ಉತ್ತರ ಕನ್ನಡ: ಸ್ವಾಮಿಯೇ ಅಯ್ಯಪ್ಪ, ಇಡೀ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೇಳಿಸಿದ್ದು ಒಂದೇ ಧ್ವನಿ, ಅದೇ ಸ್ವಾಮಿಯೇ ಶರಣಂ ಅಯ್ಯಪ್ಪ! (Swamiye Sharanam Ayyappa) ಹೌದು, ಕೇರಳ ಮಾದರಿಯ ದೇವಾಲಯ (Kerala Temple) ಹಾಗೂ ಆಚರಣಾ ಪದ್ಧತಿಗಳನ್ನು ಅಳವಡಿಸಿಕೊಂಡು ಥೇಟ್ ಶಬರಿಮಲೆಯ ಅಯ್ಯಪ್ಪ ದೇಗುಲದಂತೆ ಉತ್ತರ ಕನ್ನಡ ಜಿಲ್ಲೆಯ (Uttara Kannada News) ಸಿದ್ದಾಪುರ ತಾಲೂಕಿನ ಬಾಲಿಕೊಪ್ಪದಲ್ಲಿ ವಿಜೃಂಭಣೆಯಿಂದ ಮಕರ ಸಂಕ್ರಮಣವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇಗುಲಕ್ಕೆ ಬರುವ ಆನೆ
ಪ್ರತಿವರ್ಷ ದೇಗುಲಕ್ಕೆ ಬರುವ ಆನೆ, ಆನೆಯ ಮೇಲೆ ಅಯ್ಯಪ್ಪನ ಅಂಬಾರಿ. ಪೂರಮ್ ಉತ್ಸವಗಳ ಹಾಗೆ ಆನೆಯ ಮೇಲೆ ದೇವರನ್ನು ಮೆರವಣಿಗೆ ಮಾಡುವುದು ಇಲ್ಲಿನ ಸಂಪ್ರದಾಯ. ಆನೆಗೆ ಹಣ, ಹಣ್ಣು ಕೊಟ್ಟು ಕೈ ಮುಗಿದು ನಿಲ್ಲುವ ಜನರು ತಮ್ಮ ಬಾಲ್ಯಗಳಿಗೆ ಪ್ರಯಾಣ ಮಾಡಿದರು.
ಇದನ್ನೂ ಓದಿ: Gokarna Kotitirtha: ಗೋಕರ್ಣದ ಪವಿತ್ರ ಕೋಟಿತೀರ್ಥಕ್ಕಿದೆ ಅಪಾರ ಮಹಿಮೆ!
ಆನೆಯನ್ನೇರಿದ ಅಯ್ಯಪ್ಪ
ತಂತ್ರಿಗಳ ಕೈಯಲ್ಲಿ ಸರ್ವಾಭರಣಭೂಷಿತನಾಗಿ ಬರುವ ಅಯ್ಯಪ್ಪ ಆನೆಯನ್ನೇರಿ ಊರ ಜನರನ್ನು ವಿಚಾರಿಸಿದ. ಭಕ್ತರು ತಮ್ಮ ಆರಾಧ್ಯದೈವ ತಮ್ಮೆಡೆಗೆ ಬರುತ್ತಿರುವ ಭಾವಾನಂದದಲ್ಲಿ ಪರವಶರಾದರು.
ಇದನ್ನೂ ಓದಿ: Uttara Kannada: 10 ಸಾವಿರದಲ್ಲೇ ರೋಪ್ ವೇ ನಿರ್ಮಿಸಿದ ಕೃಷಿಕ!
ಊರ ತುಂಬಾ ತಿರುಗುವ ಅಂಬಾರಿಯ ಸುತ್ತ ಬೊಂಬೆಗಳು, ಕೀಲುಕುದುರೆ, ಚೆಂಡೆ ವಾದಕರು ಕುಣಿಯುತ್ತಾ ನಲಿಯುತ್ತಾ ಹೆಜ್ಜೆ ಹಾಕಿದರು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ