SBI Bank: ಒಂದೂವರೆ ಕೋಟಿ ಹಣ ದುರುಪಯೋಗ ಮಾಡಿ ಮ್ಯಾನೇಜರ್ ಎಸ್ಕೇಪ್! ಈ ಬ್ಯಾಂಕ್‌ನಲ್ಲಿ ಇತ್ತಾ ನಿಮ್ಮ ಹಣ?

ಅನೂಪ್ 2019ರಿಂದ  ಏಪ್ರಿಲ್ 11ರವರೆಗೆ ಮ್ಯಾನೇಜರ್ ಆಗಿದ್ದ. ಈ ವೇಳೆಯೇ  ನಿಯಮಬಾಹೀರವಾಗಿ ಸಸ್ಪೆನ್ಸ್ ಖಾತೆಯಿಂದ ಹಣವನ್ನ ಖಾಸಗಿ ಖಾತೆಗೆ ವರ್ಗಾಯಿಸುತ್ತಾ ಬಂದಿರೋ ಬಗ್ಗೆ ಗೊತ್ತಾಗಿದೆ. ದೂರು ದಾಖಲಾದ ಹಿನ್ನೆಲೆಯಲ್ಲಿ ಮ್ಯಾನೇಜರ್ ಅನುಪ್ ಪೈ ನಾಪತ್ತೆಯಾಗಿದ್ದಾನೆ.

SBI ಭಟ್ಕಳ ಶಾಖೆ

SBI ಭಟ್ಕಳ ಶಾಖೆ

  • Share this:
ಭಟ್ಕಳ, ಉತ್ತರ ಕನ್ನಡ: ಫೈನಾನ್ಸ್ ಗಳ (Finance) ಹಾವಳಿಯಿಂದ ಗ್ರಾಹಕರು (Customer) ತಮ್ಮ ಹಣ (Money) ಸುರಕ್ಷಿತವಾಗಿರಲೆಂದು (Safe) ನ್ಯಾಷನಲೈಜ್ಡ್ ಬ್ಯಾಂಕುಗಳಲ್ಲಿ (Nationalized Bank) ಹಣ ಇಡ್ತಾರೆ. ಅಲ್ಲಿ ನಮ್ಮ ಹಣ ಸೇಫ್ ಆಗಿ ಇರುತ್ತೆ, ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ಸರ್ಕಾರ (Government) ನಮ್ಮ ಸಹಾಯಕ್ಕೆ ಬರುತ್ತೆ ಅನ್ನೋದು ಜನರ ಭರವಸೆ. ಆದ್ರೆ  ಕೆಲ ಬ್ಯಾಂಕ್ ವ್ಯವಸ್ಥಾಪಕರು (Bank Manager) ಹಣ ದುರುಪಯೋಗಪಡಿಸಿಕೊಳ್ತಿರೋ ಘಟನೆ ನಡೆಯುತ್ತಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ (Bhatkal) ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಮ್ಯಾನೇಜರ್ ಓರ್ವ ಹಣ ದುರುಪಯೋಗ ಪಡಿಸಿ ನಾಪತ್ತೆಯಾಗಿರೋದು (Escape) ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

 ಎಸ್‌ಬಿಐನಲ್ಲಿ ಗ್ರಾಹಕರಿಗೆ ವಂಚನೆ

ಬ್ಯಾಂಕುಗಳು ಸರ್ಕಾರದಿಂದ ಅನುಮತಿ ಪಡೆದ  ಹಣಕಾಸು ಸಂಸ್ಥೆಯಾಗಿದೆ. ಗ್ರಾಹಕರಿಗೆ ಹಣಕಾಸು ಸೇವೆಗಳನ್ನ ಒದಗಿಸೋದು ಮತ್ತು ಹೂಡಿಕೆಗಳನ್ನ ಮಾಡಿಸೋ ಕೆಲಸಗಳನ್ನ ಮಾಡುತ್ತಿವೆ. ಆದ್ರೆ  ಇತ್ತೀಚಿನ ದಿನಗಳಲ್ಲಿ ಕೆಲ ಬ್ಯಾಂಕುಗಳು  ಗ್ರಾಹಕರ  ವಿಶ್ವಾಸವನ್ನ ಕಳೆದುಕೊಳ್ಳುತ್ತಿವೆ.  ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ಓರ್ವ ಹಣ ದುರುಪಯೋಗ ಪಡಿಸಿಕೊಂಡು ಗ್ರಾಹಕರಿಗೆ ಆತಂಕ ಸೃಷ್ಟಿಸಿದ್ದಾನೆ.

ಬ್ಯಾಂಕ್‌ ಮ್ಯಾನೇಜರ್‌ನಿಂದ 1.5 ಕೋಟಿ ಹಣ ದುರುಪಯೋಗ

ಭಟ್ಕಳ ಪಟ್ಟಣದ  ಬಜಾರ್  ಶಾಖಾ ವ್ಯವಸ್ಥಾಪಕ ಅನೂಪ್ ಪೈ ಎಂಬಾತ ಸುಮಾರು ಒಂದುವರೆ ಕೋಟಿ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿರೋದು  ಬೆಳಕಿಗೆ ಬಂದಿದೆ. ಗ್ರಾಹಕರೊಂದಿಗೆ ಒಳಸಂಚು ನಡೆಸಿ ಈ ಕೃತ್ಯ ನಡೆಸಿದ್ದಾನೆಂದು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: SBI Alert: ಬ್ಯಾಂಕ್ ಅಕೌಂಟ್ ಇರೋ ಎಲ್ಲರಿಗೂ ಇದು ಎಚ್ಚರಿಕೆ!

ಸರಕಾರಿ ಬ್ಯಾಂಕಿನಲ್ಲೇ ಮೋಸವಾದ್ರೆ ಹೊಗೋದು ಎಲ್ಲಿ?

ಮಾರ್ಚ್ ತಿಂಗಳ  ಹಣಕಾಸು ವರ್ಷದ ಆಡಿಟ್ ವೇಳೆಯಲ್ಲಿ ಹಣ ದುರುಪಯೋಗ ಬೆಳಕಿಗೆ ಬಂದಿದೆ. ಹೀಗಾಗಿ ಎಸ್‌ಬಿಐ ಸಂಸ್ಥೆ ಬ್ಯಾಂಕ್ ವ್ಯವಸ್ಥಾಪಕ ಅನುಪ್ ಪೈನನ್ನ ಅಮಾನತು ಗೊಳಿಸಲಾಗಿದೆ. ಅಲ್ಲದೇ ಹೊಸದಾಗಿ ನೇಮಕಗೊಂಡಿರುವ ರಾಘವೇಂದ್ರ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಸ್ಪೆನ್ಸ್ ಖಾತೆಯಿಂದ ಹಣ ವರ್ಗಾವಣೆ

ಅನೂಪ್ 2019ರಿಂದ  ಏಪ್ರಿಲ್ 11ರವರೆಗೆ ಮ್ಯಾನೇಜರ್ ಆಗಿದ್ದ. ಈ ವೇಳೆಯೇ  ನಿಯಮಬಾಹೀರವಾಗಿ ಸಸ್ಪೆನ್ಸ್ ಖಾತೆಯಿಂದ ಹಣವನ್ನ ಖಾಸಗಿ ಖಾತೆಗೆ ವರ್ಗಾಯಿಸುತ್ತಾ ಬಂದಿರೋ ಬಗ್ಗೆ ಗೊತ್ತಾಗಿದೆ. ದೂರು ದಾಖಲಾದ ಹಿನ್ನೆಲೆಯಲ್ಲಿ ಮ್ಯಾನೇಜರ್ ಅನುಪ್ ಪೈ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನಾಪತ್ತೆಯಾಗಿರುವ ಬ್ಯಾಂಕ್ ಮ್ಯಾನೇಜರ್ ಅನೂಪ್‌


ಆತಂಕದಲ್ಲಿ ಎಸ್‌ಬಿಐ ಬ್ಯಾಂಕ್ ಗ್ರಾಹಕರು

ಫೈನಾನ್ಸ್ ವ್ಯವಹಾರಗಳ ಮೇಲೆ ವಿಶ್ವಾಸವಿಲ್ಲದ ಗ್ರಾಹಕರು ನ್ಯಾಶನಲೈಜ್ ಬ್ಯಾಂಕುಗಳಲ್ಲಿ ಹಣ ಮತ್ತು ಚಿನ್ನವನ್ನ ಇಡ್ತಾರೆ..  ಮ್ಯಾನೇಜರ್ ಆದವರು ಈ ರೀತಿ ಅಪರತಪರಾ ಮಾಡಿರೋದಕ್ಕೆ ಭಟ್ಕಳದಲ್ಲಿ ಗ್ರಾಹಕರು ಕಂಗಾಲಾಗಿದ್ದಾರೆ.. ಏಲ್ಲಿ ತಮ್ಮ ಹಣಕ್ಕೆ ಸಂಚಕಾರ ಬರುತ್ತೋ ಎಂಬ ಆತಂಕದಲ್ಲಿದ್ದಾರೆ. ಬ್ಯಾಂಕ್ ಮೇಲೆ ನಂಬಿಕೆ ಇಟ್ಟರು ಬ್ಯಾಂಕ್ ಸಿಬ್ಬಂದಿಯ ಇಂತ ಅಪರತಪರದಿಂದ ನಂಬಿಕೆ ಹಾಳಾಗುವಂತಾಗಿದೆ...

ಇದನ್ನೂ ಓದಿ: SBI ಗ್ರಾಹಕರೇ ಅಲರ್ಟ್, ಈ 2 ಸಂಖ್ಯೆಯಿಂದ ಬರುವ ಕರೆಯನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬೇಡಿ

ಒಟ್ಟಿನಲ್ಲಿ ಕಷ್ಟಪಟ್ಟು ದುಡಿದು ಒಂದಿಷ್ಟು ಹಣ ಕೂಡಿಸಿ ಬಡ ಗ್ರಾಹಕರು ಬ್ಯಾಂಕಿನಲ್ಲಿ ಇಡ್ತಾರೆ. ಆದ್ರೆ  ಮ್ಯಾನೇಜರ್ ಆದವರು ತಮ್ಮ ಹಣಕಾಸು ಸಂಸ್ಥೆಯೊಂದಿಗೆ ಗ್ರಾಹಕರಿಗೆ ಸರಿಯಾದ ಸೇವೆ ನೀಡಬೇಕು. ಅಗತ್ಯಕ್ಕೆ ತಕ್ಕಂತೆ ಸಾಲ ನೀಡುವುದು ಮತ್ತು ಹಣವನ್ನ ಹೂಡಿಕೆ ಮಾಡುವಂತೆ ಪ್ರೇರೆಪಿಸೋದು ಬ್ಯಾಂಕ್ ಸಿಬ್ಬಂದಿಗಳ ಮೇಲಿರುತ್ತೆ. ಆದ್ರೆ ತಮ್ಮ ವಯಕ್ತಿಕ  ವ್ಯವಹಾರಕ್ಕೋಸ್ಕರ  ಗ್ರಾಹಕರ ಹಣವನ್ನ ದುರುಪಯೋಗಪಡಿಸಿಕೊಳ್ಳೋದು ಏಷ್ಟು ಸರಿ ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ.
Published by:Annappa Achari
First published: