Shankara Honda: ಸರ್ಕಾರದ ಅನುದಾನವಿಲ್ಲದೇ ಸುಂದರವಾಯ್ತು ಶಿರಸಿಯ ಶಂಕರ ಹೊಂಡ!

ಇಲ್ಲಿ ವಿಡಿಯೋ ನೋಡಿ

ಇಲ್ಲಿ ವಿಡಿಯೋ ನೋಡಿ

ಸೂಕ್ತ ನಿರ್ವಹಣೆ, ಅಚ್ಚುಕಟ್ಟಾದ ವ್ಯವಸ್ಥೆಯಿಲ್ಲದೇ ಅಘನಾಶಿನಿ ಉಗಮತಾಣ‌ ಅನ್ನೋದು ಯಾವುದಕ್ಕೂ ಪ್ರಯೋಜನ ಇಲ್ಲ ಅನ್ನೋ ಹಾಗಿತ್ತು. ಆದರೆ ಈಗ ಶಂಕರ ಹೊಂಡದ ಕಥೆಯೇ ಬದಲಾಗಿದೆ.

  • News18 Kannada
  • 5-MIN READ
  • Last Updated :
  • Sirsi, India
  • Share this:

ಉತ್ತರ ಕನ್ನಡ: ಕೊಳದ ಸುತ್ತಲೂ ವಾಕಿಂಗ್, ಜಾಗಿಂಗ್​ನಲ್ಲಿ ನಿರತರಾದ ಹಿರಿಯರು. ಆಟವಾಡ್ತಾ ಕಸರತ್ತು ನಡೆಸುತ್ತಿರೋ ಮಕ್ಕಳು. ಚೆಂದದ ಗಾರ್ಡನ್ನು, ಅದ್ರ ಮಧ್ಯೆ ಸುಂದರವಾದ ವಾಕಿಂಗ್ ಪಾಥ್. ಸರ್ಕಾರದ ನಯಾ ಪೈಸೆ ಅನುದಾನ ಇಲ್ದೇ ಹಚ್ಚ ಹಸಿರಿನಿಂದ, ಸ್ವಚ್ಛವಾದ ವಾತಾವರಣದಿಂದ ಕೂಡಿರೋ ಈ ಸ್ಥಳ (Shankara Honda Sirsi) ಯಾವುದು ಅಂತೀರಾ? ಈ ಸ್ಟೋರಿ ನೋಡಿ.


ನಿರ್ಲಕ್ಷ್ಯಕ್ಕೆ ಒಳಗಾಗಿತ್ತು!
ಹೌದು, ಇಷ್ಟೊಂದು ಸುಂದರವಾದ ಗಾರ್ಡನ್ ಇರೋದು ಅಘನಾಶಿನಿಯ ಉಗಮತಾಣದಲ್ಲಿ. ಉತ್ತರ ಕನ್ನಡದ ಶಿರಸಿಯಲ್ಲಿರುವ ಈ ಶಂಕರ ಹೊಂಡವೇ ಜಿಲ್ಲೆಯ ಅರ್ಧ ಜೀವನದಿಯೂ ಆದ ಅಘನಾಶಿನಿಯ ಜನ್ಮಸ್ಥಳ.




ಹಾಗಂತ ಈ ಶಂಕರ ಹೊಂಡವೇನೋ ಭಾರೀ ಅಂದ ಚೆಂದದಿಂದ ಕೂಡಿರಲಿಲ್ಲ. ಸೂಕ್ತ ನಿರ್ವಹಣೆ, ಅಚ್ಚುಕಟ್ಟಾದ ವ್ಯವಸ್ಥೆಯಿಲ್ಲದೇ ಅಘನಾಶಿನಿ ಉಗಮತಾಣ‌ ಅನ್ನೋದು ಯಾವುದಕ್ಕೂ ಪ್ರಯೋಜನ ಇಲ್ಲ ಅನ್ನೋ ಹಾಗಿತ್ತು. ಆದರೆ ಈಗ ಶಂಕರ ಹೊಂಡದ ಕಥೆಯೇ ಬದಲಾಗಿದೆ.


ಇದನ್ನೂ ಓದಿ: Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ


ಸರಕಾರದ ಅನುದಾನವಿಲ್ಲದೇ ನಿರ್ಮಾಣ
ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್, ಮೀನು ಸಾಕಾಣಿಕೆ ಹೀಗೆ ಶ್ರೀನಿವಾಸ ಹೆಬ್ಬಾರ್ ಎಂಬುವವರ ಜೀವಜಲ ಕಾರ್ಯಪಡೆ, ರೋಟರಿ, ಲಯನ್ಸ್ ಕ್ಲಬ್ ಸೇರಿದಂತೆ ಹಲವು ಯುವಕರಿಂದ ಶಂಕರ ಹೊಂಡ ಹೀಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ವಿಶೇಷ ಅಂದ್ರೆ ಇದ್ಯಾವುದಕ್ಕೂ ಸರಕಾರದಿಂದ ಅನುದಾನ‌ ಪಡೆಯದೇ, ಇದೆಲ್ಲವನ್ನೂ ಮಾಡಿ ಮುಗಿಸಲಾಗಿದೆ. ಊರಿನ ಜನರೇ ಮುಂದೆ ನಿಂತು ಇದನ್ನು ನಿರ್ವಹಿಸುತ್ತಿದ್ದು, ಅತ್ಯಂತ ಸ್ವಚ್ಛತೆಯ ಪರಿಸರವನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ.




ಗೌರಿ ಮೀನುಗಳ ಹಿಂಡು!
ಬೆಳಿಗ್ಗೆ 7.30 ರಿಂದ 10.00 ಹಾಗೂ ಸಂಜೆ 5.30 ರಿಂದ 7.30 ರವರೆಗೆ ಈ ಜಾಗ ಸಾರ್ವಜನಿಕರಿಗೆ ತೆರೆದಿರುತ್ತದೆ. ಜೊತೆಗೆ ಇಲ್ಲಿ ಗೌರಿ ಮೀನುಗಳ ಹಿಂಡುಗಳಿದ್ದು, ತಿಂಡಿ ಹಾಕಿದ್ರೆ ಹಾಜರಾಗುತ್ತೆ.


ಇದನ್ನೂ ಓದಿ: Swarnavalli Mutt: ಇಲ್ಲಿ ಏನೇ ಸಂಭ್ರಮ-ಸಡಗರ ನಡೆದ್ರೂ ಕೃಷಿಕರಿಗೇ ಮೀಸಲು! ಎಂತೆಂಥಾ ಸ್ಪರ್ಧೆ ಇತ್ತು ನೋಡಿ!


ಚಿಕ್ಕವರಿಂದ ಹಿಡಿದು 50 ವಯಸ್ಸಿನವರೂ ಓಪನ್ ಜಿಮ್ ಅಲ್ಲಿ ದೇಹ ದಂಡಿಸುತ್ತಾರೆ. ಶಿರಸಿ ಬಸ್ ಸ್ಟ್ಯಾಂಡ್​ನಿಂದ ಕೇವಲ 1 ಕಿಲೋಮೀಟರ್ ದೂರದಲ್ಲಷ್ಟೇ ಇರುವ ಈ ಶಂಕರ ಹೊಂಡ ಈಗಂತೂ ವಾಯುವಿಹಾರಕ್ಕೆ ಹೇಳಿಟ್ಟ ಜಾಗದಂತಿದೆ.

top videos
    First published: