Uttara Kannada: ಸಂಕಟ ನಿವಾರಿಸುವ ವೆಂಕಟರಮಣ ಇಲ್ಲಿದ್ದಾನೆ ನೋಡಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇಲ್ಲಿನ ದೇಗುಲವು ಚಚ್ಚೌಕಾರದ ರಚನೆ ಹೊಂದಿದ್ದು, ಪುಟ್ಟದಾಗಿದ್ದರೂ ಭಕ್ತರನ್ನ ಆಕರ್ಷಿಸುತ್ತದೆ. ಇಲ್ಲಿಗೆ ಆಗಮಿಸಿದ್ರೆ ಆಸ್ತಿಕರ ಭಕ್ತಿ ಇಮ್ಮಡಿಯಾಗೋದ್ರಲ್ಲಿ ಸಂಶಯವಿಲ್ಲ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಸಂಕಟ ಬಂದಾಗ ವೆಂಕಟರಮಣ ಅಂತಾರೆ. ನಿಜ, ಇಲ್ಲಿರೋ ದೇಗುಲವು ಅಂತಹ ವೈಶಿಷ್ಟ್ಯತೆ ಹೊಂದಿದೆ. ಕಾನನದ ಮಧ್ಯೆ ಇದ್ದರೂ ಅರಸಿ ಬರೋ‌ ಭಕ್ತರ ಕಷ್ಟ ನೀಗಿಸೋ ದೇಗುಲವಿದು. ವಿಶಿಷ್ಟ ವಾಸ್ತುಶಿಲ್ಪದ ಕೆತ್ತನೆಯೊಂದಿರೋ ಕ್ಷೇತ್ರವಿದು. ಇಡೀ ಆಲಯವೇ ವಿಶೇಷ ಕಳೆ ಹೊಂದಿದ್ದು, ಬರೋ ಭಕ್ತರನ್ನ ಆಕರ್ಷಿಸುವ ಚಿತ್ತವನ್ನ ಹೊಂದಿದೆ. ಕಾಡಿನ ನಡುವಿನ ಈ ದೇಗುಲದ ದರ್ಶನ (Venkateshwara Temple Sonda) ಪಡೆಯೋದೆ ಒಂದು ಚೆಂದ.


ಯೆಸ್, ಇದುವೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾದಲ್ಲಿರುವ ಶ್ರೀಕ್ಷೇತ್ರ ಸುಧಾಪುರ ಸಂಕಟಹರ ವೆಂಕಟರಮಣ ದೇಗುಲದ ನೋಟ.




17 ನೇ ಶತಮಾನದ ದೇಗುಲ
ಇಲ್ಲಿನ ದೇಗುಲವು ಚಚ್ಚೌಕಾರದ ರಚನೆ ಹೊಂದಿದ್ದು, ಪುಟ್ಟದಾಗಿದ್ದರೂ ಭಕ್ತರನ್ನ ಆಕರ್ಷಿಸುತ್ತದೆ. ಇಲ್ಲಿಗೆ ಆಗಮಿಸಿದ್ರೆ ಆಸ್ತಿಕರ ಭಕ್ತಿ ಇಮ್ಮಡಿಯಾಗೋದ್ರಲ್ಲಿ ಸಂಶಯವಿಲ್ಲ. 17 ನೇ ಶತಮಾನದ ಮಧ್ಯಭಾಗದಲ್ಲಿ ಸೋದೆ ವಂಶಸ್ಥರಿಂದ ಈ ದೇಗುಲ ನಿರ್ಮಿಸಲ್ಪಟ್ಟಿದೆ.




ಉಗ್ರ ನರಸಿಂಹನ ಕೆತ್ತನೆ
ಈ ದೇಗುಲದ ತೀರ್ಥಮಂಟಪದಲ್ಲಿ ನಾಲ್ಕೇ ನಾಲ್ಕು ಕಂಬಗಳಿದ್ದು ಅವುಗಳ ಮೇಲೆ ವಿಶೇಷ ಕೆತ್ತನೆಗಳಿವೆ. ಅದರಲ್ಲೂ ವಿಶೇಷವಾಗಿ ಒಂದು ದೈವೀ ವಿಶೇಷತೆ ಗಮನಿಸಬಹುದು. ಉಗ್ರನರಸಿಂಹನ ಮುಂದೆ ಅವನ ಉಗ್ರತೆ ತಡೆಯಲು ಆಂಜನೇಯ, ಗರುಡ, ವರಾಹ ಮೂರ್ತಿ ಕೆತ್ತಲಾಗಿದೆ. ಇನ್ನೊಂದು ಬದಿಯಲ್ಲಿ ಉಗ್ರನರಸಿಂಹ, ಇನ್ನೊಂದು ಬದಿ ಪ್ರಹ್ಲಾದ ವರದ ನರಸಿಂಹನನ್ನು ಬಿಂಬರೂಪದಲ್ಲಿ ಕೆತ್ತಲಾಗಿದೆ. ಅದರಲ್ಲೂ ಶಿಲ್ಪಾಗಮ ಶಾಸ್ತ್ರದಲ್ಲಿ ವಿರಳಾತಿ ವಿರಳವಾದ ಅಷ್ಟಭುಜ ನರಸಿಂಹ ದೇವರ ಶಿಲ್ಪ ಇಲ್ಲಿರುವುದು ವಿಶೇಷ.


ಇದನ್ನೂ ಓದಿ: Lizard Dosha: ಹಲ್ಲಿ ದೋಷಕ್ಕೆ ಇಲ್ಲಿ ಸಿಗುತ್ತಂತೆ ಪರಿಹಾರ!


ಪ್ರಸನ್ನವದನ ವೆಂಕಟೇಶ್ವರ
ಗರ್ಭಗುಡಿಯಲ್ಲಿ ಕೃಷ್ಣವರ್ಣದ ವೆಂಕಟೇಶ್ವರನ ಪ್ರಸನ್ನವದನ ಮೂರ್ತಿಯಿದೆ. ವೆಂಕಟರಮಣನು ಭಕ್ತರ ಸಂಕಷ್ಟ ನಿವಾರಿಸುವ ದೇವರಾಗಿ ನೆಲೆಯಾಗಿದ್ದಾನೆ ಅನ್ನೋ ನಂಬಿಕೆಯಿದೆ.




ಕಾನನ ಮಧ್ಯೆ ದೇವರು
ಇನ್ನು ದೇಗುಲದ ಹೊರಗಡೆ ಅಪ್ಸರೆಯರು, ಶೇಷಶಯನ ಹಾಗೂ ಆಂಜನೇಯ, ಗರುಡ, ಜಯ-ವಿಜಯರ ಕೆತ್ತನೆಗಳಿವೆ. ದೇವಸ್ಥಾನದ ಸುತ್ತ ಗಮನಿಸಿದರೆ ಆನೆ, ಕುದುರೆ, ಸಿಂಹ, ಮಂಗ ಹೀಗೆ ಪ್ರಾಣಿಗಳ ಕೆತ್ತನೆ ಇವೆ. ಸೋದೆಯ ಜೈನಮಠದಿಂದ ಕೇವಲ 500 ಮೀಟರ್ ಅಂತರದಲ್ಲಿ ಈ ದೇಗುಲವಿದ್ದು ಸುಮಾರು 30 ಅಡಿ ಎತ್ತರದ ಗರುಡಗಂಭ ನಿಮ್ಮನ್ನು ದೇವಾಲಯಕ್ಕೆ ಸ್ವಾಗತಿಸುತ್ತದೆ. ಚಿಕ್ಕ ಗುಡಿಯಾದರೂ ಕಾಡಿನ ನಡುವೆ ಜನರ ನೆಮ್ಮದಿಗಾಗೇ ಭಗವಂತ ನೆಲೆಸಿದ್ದಾನೆನೋ ಎನ್ನುವ ಭಾವನೆ ಮೂಡುತ್ತೆ.


ಇದನ್ನೂ ಓದಿ: Uttara Kannada: ದೇವರಿಗೇ ಚೆಂದದ ಮನೆ ಕಟ್ಟಿಸಿದ್ರು ನೋಡಿ ಭಕ್ತರು!


Muttinakere, Karnataka 581336
ವೆಂಕಟೇಶ್ವರನ ಸನ್ನಿಧಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


ಒಟ್ಟಿನಲ್ಲಿ ಸುಧಾಪುರ ಕ್ಷೇತ್ರದ ಸಂಕಟಹರ ವೆಂಕಟರಮಣ ದೇಗುಲ ವೈಶಿಷ್ಟ್ಯದ ಜೊತೆಗೆ ಭಕ್ತರಿಗೆ ಮನಶ್ಶಾಂತಿ ಕಲ್ಪಿಸೋ ಕ್ಷೇತ್ರವೂ ಆಗಿರುವುದು ವಿಶೇಷ.


ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

top videos
    First published: