• Home
 • »
 • News
 • »
 • uttara-kannada
 • »
 • Narasimha Devaru: ಸಮುದ್ರದ ನಡುವೆ ನರಸಿಂಹ ದೇವರು!

Narasimha Devaru: ಸಮುದ್ರದ ನಡುವೆ ನರಸಿಂಹ ದೇವರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜಾತ್ರೆ ಅಂದ್ರೆ ಒಂದೊಂದು ಕಡೆ, ಒಂದೊಂದು ವಿಶೇಷತೆ ಇರುತ್ತೆ. ಆದ್ರೆ ಈ ಜಾತ್ರೆ ಉಳಿದೆಲ್ಲಾ ಜಾತ್ರೆಗಿಂತ ತುಂಬಾ ಡಿಫರೆಂಟ್. ಯಾಕಂದ್ರೆ ಇದು ಸಮುದ್ರದ ಮಧ್ಯ ನಡೆಯೋ ಜಾತ್ರೆ!

 • Share this:

  ಕಾರವಾರ:  ಒಂದೆಡೆ ತಳಿರು ತೋರಣಗಳಿಂದ ಸಿಂಗಾರಗೊಂಡಿರುವ ಮೀನುಗಾರಿಕಾ ಬೋಟುಗಳು. ಇನ್ನೊಂದೆಡೆ ಸರತಿ ಸಾಲಿನಲ್ಲಿ ಬೋಟ್​ನಲ್ಲಿ ಹತ್ತುತ್ತಿರುವ ಭಕ್ತರು, ಇನ್ನೊಂದೆಡೆ ನಡುಗಡ್ಡೆಗೆ ತೆರಳಿ ಸರತಿ ಸಾಲಿನಲ್ಲಿ ಬಾಳೆಗೊನೆ ಹಿಡಿದು ದೇವರ ದರ್ಶನ (Narasimha God) ಪಡೆಯುತ್ತಿರುವ ಭಕ್ತರು. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಕಾರವಾರದ ಕೂರ್ಮಗಡ ಜಾತ್ರೆಯಲ್ಲಿ. ಮೀನುಗಾರರ ಆರಾಧ್ಯದೈವವಾದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ (Kurmagadda Jatre) ಅದ್ದೂರಿಯಾಗಿ ನಡೆಯಿತು.


  ಜಾತ್ರೆ ಅಂದ್ರೆ ಒಂದೊಂದು ಕಡೆ, ಒಂದೊಂದು ವಿಶೇಷತೆ ಇರುತ್ತೆ. ಆದ್ರೆ ಈ ಜಾತ್ರೆ ಉಳಿದೆಲ್ಲಾ ಜಾತ್ರೆಗಿಂತ ತುಂಬಾ ಡಿಫರೆಂಟ್. ಯಾಕಂದ್ರೆ ಇದು ಸಮುದ್ರದ ಮಧ್ಯ ನಡೆಯೋ ಜಾತ್ರೆ! ಬೋಟ್​ನಲ್ಲಿ ಮಾತ್ರ ಈ ಜಾತ್ರೆಗೆ ಹೋಗೋಕೆ ಸಾಧ್ಯ! ಅದರಲ್ಲೂ ವರ್ಷಕ್ಕೊಮ್ಮೆ ಮಾತ್ರ ಹೋಗೋದಿಕ್ಕೆ ಸಾಧ್ಯ. ಹಾಗಿದ್ರೆ ಯಾವುದು ಆ ಜಾತ್ರೆ, ಬನ್ನಿ ನೋಡ್ಕೊಂಡ್ ಬರೋಣ.


  ಎಲ್ಲಿದೆ ಈ ದ್ವೀಪ?
  ಕಾರವಾರದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಡ ಎನ್ನುವ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಪ್ರತಿವರ್ಷ ಜರುಗುತ್ತದೆ. ವರ್ಷಕ್ಕೊಮ್ಮೆ ಜರುಗುವ ಜಾತ್ರೆಗೆ ಕೇವಲ ಮೀನುಗಾರರಷ್ಟೇ ಅಲ್ಲದೇ ವಿವಿಧೆಡೆಗಳಿಂದಲೂ ಜನರು ಆಗಮಿಸಿದ್ರು. ಬೋಟಿನಲ್ಲಿ ಜಾತ್ರೆಗೆ ತೆರಳಿ ದೇವರ ದರ್ಶನ ಪಡೆದರು.  ಮೀನುಗಾರಿಕೆ ಇನ್ನೂ ಚೆನ್ನಾಗಿ ಆಗ್ಲಿ
  ಇನ್ನು ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆ ದಿನದಂದು ಕೂರ್ಮಗಡದ ನರಸಿಂಹ ದೇವರ ಜಾತ್ರೆ ನಡೆಯುತ್ತದೆ. ನರಸಿಂಹ ದೇವರಿಗೆ ಬಾಳೆಗೊನೆ ಸೇವೆ ನೀಡುವುದು ವಿಶೇಷವಾಗಿದೆ. ದೇವರಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಅಲ್ಲದೇ ಮೀನುಗಾರರು ಪ್ರತಿವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆ ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ತಾರೆ.


  ಇದನ್ನೂ ಓದಿ: Gavisiddeshwara Jatre Rathotsava: ದಕ್ಷಿಣ ಭಾರತದ ಮಹಾ ಕುಂಭಮೇಳದ ವೈಭವ!


  ಇತಿಹಾಸ 150 ವರ್ಷಗಳ ಹಿಂದೆ ಕರೆದೊಯ್ಯುತ್ತೆ!
  ಸುಮಾರು 150 ವರ್ಷಗಳ ಹಿಂದೆ ಹಿಮಾಲಯದಿಂದ ಬಂದ ಸಾಧುವೋರ್ವರು ಸಾಲಿಗ್ರಾಮ ತಂದು ಕಾರವಾರ ತಾಲೂಕಿನ ಕಡವಾಡ ಗ್ರಾಮದ ಮನೆಯವರಿಗೆ ನೀಡಿ ಕಾಳಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ಸಂಗಮದಲ್ಲಿ ಇಟ್ಟು ಪೂಜೆ ಮಾಡಬೇಕು ಎಂದು ಹೇಳಿದ್ದರಂತೆ. ಅದರಂತೆ ಪ್ರತಿ ವರ್ಷ ಕಾಳಿ ಸಂಗಮ ಸಮೀಪ ಇರುವ ಕೂರ್ಮಗಡ ನಡುಗಡ್ಡೆಗೆ ದೇವರನ್ನ ತಂದು ಪೂಜೆ ನಡೆಸಲಾಗುತ್ತದೆ ಎನ್ನಲಾಗುತ್ತೆ.


  Shree Narasimha Devara Temple
  ದೇಗುಲಕ್ಕೆ ಹೀಗೆ ಬರಬಹುದು (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಇದನ್ನೂ ಓದಿ: Uttara Kannada: ಕರಾವಳಿ ಕೃಷಿಕರೇ ಇಲ್ನೋಡಿ, ಆ್ಯಪಲ್ ಬೇರ್​ ಬೆಳೆಸಿ ಭಾರೀ ಲಾಭ ಗಳಿಸಿ!


  ಒಟ್ಟಿನಲ್ಲಿ ವರ್ಷಕ್ಕೊಮ್ಮೆ ನಡುಗಡ್ಡೆಯಲ್ಲಿ ನಡೆಯುವ ಕೂರ್ಮಗಡ ಜಾತ್ರೆ ಈ ಬಾರಿ ಸಹ ಅದ್ದೂರಿಯಾಗಿ ನಡೆಯಿತು. ಸಮುದ್ರಯಾನದ ಜೊತೆಗೆ ದೇವರ ದರ್ಶನ ಪಡೆಯೋ ಆಸೆ ಇದ್ದರೆ ಮುಂದಿನ ಬಾರಿ ನೀವು ಈ ಜಾತ್ರೆಗೆ ತಪ್ಪದೇ ಬನ್ನಿ.


  ವರದಿ: ದೇವರಾಜ್ ನಾಯ್ಕ್, ಕಾರವಾರ

  Published by:ಗುರುಗಣೇಶ ಡಬ್ಗುಳಿ
  First published: