• Home
  • »
  • News
  • »
  • uttara-kannada
  • »
  • Ganapathi Temple: ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಕುಮಟಾದ ಗಣಪ!

Ganapathi Temple: ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಕುಮಟಾದ ಗಣಪ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಹಿಂದೆ ಅಘನಾಶಿನಿ ತೀರದಲ್ಲಿದ್ದ ಗಣಪನಿಗೆ ಅಲ್ಲಿದ್ದೋರೆಲ್ಲ ಒಂದು ಹಿಡಿ ಉಪ್ಪನ್ನ ಕಾಣಿಕೆಯಾಗಿ ಅರ್ಪಿಸಿ ತಮ್ಮ ಕೆಲಸ ಆಗ್ಲಿ ಅಂತ ಬೇಡ್ಕೊತಿದ್ರು. ಅದು ಕ್ರಮೇಣ ಹರಕೆಯಾಗಿ ಮುಂದುವರೆಯಿತು.

  • Share this:

    ಕುಮಟಾ: ಲಂಗರು ಹಾಕಿರೋ ಪುಟ್ಟ ದೋಣಿ, ದೋಣಿ ತುಂಬಾ ಉಪ್ಪಿನ ರಾಶಿ.. ಅರೆ, ಕರಾವಳಿಯಲ್ಲಿ‌ ಮತ್ತೆ ಉಪ್ಪಿನ ಸತ್ಯಾಗ್ರಹವೇನಾದ್ರೂ ಶುರುವಾಯ್ತ? ಇಲ್ದೇ ಹೋದ್ರೆ ಮತ್ಯಾಕೆ ಈ‌ ಉಪ್ಪಿನ ಸಂಗ್ರಹ ಅಂತೀರಾ? ಅದಕ್ಕೆಲ್ಲ ಉತ್ತರವನ್ನ ಅಲ್ಲೇ ಪಕ್ಕದಲ್ಲಿರೋ ವಿಘ್ನ ವಿನಾಯಕ ನೀಡ್ತಾನೆ ನೋಡಿ.


    ಹೌದು, ಹೀಗೆ ಒಂದು ಕಡೆ ಉಪ್ಪಿನ ಮೂಟೆ, ಇನ್ನೊಂದೆಡೆ ಭಕ್ತರ ಇಷ್ಟಾರ್ಥ ಈಡೇರಿಸುವ ಗಣಪ ಇರೋ ಈ ಕ್ಷೇತ್ರದ ಹೆಸರೇ ಶ್ರೀ ಉಪ್ಪಿನ ಗಣಪತಿ ದೇವಸ್ಥಾನವೆಂದು. ಉತ್ತರ ಕನ್ನಡದ ಕುಮಟಾ ತಾಲೂಕಿನಲ್ಲಿರೋ ಗಣಪನಿಗೆ ಉಪ್ಪಿನ ಹರಕೆ ಸಮರ್ಪಿತವಾಗುತ್ತದೆ. ಸಿಹಿಪ್ರಿಯ ಗಣಪನಿಗೆ ಹೀಗೆ ಉಪ್ಪು ಸಮರ್ಪಿಸೋದಕ್ಕೂ ಒಂದು ಐತಿಹ್ಯವಿದೆ.


    ಹೇಗೆ ಬಂತು ಈ ಉಪ್ಪಿನ ನೈವೇದ್ಯ?
    ಈ ಹಿಂದೆ ಅಘನಾಶಿನಿ ತೀರದಲ್ಲಿದ್ದ ಗಣಪನಿಗೆ ಅಲ್ಲಿದ್ದೋರೆಲ್ಲ ಒಂದು ಹಿಡಿ ಉಪ್ಪನ್ನ ಕಾಣಿಕೆಯಾಗಿ ಅರ್ಪಿಸಿ ತಮ್ಮ ಕೆಲಸ ಆಗ್ಲಿ ಅಂತ ಬೇಡ್ಕೊತಿದ್ರು. ಅದು ಕ್ರಮೇಣ ಹರಕೆಯಾಗಿ ಮುಂದುವರೆಯಿತು. ನಂತರದ ದಿನಗಳಲ್ಲಿ ಮೂಲಸ್ಥಾನದಿಂದ ಪೇಟೆಗೆ ಬಂದರೂ ಗಜಾನನ ಈಗಲೂ ಉಪ್ಪಿಗೆ ಒಲಿಯುವ ದೇವರಾಗಿಯೇ ಇದ್ದಾನೆ.


    ಇದನ್ನೂ ಓದಿ: Narasimha Devaru: ಸಮುದ್ರದ ನಡುವೆ ನರಸಿಂಹ ದೇವರು!




    ಈ ಸಮಸ್ಯೆಗಳಿಗೂ ಪರಿಹಾರ
    ಇಷ್ಟು ಮಾತ್ರವಲ್ಲ ಮದುವೆ, ನೌಕರಿ ಆಗಬೇಕಿದ್ದರೆ, ವ್ಯವಹಾರ ಕೈ ಹಿಡಿಯಲು, ಮೈಕೈ ನೋವು ಇದ್ರೆ ಉಪ್ಪಿನ ಗಣಪತಿಗೆ ಉಪ್ಪಿನ ಹರಕೆ ಮಾಡ್ಕೊಂಡ್ರೆ ಈಡೇರುತ್ತೆ ಅನ್ನೋ ನಂಬಿಕೆಯಿದೆ. 200 ವರ್ಷಗಳ ಇತಿಹಾಸವಿರುವ ಗಣಪನದ್ದು ಎರಡುವರೆ ಅಡಿ ಎತ್ತರದ ಮೂರ್ತಿ ಇದೆ. ಪ್ರತಿ ಸಂಕಷ್ಟಿ, ಅಂಗಾರಕ ಸಂಕಷ್ಟಿ ಹಾಗೂ ಗಣೇಶ ಚತುರ್ಥಿ ಇಲ್ಲಿನ ವಿಶೇಷ.


    ಇದನ್ನೂ ಓದಿ: Uttara Kannada: ಕೌದಿ ಹೊಲಿಯಾಕ ಬಂದಾಳ ನೋಡ್ರಿ ಅಮೇರಿಕಾ ಹುಡುಗಿ!


    ಈ ದೇವಸ್ಥಾನಕ್ಕೆ ಬರೋದು ಹೇಗೆ?
    ಕುಮಟಾಕ್ಕೆ ಬಂದ್ರೀ ಅಂದ್ರೆ ನೆಲ್ಲಿಕೇರಿಗೆ ನಡೆದುಕೊಂಡೇ ಹೋಗಬಹುದು. ಪೇಟೆ ಒಳಗೆ ಆಲಯ ಇರುವುದರಿಂದ 30 ರೂಪಾಯಿಗೆಲ್ಲ ನಿಮ್ಮನ್ನ ಆಟೋದವರು ಕರೆದುಕೊಂಡು ಹೋಗಿಬಿಡ್ತಾರೆ. ಇಲ್ಲದಿದ್ದರೆ ಪೇಟೆಯ ಒಳಗೆ ಸಂಚರಿಸೋ ಬಸ್ಸುಗಳನ್ನು ನೀವು ಆಶ್ರಯಿಸಿ ಇಲ್ಲಿಗೆ ಬರಬಹುದು. ಒಟ್ಟಿನಲ್ಲಿ ಸಿಹಿಪ್ರಿಯ ಗಣಪನಿಗೆ ಇಲ್ಲಿ ಹರಕೆ ಅರ್ಪಿಸೋದಿದ್ರೆ ಮಾತ್ರ ಉಪ್ಪಿನ ಹಿಡಿಯೇ ಬೇಕು ಅನ್ನೋದನ್ನ ಮರೀಬೇಡಿ.

    Published by:ಗುರುಗಣೇಶ ಡಬ್ಗುಳಿ
    First published: