• Home
  • »
  • News
  • »
  • uttara-kannada
  • »
  • Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!

Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!

ಇಲ್ಲಿ ನೋಡಿ ಮದುವೆ ವಿಡಿಯೋ

"ಇಲ್ಲಿ ನೋಡಿ ಮದುವೆ ವಿಡಿಯೋ"

ಪಲ್ಲಕ್ಕಿಯಲ್ಲಿ ಗಂಗಾವಳಿಯು ಸಮುದ್ರಕ್ಕೆ ಸೇರುವ ಸ್ಥಳಕ್ಕೆ ಮಹಾಬಲೇಶ್ವರನನ್ನು ವೇದಮಂತ್ರಘೋಷಗಳು ಹಾಗೂ ಗುಮ್ಮಟೆ ಪಾಂಗಿನ ಭಜನೆಯೊಂದಿಗೆ ಕರೆದೊಯ್ದರು!

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಗೋಕರ್ಣದ ಕಡಲ ತಟವೇ (Gokarna Beach) ಮಂಟಪವಂತೆ. ಕಪಿಲೆಯ ದಡದಲ್ಲಿ ಧಾರೆಯಂತೆ. ಗೋಧೂಳಿ ಮುಹೂರ್ತದಲ್ಲಿ ವಿವಾಹವಂತೆ. ಅರೆರೆ! ಇದು ಗಂಗೆ ಹಾಗೂ ಶಿವನ ಕಲ್ಯಾಣವಂತೆ. ಜನವೋ ಜನ. ಕಡಲ ತೀರದಲ್ಲಿ ಎಲ್ಲಿ ನೋಡಿದ್ರಲ್ಲಿ ಜನಸಾಗರ. ಇದು ಗಂಗೆ ಹಾಗೂ ಶಿವನ ವಿವಾಹ ಸಂಭ್ರಮ (Shiv Ganga Kalyan) ಕಣ್ತುಂಬಿಕೊಳ್ಳಲು ನೆರೆದಿರೋ ಜನಸ್ತೋಮ. ಈ ಎಲ್ಲ ವಿಶಿಷ್ಟ ಸಂಭ್ರಮಕ್ಕೆ ವೇದಿಕೆಯೇ (Shiv Ganga Marraige) ಗೋಕರ್ಣ ಕ್ಷೇತ್ರ. ಇಲ್ಲಿನ ಸ್ಥಳೀಯ ಪುರಾಣ ಪ್ರಕಾರವೇ ಈ ಹಬ್ಬ ನಡೆಯುತ್ತೆ.


    ಪ್ರತಿ ಗಂಗಾಷ್ಟಮಿಯಂದು ಶಿವನಿಗೂ ಗಂಗೆಗೂ ನಿಶ್ಚಿತಾರ್ಥವಾದರೆ ಆಶ್ವೀಜ ಮಾಸದ ಕೃಷ್ಣ ಮಾಸದ ಚತುರ್ದಶಿಯಂದು ಗಂಗೆ-ಶಿವನ ವಿವಾಹವು ಗಂಗಾವಳಿ ಗೋಕರ್ಣ ಕಡಲತೀರ ಸೇರುವ ಕಪಿಲಾ ನದಿ ದಡದಲ್ಲಿ ನೆರವೇರುತ್ತದೆ. ವಧುವಿನ ಕಡೆಯಿಂದ ಅಂಬಿಗರು ಇದ್ದರೆ, ವರನ ಕಡೆಯಿಂದ ಹಾಲಕ್ಕಿ ಗೌಡರು ಬರುವುದೇ ವಿಶೇಷ.. ಹೀಗೆ ವಧು ವರರ ಕಡೆಯವರ ಮುಖಾಮುಖಿಯಾಗುವ ಸಮಯದಲ್ಲಂತೂ ಇಡೀ ಕಡಲತಡಿ ಗೌಜಿ ಗದ್ದಲದ ತಾಣವಾಗಿತ್ತು.


    ಗಂಗಾಷ್ಟಮಿ ವೈಶಿಷ್ಟ್ಯ
    ಇನ್ನು ಗೋಧೂಳಿ ಮುಹೂರ್ತದಲ್ಲಿ ಗಂಗೆ ಶಿವನ ಕಲ್ಯಾಣ ಸಾವಿರಾರು ಭಕ್ತರು ನಡುವೆ ನಡೆಯುತ್ತದೆ. ಗಂಗಾವಳಿಯ ತೀರ್ಥೋದ್ಭವವನ್ನು ಇಲ್ಲಿ ಗಂಗಾಷ್ಟಮಿ ಅಂತಾನೇ ಕರೀತಾರೆ. ನರಕ ಚತುರ್ದಶಿಯಂದು ಗಂಗೆಯು ಶಿವನನ್ನು ಸೇರುವ ದಿನ ಅನ್ನೋ ನಂಬಿಕೆಯಿದೆ. ಇಂತಹ ಆಚರಣೆಗೂ ಈ ನೆಲದ ಕಥೆಯೊಂದು ಪ್ರೇರಣೆಯಾಗಿದೆ.


    ಈ ಕಥೆ ತುಂಬಾ ರೋಚಕ
    ಗೋಕರ್ಣ ಸೀಮೆಯ ಮಾಸ್ಕೇರಿಯಲ್ಲಿ ನೆಲೆಸಿರುವ ಬೆಸ್ತರ ಕನ್ಯೆ ಗಂಗೆಯ ಚೆಲುವಿಗೆ ಶಿವನು ಮಾರು ಹೋಗಿ ಗೌರಿಯು ನಿದ್ರಿಸುತ್ತಿದ್ದಾಗ ಮಾರುವೇಷದಲ್ಲಿ ಹೋಗಿ ಗಂಗೆಯ ಬಳಿ ಪ್ರೇಮ ನಿವೇದಿಸಿಕೊಳ್ಳುತ್ತಾನೆ. ಮೊದಲಿಗೆ ಒಪ್ಪದಿದ್ದಾಗ ಆಕೆಗೆ, ತಾನು ಮಹಾಬಲೇಶ್ವರ ಎಂದು ಮನವರಿಕೆ ಮಾಡಿದಾಗ ಮನೆಯ ಕದ ತೆರೆದು ಶಿವನನ್ನು ವರಿಸಿದಳು. ಆ ನೆನಪಲ್ಲೇ ಇವತ್ತಿಗೂ ಇಂತಹ ಆಚರಣೆಗೆ ಗೋಕರ್ಣ ಬೀಚ್ ಸಾಕ್ಷಿಯಾಯ್ತು.


    ಇದನ್ನೂ ಓದಿ: Uttara Kannada: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ


    ವೇದಮಂತ್ರಘೋಷಗಳು ಹಾಗೂ ಗುಮ್ಮಟೆ ಪಾಂಗಿನ ಭಜನೆ ಜೊತೆಜೊತೆಗೆ!
    ಪಲ್ಲಕ್ಕಿಯಲ್ಲಿ ಗಂಗಾವಳಿಯು ಸಮುದ್ರಕ್ಕೆ ಸೇರುವ ಸ್ಥಳಕ್ಕೆ ಮಹಾಬಲೇಶ್ವರನನ್ನು ವೇದಮಂತ್ರಘೋಷಗಳು ಹಾಗೂ ಗುಮ್ಮಟೆ ಪಾಂಗಿನ ಭಜನೆಯೊಂದಿಗೆ ಕರೆದೊಯ್ದರು. ಅಲ್ಲಿ ಮಾವಿನ ತೋರಣದಿಂದ ಆದ ಮಂಟಪದಲ್ಲಿ ಗಂಗೆಯನ್ನು ಪ್ರತಿಷ್ಠಾಪಿಸಿದ್ದರು.


    ಇದನ್ನೂ ಓದಿ: Sabarimala Temple: ಉತ್ತರ ಕನ್ನಡದ ಶಬರಿಮಲೆ! ಇದು ಅಯ್ಯಪ್ಪ ಭಕ್ತರ ಮೆಚ್ಚಿನ ತಾಣ


    ತೋರಣದ ಎಲೆಯೇ ಪ್ರಸಾದ!
    ನಂತರ ಈ ಮದುವೆಗೆ ಸಾಕ್ಷಿಯಾಗಿ ತೋರಣದ ಎಲೆಗಳನ್ನು ಪ್ರಸಾದವಾಗಿ ತೆಗೆದುಕೊಂಡು ಹೋದರು. ಹೀಗೆ ಇಡೀ ಗೋಕರ್ಣಕ್ಕೆ ಗೋಕರ್ಣವೇ ಕಲ್ಯಾಣ ಮಂಟಪದಂತೆ ಕಂಗೊಳಿಸುತ್ತಾ ಶಿವ-ಗಂಗೆಯರ ವಿವಾಹ ಸಮಾರಂಭವನ್ನು ಕಣ್ತುಂಬಿಸಿಕೊಂಡಿತು.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: