• Home
  • »
  • News
  • »
  • uttara-kannada
  • »
  • Egg Rice Recipe: ಭಾರೀ ಫೇಮಸ್ ಈ ಶಂಕ್ರಣ್ಣನ ಎಗ್ ರೈಸ್! ರುಚಿರುಚಿ ರೆಸಿಪಿ ಇಲ್ಲಿದೆ ನೋಡಿ

Egg Rice Recipe: ಭಾರೀ ಫೇಮಸ್ ಈ ಶಂಕ್ರಣ್ಣನ ಎಗ್ ರೈಸ್! ರುಚಿರುಚಿ ರೆಸಿಪಿ ಇಲ್ಲಿದೆ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹಿರಿಯರಿಂದ ಹಿಡಿದು ಕಿರಿಯರ ತನಕ ಎಲ್ಲರಿಗೂ ಈ ಶಂಕ್ರಣ್ಣ ಎಗ್ ರೈಸ್ ಅಂದ್ರೆ ಬಲು ಇಷ್ಟ. ಹಾಗಾದ್ರೆ ಹೇಗಿರುತ್ತೆ ಇಲ್ಲಿಯ ಎಗ್ ರೈಸ್? ಬನ್ನಿ, ನೀವೇ ರುಚಿ ಸವಿದು ನೋಡಿ

  • News18 Kannada
  • 2-MIN READ
  • Last Updated :
  • Sirsi, India
  • Share this:

    ಶಿರಸಿ: ಘಮ್ಮನೆ ಮೂಗಿಗೆ ಬಡಿಯುವ ಸುವಾಸನೆ, ಅತ್ತ ಇಣುಕಿ ನೋಡಿದರೆ ರೇಶನ್​ಗೆ ಕ್ಯೂ ನಿಂತಂತೆ ಕಾಣೋ ಜನರು.  ಇದುವೇ ನೋಡಿ ಉತ್ತರ ಕನ್ನಡದ (Uttara Kannada Foods) ಬಲು ಫೇಮಸ್ ಎಗ್ ರೈಸ್ ಅಂಗಡಿ. ಹೌದು, ಇಲ್ಲಿ ರುಚಿ ರುಚಿಯಾದ ಎಗ್ ರೈಸ್ (Egg Rice Centre Sirsi) ತಯಾರಾಗ್ಬೇಕಾದ್ರೆ ಅದನ್ನ ಬಿಟ್ಟು ಮುಂದೆ ಹೋಗೋ ಮನಸಾದ್ರೂ ಯಾರ್ ಮಾಡ್ತಾರೆ ಹೇಳಿ.


    ಯೆಸ್, ಉತ್ತರ ಕನ್ನಡದ ಶಿರಸಿಯಲ್ಲಿ ಸಣ್ಣ ಕ್ಯಾಂಟೀನ್ ಇಟ್ಕೊಂಡಿರುವ ಶಂಕ್ರಣ್ಣ, ತಾನು ಮಾಡೋ ಎಗ್ ರೈಸ್​ನಿಂದ ಬಲು ಫೇಮಸ್ ಆಗಿದ್ದಾರೆ. ಶಿರಸಿಯ ಸಮ್ಮಸಗಿಯ ಶಂಕ್ರಣ್ಣ 15 ವರ್ಷಗಳಿಂದ ಎಗ್ ರೈಸ್ ಮಾಡೋದರಲ್ಲಿ ಎತ್ತಿದ ಕೈ.


    15 ವರ್ಷಗಳಿಂದ ಇವ್ರನ್ನ ಮೀರಿಸೋರೇ ಇಲ್ಲ
    ಸಣ್ಣದಾದ ಅಂಗಡಿ ಆದ್ರೂ ಇಂದಿಗೂ ಇಲ್ಲಿ ತಯಾರಿಸೋ ಎಗ್ ರೈಸ್ ರುಚಿ ಬೇರೆಲ್ಲೂ ಕಾಣಸಿಗದು. ಹದಿನೈದು ವರ್ಷದ ಹಿಂದೆ ಹೇಗಿತ್ತೋ ಅದೇ ಟೇಸ್ಟಿ ಇಂದಿಗೂ ಉಳಿಸಿಕೊಂಡು ಬರುವಲ್ಲಿ ಶಂಕ್ರಣ್ಣ ಯಶಸ್ವಿಯಾಗಿದ್ದಾರೆ. ಸದಾ ಬಿಸಿ ಬಿಸಿ ಎಗ್ ರೈಸ್ ಜೊತೆಗೆ ಶಂಕ್ರಣ್ಣನೂ ಗ್ರಾಹಕರನ್ನ ಅಟೆಂಡ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಾರೆ.




    ಇಲ್ಲಿದೆ ನೋಡಿ ಎಗ್ ರೈಸ್ ರೆಸಿಪಿ
    ಶಂಕ್ರಣ್ಣ ತಾವೇ ಮನೆಯಲ್ಲೇ ಮಾಡಿದ ಶುಂಠಿ ಮಸಾಲೆ, ಖಾರಮಸಾಲೆ ಹಾಗೂ ಎಣ್ಣೆ ಮತ್ತು ಅರಿಶಿನದ ಅನ್ನ ಹಾಕಿ, ಯಾವುದೇ ಸಾಸ್ ಅಥವಾ ಟೇಸ್ಟಿಂಗ್ ಪೌಡರನ್ನು ಸೋಕಿಸದೇ ಪಕ್ಕಾ ಲೋಕಲ್ ಮಾದರಿಯಲ್ಲಿ ಎಗ್ ರೈಸ್ ತಯಾರಿಸುತ್ತಾರೆ.


    ಇದನ್ನೂ ಓದಿ: Uttara Kannada: 10 ಸಾವಿರದಲ್ಲೇ ರೋಪ್ ವೇ ನಿರ್ಮಿಸಿದ ಕೃಷಿಕ!


    ಹಿರಿಯರಿಂದ ಹಿಡಿದು ಕಿರಿಯರ ತನಕ ಎಲ್ಲರಿಗೂ ಈ ಶಂಕ್ರಣ್ಣ ಎಗ್ ರೈಸ್ ಅಂದ್ರೆ ಬಲು ಇಷ್ಟ. 15 ವರ್ಷಗಳಿಂದೀಚೆಗೆ ಹಲವು ಎಗ್ ರೈಸ್ ಅಂಗಡಿಗಳು ಇಲ್ಲಿ ತಲೆ ಎತ್ತಿವೆಯಾದ್ರೂ ಅದ್ಯಾವುದೂ ಹಳೇ ಬಸ್ ಸ್ಟ್ಯಾಂಡ್ ಎದುರಿಗೆ ಇರೋ ಶಂಕ್ರಣ್ಣ ಎಗ್ ರೈಸ್ ಅಂಗಡಿಗೆ ಸವಾಲಾಗಿದ್ದೇ ಇಲ್ಲ.


    ಇದನ್ನೂ ಓದಿ: Uttara Kannada: ನೀವು ಕಂಡು ಕೇಳಿರದ ಗಡ್ಡೆ ಗೆಣಸುಗಳು ಇಲ್ಲಿವೆ ನೋಡಿ!


    ಯಾವ ಟೈಮ್​ನಲ್ಲಿ ಸಿಗುತ್ತೆ?
    ಬೆಳಿಗ್ಗೆ 9:೦೦ ರಿಂದ ಶುರುವಾಗುವ ಎಗ್ ರೈಸ್ ಅಂಗಡಿ ರಾತ್ರಿ 10 ಗಂಟೆಯವರೆಗೆ ಓಪನ್ ಇರುತ್ತೆ.  ಕೋವಿಡ್ ಟೈಮ್ ಬಿಟ್ಟರೆ ಶಂಕ್ರಣ್ಣನ ಅಂಗಡಿ ಗ್ರಾಹಕರನ್ನು ಕಾಣದ ದಿನಗಳಿಲ್ಲ. ಕೇವಲ 50 ರೂಪಾಯಿಗೆ ಹೊಟ್ಟೆ ತುಂಬಾ ಎಗ್ ರೈಸ್ ತಿನ್ನಬಹುದಾಗಿದೆ. ಒಟ್ಟಿನಲ್ಲಿ ಕ್ವಾಲಿಟಿ, ಕ್ವಾಂಟಿಟಿ ಎರಡರಲ್ಲೂ ಕಾಂಪ್ರಮೈಸ್ ಆಗದ ಶಂಕ್ರಣ್ಣ ಎಗ್ ರೈಸ್ ಸೂಪರೋ ಸೂಪರ್.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: