷ್ಟು ಬೆಳೆಯುವ ಸಿದ್ಧಿ ವಿನಾಯಕ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವರ್ಷಕ್ಕೆ ಆರು ತಿಂಗಳಷ್ಟೇ ದರ್ಶನ ನೀಡೋ ಈ ಗಣಪ ಉಳಿದ ಆರು ತಿಂಗಳಲ್ಲಿ ಶಾಲ್ಮಲೆಯ ಮರೆಯಲ್ಲಿರುತ್ತಾನೆ.‌ ವಿಶೇಷ ಅಂದ್ರೆ ಈ ಗಣಪತಿ ಮೂರ್ತಿಯು ಸಾಸಿವೆಯಷ್ಟು ಬೆಳೆಯುತ್ತೆ ಅನ್ನೋ ನಂಬಿಕೆಯಿದೆ.

  • Share this:

ಉತ್ತರ ಕನ್ನಡ: ಅಲ್ಲಲ್ಲಿ ಚದುರಿಕೊಂಡಂತಿರುವ ಕಿರಿದಾದ ಬಂಡೆ ಕಲ್ಲುಗಳು, ಸಣ್ಣದಾಗಿ ಹರಿದು ಹೋಗ್ತಿರೋ ಜಲರಾಶಿ. ಮಧ್ಯೆ ನಡುಗುಡ್ಡೆಯಲ್ಲಿ (Shri Ganesh Pal Temple) ನೆಲೆಸಿರೋ ವಿಘ್ನ ವಿನಾಯಕನು. ಕೇವಲ ಆರು ತಿಂಗಳಷ್ಟೇ ದರ್ಶನ ನೀಡೋ ಇವನು (Ganapati Temple) ಭಕ್ತರ ಪಾಲಿನ ಸರ್ವ ಸಿದ್ಧಿ ಪ್ರದಾಯಕ!


ಸಾಸಿವೆಯಷ್ಟು ಬೆಳವಣಿಗೆ
ಯೆಸ್, ಇಂತಹದ್ದೊಂದು ಪುಟ್ಟದಾದ ನಡುಗಡ್ಡೆಯಲ್ಲಿರುವ ಗಣಪತಿ ದೇಗುಲ ಕಂಡು ಬರೋದು ಉತ್ತರ ಕನ್ನಡದ ಯಲ್ಲಾಪುರ ಹಾಗೂ ಶಿರಸಿಯನ್ನು ಸೀಳಿಕೊಂಡು ಕಣಿವೆಯನ್ನು ಮಾಡಿದ ಶಾಲ್ಮಲಾ ನದಿಯಲ್ಲಿ ಕಂಡುಬರುತ್ತೆ. ವರ್ಷಕ್ಕೆ ಆರು ತಿಂಗಳಷ್ಟೇ ದರ್ಶನ ನೀಡೋ ಈ ಗಣಪ ಉಳಿದ ಆರು ತಿಂಗಳಲ್ಲಿ ಶಾಲ್ಮಲೆಯ ಮರೆಯಲ್ಲಿರುತ್ತಾನೆ.‌ ವಿಶೇಷ ಅಂದ್ರೆ ಈ ಗಣಪತಿ ಮೂರ್ತಿಯು ಸಾಸಿವೆಯಷ್ಟು ಬೆಳೆಯುತ್ತೆ ಅನ್ನೋ ನಂಬಿಕೆಯಿದೆ.




ನದಿ ಮಧ್ಯೆಯೇ ಪ್ರತಿಷ್ಠಾಪನೆ
ಇಲ್ಲಿನ ಕಲ್ಲು ಒಂದನ್ನು ಹೆಗಡೆ ವಂಶಸ್ಥರಿಗೆ ಸ್ವಪ್ನ ದೃಷ್ಟಾಂತದಲ್ಲಿ ತಾನು ಗಣೇಶನೆಂದು ತನ್ನನ್ನು ಪೂಜಿಸಬೇಕೆಂದು 18ನೇ ಶತಮಾನದ ಆಸುಪಾಸಿನಲ್ಲಿ ಸ್ವಪ್ನ ದರ್ಶನವಾಯಿತು. ಆಗ ಮೂಲ ಹೆಗಡೆ ವಂಶಜರು ಇದನ್ನು ತೆಗೆದುಕೊಂಡು ಬರುವಾಗ ನದಿಯ ಮಧ್ಯದಲ್ಲಿ ವಿಗ್ರಹ ಭಾರವಾಗಿ ಗಣೇಶನ ಪ್ರತಿಷ್ಠಾಪನೆ ಅಲ್ಲೇ ಆಯಿತಂತೆ.




ಶಿವ ಸಾನಿಧ್ಯ
ಆಗಿನಿಂದ ಬೆಳೆಯುತ್ತಿರುವ ಗಣೇಶ ಈಗ ಈ ರೂಪದಲ್ಲಿದ್ದಾನೆ. ಆಶ್ಚರ್ಯವೆಂಬಂತೆ ಇಲ್ಲಿ ಲಿಂಗವೂ ಇದ್ದ ಶಿವನ ಸಾನಿಧ್ಯವಿದೆ. ಅಷ್ಟೇ ಅಲ್ಲದೇ, ಈ ದೇವಸ್ಥಾನದಿಂದ ಹತ್ತಿಪ್ಪತ್ತು ಮೀಟರ್ ದೂರದಲ್ಲಿ ಇಲಿಯನ್ನು ಹೋಲುವ ಕಲ್ಲೊಂದಿದ್ದು ಅದನ್ನು ದಾಟಿ ಸಾಗುವ ನೀರು ಎಷ್ಟೇ ರಭಸವಾಗಿದ್ದರೂ ದೇವಾಲಯಕ್ಕೆ ಕಿಂಚಿತ್ತೂ ಹಾನಿ ಮಾಡುವುದಿಲ್ಲವಂತೆ.




3 ಶತಮಾನಗಳ ಇತಿಹಾಸ
300 ವರ್ಷಗಳ ಇತಿಹಾಸ ವಿರುವ ಈ ದೇಗುಲದಲ್ಲಿ ವಿಶೇಷ ದಿನಗಳಂದು ಸಾವಿರಾರು ಭಕ್ತರು ಬರುತ್ತಾರೆ. ಅಲ್ಲದೇ, ಸತ್ಯಗಣಪತಿ ಕಥೆ, ಸಂಕಷ್ಟಹರ ವಿನಾಯಕ ವ್ರತ ಕಥೆಗಳು ನೂರಾರು ಸಂಖ್ಯೆಯಲ್ಲಿ ಹಾಗೂ ಗಣಹವನಗಳು ಬೆಳಿಗ್ಗೆಯಿಂದ ಶುರುವಾದರೆ ನಿರಂತರವಾಗಿ ನಡೆಯುತ್ತವೆ.


ಇದನ್ನೂ ಓದಿ: Uttara Kannada: ಈ ಅಕ್ಕಿ ಯಾವ ಸುಗಂಧ ದ್ರವ್ಯಕ್ಕೂ ಕಡಿಮೆಯಿಲ್ಲ, ಊರೆಲ್ಲ ಪರಿಮಳ ಸೂಸುತ್ತೆ!


ಹೀಗೆ ಬನ್ನಿ
ಇಲ್ಲಿಗೆ ಬರಬೇಕೆಂದ್ರೆ ಯಲ್ಲಾಪುರದಿಂದ ಶಿರಸಿಗೆ ಹೋಗುವ ಮಾರ್ಗದಲ್ಲಿ ಉಮ್ಮಚಗಿ ಎಂಬ ಊರು ಬರುತ್ತದೆ. ಅಲ್ಲಿಂದ ಮುಂದೆ ಹಿತ್ಲಳ್ಳಿ ಕ್ರಾಸ್ ಎಂಬ ರಸ್ತೆಯಲ್ಲಿ  ಹೋದರೆ ಶ್ರೀ ಕ್ಷೇತ್ರ ಗಣೇಶಪಾಲ್ ಎಂಬ ಹೆಸರು ಕಾಣಸಿಗುತ್ತದೆ.‌ ಅಲ್ಲಿಂದ 11 ಕಿಲೋಮೀಟರ್ ದಟ್ಟ ಅಡವಿಯಲ್ಲಿ ಪ್ರಯಾಣಿಸಿದರೆ ಈ ದೇಗುಲದ ದರ್ಶನವಾಗುತ್ತೆ.


ಇದನ್ನೂ ಓದಿ: Uttara Kannada: ದೇವರಿಗೇ ಚೆಂದದ ಮನೆ ಕಟ್ಟಿಸಿದ್ರು ನೋಡಿ ಭಕ್ತರು!

top videos


    ಚಿತ್ರೀಕರಣ ಸ್ಪಾಟ್!
    ಇಲ್ಲಿ ಹಲವಾರು ಕನ್ನಡ ಚಲನಚಿತ್ರಗಳ ಶೂಟಿಂಗ್ ಕೂಡ ಆಗಿವೆ. ಒಂದೊಳ್ಳೆ ಭಕ್ತಿ-ಪ್ರಕೃತಿಯ ಸನ್ನಿಧಿಯನ್ನು ಕಣ್ತುಂಬಿಕೊಳ್ಳಬೇಕೆಂದಿದ್ದಲ್ಲಿ ಖಂಡಿತಾ ನೀವಿಲ್ಲಿ ಬಂದು ಶ್ರೀ ಗಣೇಶನಿಗೆ ಕರ ಮುಗಿದು ನಿಲ್ಲಬಹುದು.

    First published: