ಅಂಕಲ್, ಇಲ್ ಬನ್ನಿ. ಆಂಟಿ ನಿಮ್ಗೇನ್ ಬೇಕು? ಜ್ಯೂಸ್ ಯಾವುದು ಕೊಡ್ಲಿ. ತಿಂಡಿ ಏನಾದೀತು? ಹೀಗೆ ಏನೇ ಕೇಳಿ, ಏನೇ ಹೇಳಿ ಇಲ್ಲಿ ಕೊಡೋದೇನಿದ್ರೂ ಮಕ್ಕಳೇ! ನಿಮ್ಗೆ ಯಾವುದು ಇಷ್ಟನೋ ಅದನ್ನೇ ಕೊಡ್ತಾರೆ ನೋಡಿ. ಹೀಗೆ ಇಡೀ ಸಂತೆಯೇ ಮಕ್ಕಳ ಸಂತೆಯಾಗಿತ್ತು. ಪೆನ್ನು, ಪುಸ್ತಕ ಹಿಡಿಯೋ ಕೈಯ್ಯಲ್ಲಿ ಸೌಟು, ಸ್ಪೂನು ಹಿಡಿದು ಭರ್ಜರಿ ಬ್ಯುಸಿನೆಸ್ (Children Market) ಮಾಡಿದ್ರು ನೋಡಿ ಈ ಮಕ್ಕಳು. ಇದು ಮಕ್ಕಳಿಗಾಗಿಯೇ ನಡೆದ ಮಕ್ಕಳ ಸಂತೆ. ಇಲ್ಲಿ ಮಾರಾಟಗಾರರು ಏನಿದ್ರೂ ಬಾಲಕ-ಬಾಲಕಿಯರೇ, ಪೋಷಕರದ್ದು ಏನಿದ್ರೂ ಸೈಡ್ ಕ್ಯಾರೆಕ್ಟರ್. ನಿಜ, ಹೀಗೊಂದು ಕಲರ್ ಫುಲ್ ಫುಡ್ ಸಂತೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ (Uttara Kannad) ಅಂಕೋಲಾದ (Ankola) ಅವರ್ಸಾದ ಜೆಸಿ ಶಾಲೆಯಲ್ಲಿ.
ರೋಟರಿ ಕ್ಲಬ್ ವತಿಯಿಂದ ನಡೆದ ಈ ಸಂತೆಯಲ್ಲಿ ಮಕ್ಕಳು ಮಳಿಗೆಯಲ್ಲಿ ನಿಂತು ಸೌಮ್ಯವಾಗಿ ಸರ್, ಬನ್ನಿ ಸಾರ್, ತಗೋಳಿ ಸರ್ ಅನ್ನೋ ಟ್ಯೂನ್ ಅಲ್ಲಿ ಗ್ರಾಹರನ್ನು ಸೆಳೆದು ವ್ಯಾಪಾರ ಕುದುರಿಸಿಕೊಂಡರು.
ಇದನ್ನೂ ಓದಿ: Jaggery Success Story: ಬೀದರ್ ಬೆಲ್ಲದ ಸಿಹಿ ಇನ್ನಷ್ಟು ಹೆಚ್ಚಾಯ್ತು! ರೈತರ ನೆಮ್ಮದಿಯೂ ದುಪ್ಪಟ್ಟಾಯ್ತು
ಹಣಕಾಸಿನ ವ್ಯವಹಾರವೆಲ್ಲ ಪೋಷಕರು ನೋಡಿಕೊಂಡರು. ಬಹುತೇಕ ಎಲ್ಲ ಖಾದ್ಯಗಳು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಲಾಯಿತು. ಇದಕ್ಕಾಗಿ ಮನೆಯಿಂದ ಗ್ಯಾಸ್ ಸ್ಟವ್, ಸಿಲಿಂಡರ್ ಗಳನ್ನೆಲ್ಲ ತಂದು ತಿಂಡಿ ತಯಾರು ಮಾಡಿದರು.
ಮೆರವಣಿಗೆಯುದ್ದಕ್ಕೂ ಹುಲಿ, ಕರಡಿ ಕುಣಿತ, ಚೆಂಡೆ ವಾದ್ಯ
ಇದಕ್ಕೂ ಮುನ್ನ ಮಕ್ಕಳು ಈ ಸಂಭ್ರಮಕ್ಕೆ ಮೆರವಣಿಗೆ ಮೂಲಕ ಸಾಗಿ ಬಂದರು. ಮೆರವಣಿಗೆಯುದ್ದಕ್ಕೂ ಹುಲಿ, ಕರಡಿ ಕುಣಿತ, ಚೆಂಡೆ ವಾದ್ಯ ಮಕ್ಕಳಿಗೂ ಖುಷಿ ತಂತು. ಮಕ್ಕಳ ಸಂತೆಗಂತೂ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
ಇದನ್ನೂ ಓದಿ: Kannada: ಕನ್ನಡ ತಾಯಿಯ ತೇರು ಹೊರಟಿತು, ಆಹಾ! ವೈಭವ ನೋಡಿ
ಮಕ್ಕಳಲ್ಲಿ ವ್ಯಾಪಾರ ವಹಿವಾಟಿನ ಪ್ರಜ್ಞೆ ಬೆಳೆಸಲು ರೂಪುಗೊಂಡ ಈ ಕಾರ್ಯಕ್ರಮವು, ಸಾಂಸ್ಕೃತಿಕವಾಗಿಯೂ ಕೂಡ ಜನಮನವನ್ನು ರಂಜಿಸಿತು. ಒಟ್ಟಿನಲ್ಲಿ ಸದಾ ಸೈಲೆಂಟಾಗಿರ್ತಿದ್ಧ ಅವರ್ಸಾದ ಜೆಸಿ ಶಾಲೆಯ ಆವರಣ ಸಂತೆಯ ಗದ್ದಲದಿಂದ ನಿಜವಾಗಲೂ ಕೂಡ ಹುರುಪಿನಿಂದ ನಲಿದಿತ್ತು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ