• Home
  • »
  • News
  • »
  • uttara-kannada
  • »
  • Gokarna: ಸಂಕ್ರಾಂತಿಗೂ ಮುನ್ನ ಅವಲಹಬ್ಬ! ದಕ್ಷಿಣ ಕಾಶಿ ಗೋಕರ್ಣದಲ್ಲಿ ವಿಶಿಷ್ಟ ಆಚರಣೆ

Gokarna: ಸಂಕ್ರಾಂತಿಗೂ ಮುನ್ನ ಅವಲಹಬ್ಬ! ದಕ್ಷಿಣ ಕಾಶಿ ಗೋಕರ್ಣದಲ್ಲಿ ವಿಶಿಷ್ಟ ಆಚರಣೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದಕ್ಷಿಣ ಕನ್ನಡ ಭಾಗದಲ್ಲಿ ನಡೆಯುವ ನೇಮೋತ್ಸವದಂತೆ ಅವಲಹಬ್ಬವನ್ನು ಆಚರಿಸಲಾಗುತ್ತೆ. ಗೋಕರ್ಣ ಹಿರೇಗುತ್ತಿಯ ಅವಲಹಬ್ಬ ಸಂಕ್ರಾಂತಿಯ ವಾರದ ಮುನ್ನ ಅತೀ ವಿಜೃಂಭಣೆಯಿಂದ ನಡೆಯಿತು.

  • Share this:

    ಗೋಕರ್ಣ: ಹೆದ್ದಾರಿಯಲ್ಲಿ ಕಳಸಗಳನ್ನು ಹೊತ್ತು ಸಾಗ್ತಿರೋ ಭಕ್ತರು. ಅಲ್ಲಲ್ಲಿ ದೇವರಿಗೆ ಹಣ್ಣು-ಕಾಯಿ ಆರತಿ ಬೆಳಗಿ ನಮಸ್ಕರಿಸ್ತಿರೋ ಜನತೆ. ಭಕ್ತಿ ಭಾವದಲ್ಲಿ ಮಿಂದೇಳುವಂಥಾ ವಾತಾವರಣ. ಇದೆಲ್ಲ ಕಂಡುಬಂದಿದ್ದು ದಕ್ಷಿಣ ಕಾಶಿ (Kashi Of South India) ಎಂದೇ ಕರೆಯಲ್ಪಡುವ ಗೋಕರ್ಣದಲ್ಲಿ (Gokarna)


    ದಕ್ಷಿಣ ಕನ್ನಡ ಭಾಗದಲ್ಲಿ ನಡೆಯುವ ನೇಮೋತ್ಸವದಂತೆ ಶತಮಾನಗಳಿಂದಲೂ ಆಚರಿಸಲಾಗುತ್ತಿರುವ ಗೋಕರ್ಣ ಹಿರೇಗುತ್ತಿಯ ಅವಲಹಬ್ಬ ಸಂಕ್ರಾಂತಿಯ ವಾರದ ಮುನ್ನ ಅತೀ ವಿಜೃಂಭಣೆಯಿಂದ ನಡೆಯಿತು.


    ಇದನ್ನೂ ಓದಿ: Ganapathi Temple: ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಕುಮಟಾದ ಗಣಪ!




    ಹೀಗಿತ್ತು ವಿಧಿ ವಿಧಾನ, ಆಚರಣೆ
    ಹಿರೇಗುತ್ತಿಯ ಕಳಸದ ಮನೆ ದೇವಸ್ಥಾನದಲ್ಲಿ ಕಳಸಗಳನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಯ್ತು. ಕಳಸಗಳನ್ನು 2 ಕಿಲೋಮೀಟರ್ ದೂರವಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಗಡಿ ಮೊರಬಾ ಹತ್ತಿರದ ಹಳೆ ಕಳಸದ ಮನೆಗೆ ತಂದು ಪೂಜೆ ಸಲ್ಲಿಸಲಾಯ್ತು. ಬಳಿಕ ಶ್ರೀ ಯಜಮಾನ ಬೊಮ್ಮಯ್ಯ ದೇವರು, ಶ್ರೀ ಹಿರೇಹೊಸಬ, ಶ್ರೀ ಸಣ್ಣಹೊಸಬ ದೇವರ ಕಳಸಗಳನ್ನು ಹೊತ್ತುಕೊಂಡು ಆವೇಶಭರಿತವಾಗಿ ಅರ್ಚಕರು ಹೆದ್ದಾರಿಯಲ್ಲಿ ಕಳಸದ ಮನೆಯಿಂದ ಹಿರೇಗುತ್ತಿಯತ್ತ ಮುಖ ಮಾಡಿದವು.


    ಇದನ್ನೂ ಓದಿ: Tunnel Road: ಕಾರವಾರದಲ್ಲಿ ಕರಾವಳಿಯ ಮೊದಲ ಹೆದ್ದಾರಿ ಸುರಂಗ ಮಾರ್ಗ!


    ನೆರೆದ ಸಹಸ್ರಾರು ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಕೃತಾರ್ಥರಾದರು. ಅರ್ಚಕರು, ಮೊಕ್ತೇಸರರು, ಗಾಂವಕರರು, ಕಟಗದಾದರರು, ಪದಾತಿ ದಳ, ಊರನಾಗರಿಕರು ಇವರೆಲ್ಲರ ಸಹಕಾರದಿಂದ ಅವಲಹಬ್ಬ ಅತೀ ಅಚ್ಚುಕಟ್ಟಾಗಿ ವಿಜ್ರಂಭಣೆಯಿಂದ ನಡೆಯಿತು.

    Published by:ಗುರುಗಣೇಶ ಡಬ್ಗುಳಿ
    First published: