ಉತ್ತರ ಕನ್ನಡ: ಎಲ್ಲೆಲ್ಲೂ ನಾದಸ್ವರದ ಇಂಪು, ವೇದಘೋಷಗಳು, ರುದ್ರ ಪಠಣ. ಬೈಕ್ ರ್ಯಾಲಿಯಲ್ಲಿ ಜೈ ರಘುವೀರ ಸಮರ್ಥ ಎಂಬ ಜೈಕಾರದ ಕೂಗು. ಇಡೀ ಗಲ್ಲಿ ಗಲ್ಲಿಯಲ್ಲೂ ಪೂರ್ಣಕುಂಭ ಸ್ವಾಗತ, ಪಲ್ಲಕ್ಕಿ ಸೇವೆ, ರಾಜೋಪಚಾರ. ಯೆಸ್, ಇದೆಲ್ಲವೂ ಹನುಮಂತನ ಅವತಾರ ಎಂದೇ ಭಕ್ತರು ನಂಬಿರುವ ಸಮರ್ಥ ಸದ್ಗುರು ರಾಮದಾಸರಿಗೆ ನೀಡಲಾದ ಆತಿಥ್ಯದ ಸೇವೆ.
ಗೋಕರ್ಣದಲ್ಲಿ ಪಾದುಕೆ
ಉತ್ತರ ಕನ್ನಡದ ಕುಮಟಾ ಹಾಗೂ ಸುತ್ತಮುತ್ತಲಿನ ಆಸ್ತಿಕರಿಗೆ ಪರ್ವಕಾಲ. ಕಾರಣ ರಾಷ್ಟ್ರಸಂತ, ಹನುಮಂತನನ್ನೇ ತನ್ನಲ್ಲಿ ಲೀನವಾಗಿಸಿಕೊಂಡ ಪರಮರಾಮ ಭಕ್ತ ಶ್ರೀ ಸಮರ್ಥ ರಾಮದಾಸರ ಪಾದುಕೆ ಗೋಕರ್ಣ ಸಹಿತವಾಗಿ ಕರಾವಳಿಯ ಪುಣ್ಯಕ್ಷೇತ್ರಗಳನ್ನು ಸುತ್ತಲಿದೆ.
ಹೀಗಾಗಿ ಎಲ್ಲೆಲ್ಲೂ ಸಡಗರ ಸಂಭ್ರಮ ಕಂಡು ಬರ್ತಿದೆ. ಪೂರ್ಣಕುಂಭ ಸ್ವಾಗತ, ಜೈಕಾರದ ಕೂಗುಗಳು ಕೇಳಿ ಬರ್ತಿವೆ. ಸಮರ್ಥರ ಪಾದುಕೆಗಳು ಇದೇ ಮೊದಲ ಬಾರಿಗೆ ಗೋಕರ್ಣಕ್ಕೆ ಬಂದಿದ್ದು, ಭಕ್ತರು ಪುಳಕಿತರಾಗಿದ್ದಾರೆ.
ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!
ಶಿವಾಜಿ ಮಹಾರಾಜರ ಗುರು
ಹವ್ಯಕರ ಪರಮಗುರು ಶ್ರೀಧರರೊಂದಿಗೆ ಅವರಿಗಿಂತ ಹೆಚ್ಚಿನ ಸ್ಥಾನಮಾನವನ್ನು ಸಮರ್ಥ ರಾಮದಾಸರಿಗೆ ನೀಡಲಾಗಿದೆ. ಮಹಾರಾಷ್ಟ್ರದ ಸಜ್ಜನಗಡದಿಂದ ಬಂದಿರುವ ಪಾದುಕೆಗಳು ಒಂದು ತಿಂಗಳ ನಂತರ ಮತ್ತೆ ಮಹಾರಾಷ್ಟ್ರ ತಲುಪಲಿವೆ.
ಶಿವಾಜಿ ಮಹಾರಾಜನಿಗೆ ರಾಜಗುರುವಾಗಿ ಹಿಂದವೀ ಸಾಮ್ರಾಜ್ಯದ ರೂವಾರಿಗಳೂ ಆಗಿದ್ದ ಸಮರ್ಥರು ಆಧುನಿಕ ಭಾರತವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದೇ ನಂಬಲಾಗಿದೆ.
ಇದನ್ನೂ ಓದಿ: Siddi Community God: ಆಫ್ರಿಕಾದಿಂದ ಮಲೆನಾಡಿಗೆ ವಲಸೆ ಬಂದ ದೇವರು!
ಒಟ್ಟಿನಲ್ಲಿ ಸಮರ್ಥ ಸದ್ಗುರು ರಾಮದಾಸರ ಪಾದುಕೆ ಆಗಮನದಿಂದ ಗೋಕರ್ಣವು ಪಾವನವಾದಂತಾಗಿದೆ. ಭಕ್ತರಂತೂ ಭಾರೀ ಉಲ್ಲಾಸದಿಂದ ದರ್ಶನ ಪಡೆಯುತ್ತಾ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ