• Home
 • »
 • News
 • »
 • uttara-kannada
 • »
 • Dharavati Ranga Temple: ಈ ದೇಗುಲದಲ್ಲಿ ಚಪ್ಪಲಿಯಲ್ಲಿ ಹೊಡೆದುಕೊಂಡ್ರೆ ಒಳ್ಳೇದಾಗುತ್ತಂತೆ!

Dharavati Ranga Temple: ಈ ದೇಗುಲದಲ್ಲಿ ಚಪ್ಪಲಿಯಲ್ಲಿ ಹೊಡೆದುಕೊಂಡ್ರೆ ಒಳ್ಳೇದಾಗುತ್ತಂತೆ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಪ್ರತಿ ಶನಿವಾರ ಸಾವಿರಾರು ಭಕ್ತರು ಚಂಬಳಿಗೆ ಅರ್ಥಾತ್ ಚಪ್ಪಲಿಯಿಂದ ಮೈ, ಕೈ, ತಲೆ ಮುಖವನ್ನು ಹೊಡೆದುಕೊಳ್ತಾರೆ.

 • News18 Kannada
 • Last Updated :
 • Hubli-Dharwad (Hubli), India
 • Share this:

  ಅರೆರೆ! ಇದೇನ್ ಹೀಗೆ ದೇವಸ್ಥಾನದ ಒಳಗೂ ಚಪ್ಪಲಿ ಧರಿಸಿ ಹೋಗ್ತಿದಾರೆ? ಅದೇ ಚಪ್ಪಲಿ ತಗೊಂಡು ತಮಗೆ ತಾವೇ ಹೊಡ್ಕೋತಿದ್ದಾರೆ! ಇದೆಂಥಾ ವಿಚಿತ್ರ ಅಂದ್ಕೊಂಡ್ರಾ? ಇದು ಹುಬ್ಬಳ್ಳಿಯ ದೇವಸ್ಥಾನವೊಂದ್ರಲ್ಲಿ (Hubballi Temple) ಕಂಡುಬರೋ ಆಚರಣೆ. ಒಂಥರಾ ವಿಶೇಷ ಭಕ್ತಿ ಪರಾಕಾಷ್ಟೆ ಮೆರೆಯೋ ಸಂಪ್ರದಾಯ. ನಿಜ, ಹೀಗೆ ಹುಬ್ಬಳ್ಳಿಯ (Hubblli News) ಧಾರಾವತಿ ರಂಗನ ಸನ್ನಿಧಾನದಲ್ಲಿ (Hubballi Dharavati Ranga Temple)  ಚಪ್ಪಲಿ ತಗೊಂಡು ಹೊಡೆಸಿಕೊಳ್ಳೋಂಡ್ರೆ ಒಳ್ಳೆದಾಗುತ್ತೆ ಅನ್ನೋ ನಂಬಿಕೆ ಹೊಂದಿದ್ದಾರೆ. ಸುಮಾರು 800 ವರ್ಷಗಳ ಹಿಂದೆ ವ್ಯಾಸರಾಜರಿಂದ ಧಾರಾವತಿ ರಂಗನ ಪ್ರತಿಷ್ಠಾಪನೆ ಆಯಿತು ಅನ್ನೋ ನಂಬಿಕೆಯಿದೆ.


  ಈ ದೇಗುಲದ ಹನುಮನಿಗೆ ಚಮ್ಮಾರರು ಚಪ್ಪಲಿ ಅರ್ಪಣೆ ಮಾಡ್ತಾರೆ. ಭಕ್ತಾದಿಗಳು ಆ ಚಪ್ಪಲಿಗೆ ನಮಸ್ಕರಿಸಿ ತಮ್ಮ ದೇಹದ ಭಾಗಗಳಿಗೆ ಅದರಿಂದ ಹೊಡೆದುಕೊಂಡು ಭಕ್ತಿ ಮೆರೆಯುತ್ತಾರೆ.


  ಯಾಕೆ ಚಪ್ಪಲಿಯಲ್ಲಿ ಹೊಡೆದುಕೊಳ್ತಾರೆ?
  ಅಷ್ಟಕ್ಕೂ ಹೀಗೆ ಚಪ್ಪಲಿಯಲಿ ಹೊಡೆದುಕೊಳ್ಳೋದು ಯಾಕೆ ಅಂತ ಕೇಳಿದ್ರಾ? ಹೀಗೆ ಮಾಡುವುದರಿಂದ ಶರೀರದ ನೋವು ಮಾಯವಾಗುತ್ತದೆ ಅನ್ನೋದು ಭಕ್ತರ ನಂಬಿಕೆ.


  ಇದನ್ನೂ ಓದಿ:Kanaka Jayanthi: ಕನಕದಾಸರು ಹುಟ್ಟಿ ಬೆಳೆದ ನೆಲ ಈಗ ಹೀಗಿದೆ ನೋಡಿ!


  ಪ್ರತಿ ಶನಿವಾರ ಈ ಸೇವೆ
  ಪ್ರತಿ ಶನಿವಾರ ಸಾವಿರಾರು ಭಕ್ತರು ಚಂಬಳಿಗೆ ಅರ್ಥಾತ್ ಚಪ್ಪಲಿಯಿಂದ ಮೈ, ಕೈ, ತಲೆ ಮುಖವನ್ನು ಹೊಡೆದುಕೊಳ್ತಾರೆ. ಇಲ್ಲಿರೋ‌ ನಂದಿ ಗರ್ಭಗುಡಿಯಲ್ಲಿ ದೇವರಿಗೆ ಉದ್ದಂಡ ನಮಸ್ಕಾರ ಮಾಡುತ್ತದೆ. ಭಕ್ತರಿಗೆ ತನ್ನ ಕಾಲು ಚಾಚಿ ಆಶೀರ್ವಾದವನ್ನೂ ದಯಪಾಲಿಸುತ್ತೆ!


  ಇದನ್ನೂ ಓದಿ: Apsarakonda: ಇಲ್ಲೇ ಅಪ್ಸರೆಯರು ಸ್ನಾನ ಮಾಡ್ತಾರಂತೆ! ಉತ್ತರ ಕನ್ನಡದ ಬೊಂಬಾಟ್ ಅಪ್ಸರಕೊಂಡ


  ಒಟ್ಟಿನಲ್ಲಿ ಹತ್ತು ಹಲವು ವೈಶಿಷ್ಟ್ಯ ಹೊಂದಿರೋ ದೇಗುಲವಾಗಿ ಧಾರಾವತಿ ರಂಗನ‌ಕ್ಷೇತ್ರ ಫೇಮಸ್ ಆಗಿದೆ. ಹೀಗಾಗಿ ಈ ಕ್ಷೇತ್ರ ಎಷ್ಟು ಶಾಂತವಾಗಿದೆಯೋ ಅಷ್ಟೇ ಕುತೂಹಲಕಾರಿ, ವಿಸ್ಮಯಕಾರಿ ಅಂತಾರೆ ಇಲ್ಲಿಗೆ ಆಗಮಿಸೋ ಭಕ್ತರು.‌ ನೀವೂ ಇತ್ತ ಬಂದಾಗ ಒಮ್ಮೆ ದರ್ಶನ ಪಡೆಯೋಕೆ ಮರೆಯಬೇಡಿ ಆಯ್ತಾ?


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: