ಒಂದ್ಕಡೆ ಬೋಟುಗಳನ್ನೇರಿ ಸಾಗ್ತಿರೋ ಜನರು, ಮತ್ತೊಂದ್ಕಡೆ ರಾಶಿ ರಾಶಿ ಗುಂಪಾಗಿ ಸ್ವಚ್ಛಂದವಾಗಿ ಈಜಾಡುತ್ತಿರೋ ಮೀನುಗಳು, ಅಂದಹಾಗೆ ಈ ಮೀನುಗಳ ರಾಶಿಗೂ, ಈ ಜನರಿಗೂ ಏನು ಸಂಬಂಧ ಅಂದ್ಕೊಂಡ್ರಾ? ಇಷ್ಟೆಲ್ಲ ಜನರು ಬೋಟಲ್ಲಿ ಹೋಗ್ತಿರೋದು ರಾಶಿ ರಾಶಿ ಮೀನು (Fish) ನೋಡೋಕೆ! ಹೌದು, ಇದು ವಿಶ್ವವಿಖ್ಯಾತ ಮುರ್ಡೇಶ್ವರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರೋ ನೇತ್ರಾಣಿ ದ್ವೀಪದ ಬಳಿಯ ಸ್ಕೂಬಾ ಡೈವಿಂಗ್ (Scuba Diving) ದೃಶ್ಯ. ಡ್ರೋನ್ ಕಣ್ಣಿನಲ್ಲಿ ಹಾರ್ಟ್ ಶೇಪ್ನಂತೆ ಕಾಣೋ ನೇತ್ರಾಣಿ, ಸ್ಕೂಬಾ ಡೈವ್ ಪ್ರಿಯರಿಗೆ ಹಾಟ್ ಫೇವರಿಟ್ ತಾಣ. ದೇಶದ ಕೆಲವೇ ಕೆಲವು ಕಡೆಗಳಲ್ಲಿ ಇರುವ ಸ್ಕೂಬಾ ಡೈವಿಂಗ್ನ ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ (Uttara Kannada) ಭಟ್ಕಳದಲ್ಲಿರೋ ಈ ನೇತ್ರಾಣಿಯಲ್ಲೂ (Netrani Island) ನಡೆಸಲಾಗುತ್ತೆ.
ಅಂದಹಾಗೆ ಪ್ರತಿವರ್ಷ ಸಾಮಾನ್ಯವಾಗಿ ಮಳೆಗಾಲ ಮುಗಿತಿದ್ದಂತೆ, ಅಂದ್ರೆ ಅಕ್ಟೋಬರ್ ತಿಂಗಳಲ್ಲಿ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ಗೆ ಅವಕಾಶ ನೀಡಲಾಗುತ್ತೆ. ಮೇ ತಿಂಗಳವರೆಗೂ ಇಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು.
ಇದನ್ನೂ ಓದಿ: Uttara Kannada: ಕಡಲಿನಲ್ಲಿಯೇ ಮೀನು ಸಾಕುವ ಕಡಲ ಮಕ್ಕಳ ಸಾಹಸ ಕಂಡೀರಾ?
ಸ್ಟಾರ್ಗಳಿಗೂ ಸಖತ್ ಇಷ್ಟವಾದ ತಾಣವಿದು
ಪವರ್ ಸ್ಟಾರ್ ಪುನೀತ್ ರಾಜಕುಮಾರ್, ದೂದ್ ಪೇಡಾ ದಿಗಂತ್- ಐಂದ್ರಿತಾ ಜೋಡಿ ಸೇರಿದಂತೆ ಅನೇಕರು ಇಲ್ಲಿಗೆ ಭೇಟಿ ನೀಡಿ, ಡೈವ್ ಮಾಡಿ ಖುಷಿಪಟ್ಟಿದ್ದಾರೆ. ದೇಶ- ವಿದೇಶಗಳಿಂದಲೂ ಇಲ್ಲಿಗೆ ಸ್ಕೂಬಾ ಡೈವ್ ಮಾಡಲೆಂದೇ ಪ್ರವಾಸಿಗರು ಬರ್ತಾರೆ. ಆದ್ರೆ ನಮ್ಗೆ ಈಜೇ ಬರಲ್ಲ, ಸ್ಕೂಬಾ ಡೈವ್ ಮಾಡೋದು ಹೇಗೆ ಅನ್ನೋರಿಗೂ ಇಲ್ಲಿ ಅವಕಾಶವಿದೆ.
ಇದನ್ನೂ ಓದಿ: Uttara Kannada: ಕುಮಟಾದಲ್ಲಿ ನಿಗೂಢ ಗುಹೆ ಪತ್ತೆ! ಗ್ರಾಮಸ್ಥರಲ್ಲಿ ಹೆಚ್ಚಾಯ್ತು ಕುತೂಹಲ
ಸ್ಕೂಬಾ ಒಂದು ವಿಶಿಷ್ಟ, ಅದ್ಭುತ ಪ್ರಪಂಚ. ಜೀವನದಲ್ಲೊಮ್ಮೆ ಜೋಗದ ಗುಂಡಿ ನೋಡಿ ಅಂತ ಅಣ್ಣೋರೆ ಹೇಳಿದ್ದಾರಂತೆ. ಆದ್ರೆ, ಜೋಗದ ಗುಂಡಿಗಿಂತಲೂ ಆಳದ ಜಗತ್ತನ್ನ ಈ ಸ್ಕೂಬಾದಲ್ಲಿ ನೋಡ್ಬಹುದು. ಹಾಗಿದ್ರೆ ಇನ್ನೇಕೆ ತಡ, ಒಮ್ಮೆ ಮುರ್ಡೇಶ್ವರಕ್ಕೆ ಭೇಟಿ ನೀಡಿ ಸ್ಕೂಬಾ ಡೈವ್ ಮಾಡಿ ಕಡಲಾಳದ ಜೀವಿ ಪ್ರಪಂಚವನ್ನ ಕಣ್ತುಂಬಿಕೊಳ್ಳಬಹುದು ಅಲ್ವಾ!
ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಕುರಿತು ಹೆಚ್ಚಿನ ಮಾಹಿತಿಗೆ: ನೇತ್ರಾಣಿ ಅಡ್ವೆಂಚರ್ಸ್- 99004 31111
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ