• Home
  • »
  • News
  • »
  • uttara-kannada
  • »
  • Sabarimala Temple: ಉತ್ತರ ಕನ್ನಡದ ಶಬರಿಮಲೆ! ಇದು ಅಯ್ಯಪ್ಪ ಭಕ್ತರ ಮೆಚ್ಚಿನ ತಾಣ

Sabarimala Temple: ಉತ್ತರ ಕನ್ನಡದ ಶಬರಿಮಲೆ! ಇದು ಅಯ್ಯಪ್ಪ ಭಕ್ತರ ಮೆಚ್ಚಿನ ತಾಣ

ಇಲ್ಲಿ ದರ್ಶನ ಮಾಡಿ

"ಇಲ್ಲಿ ದರ್ಶನ ಮಾಡಿ"

ಹದಿನೆಂಟು ಮೆಟ್ಟಿಲುಗಳು, ಧ್ವಜಸ್ತಂಭ, ದೇವರ ಮೂರ್ತಿ ಹೀಗೆ ನೋಡುತ್ತಾ ಹೋದರೆ ಶಬರಿಮಲೆಯಲ್ಲೇ ಇರೋ ಅನುಭವ!

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಸ್ವಾಮಿಯೇ ಶರಣಂ ಅಯ್ಯಪ್ಪ ಎಂದಾಗ ನೆನಪಾಗುವುದು ಕೇರಳದ ಶಬರಿಮಲೆ. ಅಲ್ಲಿನ ಹದಿನೆಂಟು ಮೆಟ್ಟಿಲುಗಳು. ಪವಿತ್ರವಾದ ಕಪ್ಪು ಬಟ್ಟೆ ಧರಿಸಿದ ಮಾಲಾಧಾರಿಗಳು. ಇಲ್ಲಿ ನೀವ್ ನೋಡ್ತಿರೋದು ಆ ಶಬರಿಮಲೆಯನ್ನೇ (Sabarimala Temple) ಹೋಲುವ ಕರುನಾಡಿನ ಅಯ್ಯಪ್ಪ ಸ್ವಾಮಿ ದೇಗುಲ. ಹೌದು, ಇದು ಅಕ್ಷರಶಃ ಮಿನಿ ಶಬರಿಮಲೆ ದೇಗುಲ! ಉತ್ತರ ಕನ್ನಡ ಜಿಲ್ಲೆಯ (Sabarimala Temple In Uttara Kannada) ಸಿದ್ದಾಪುರದ ಬಾಳೆಕೊಪ್ಪದಲ್ಲಿರುವ ಈ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಯ್ಯಪ್ಪ ಭಕ್ತರ (Ayyappa Devotees) ನೆಚ್ಚಿನ ತಾಣ. ಇಲ್ಲಿನ ಪ್ರತಿಯೊಂದು ನಿರ್ಮಾಣವು ಕೇರಳದ ಅಯ್ಯಪ್ಪ ಸ್ವಾಮಿ ದೇಗುಲದ ಪಡಿಯಚ್ಚಿನಂತಿದೆ.


    ಭಕ್ತರನ್ನು ಆಕರ್ಷಿಸುತ್ತಿರುವ ದೇವಸ್ಥಾನ
    ಹದಿನೆಂಟು ಮೆಟ್ಟಿಲುಗಳು, ಧ್ವಜಸ್ತಂಭ, ದೇವರ ಮೂರ್ತಿ ಹೀಗೆ ನೋಡುತ್ತಾ ಹೋದರೆ ಶಬರಿಮಲೆಯಲ್ಲೇ ಇರೋ ಅನುಭವ. ದೇಗುಲ ಆಸುಪಾಸಿನ ಹಲವು ಜಿಲ್ಲೆಗಳ ಭಕ್ತರನ್ನು ಆಕರ್ಷಿಸುತ್ತಿದೆ. ಪ್ರಕೃತಿ ಮಡಿಲಲ್ಲಿ ಎಂಟು ವರ್ಷಗಳ ಹಿಂದೆ ನಿರ್ಮಾಣವಾದ ಈ ದೇಗುಲ ಶಾಂತವಾಗಿ ಮೈದಳೆದು ನಿಂತಿದೆ.




    ಒಂದೂವರೆ ಎಕರೆ ಜಾಗದಲ್ಲಿ ದೇಗುಲ
    ಸುಮಾರು ಒಂದೂವರೆ ಎಕರೆ ಜಾಗದಲ್ಲಿ ನಿರ್ಮಾಣವಾದ ಈ ದೇಗುಲಕ್ಕೆ ಇಪ್ಪತ್ತೈದು ಟ್ರಸ್ಟಿಗಳಿದ್ದಾರೆ. ಜಾತಿ ಮತ ಭೇದವಿಲ್ಲದೇ ಅಯ್ಯಪ್ಪನ ಸ್ಮರಣೆ ನಿರಂತರವಾಗಿ ಸಾಗುತ್ತಿದೆ . ಮುಖ್ಯವಾಗಿ ಪ್ರತಿ ಸಂಕ್ರಮಣದಂದು ಪಡಿಪೂಜೆಯೂ ನಡೆಯುತ್ತದೆ.


    ಇದನ್ನೂ ಓದಿ: Uttara Kannada: ಗಣಪಮ್ಮ, ದುಗ್ಗಮ್ಮ, ಭಾಗೀರಥಮ್ಮ..ಗರ್ಭಿಣಿ-ಬಾಣಂತಿಯರೂ ಜೈಲು ಸೇರಿದರು!


    ಜನವರಿ 10 ರಿಂದ 15ರವರೆಗೆ ಜಾತ್ರಾ ಮಹೋತ್ಸವ
    ಕೇರಳದ ದೇವಸ್ವಂ ಮಂಡಳಿಯ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಜನವರಿ 10 ರಿಂದ 15ರವರೆಗೆ ಜಾತ್ರಾ ಮಹೋತ್ಸವಕ್ಕೆ ಅಸಂಖ್ಯ ಭಕ್ತರು ನೆರೆಯುತ್ತಾರೆ. ಧ್ವಜ ಪೂಜೆಯ ದಿನ ಗರುಡ ಪಕ್ಷಿಯು ಧ್ವಜ ಸುತ್ತುವುದು ಭಕ್ತರು ಕಾರಣಿಕವಾಗಿ ಕಾಣುತ್ತಾರೆ.


    ಇದನ್ನೂ ಓದಿ: Uttara Kannada: ಸೈಕಲ್ಲೇ ಜಿಮ್ ಆಯ್ತು! 15 ಸಾವಿರದ ಅದ್ಭುತ ಸಾಧನ ಇಲ್ಲಿ ಸಿಗುತ್ತೆ ನೋಡಿ


    ಪ್ರತಿದಿನವೂ ಬೆಳಿಗ್ಗೆ 6ರಿಂದ 1 ಗಂಟೆ ಹಾಗೂ ಸಂಜೆ 4ರಿಂದ 7ಗಂಟೆ ದೇವಸ್ಥಾನದ ದರ್ಶನ ಸಮಯವಾಗಿದ್ದು, ತ್ರಿಕಾಲ ಪೂಜೆ, ದಿನವೂ ಗಣಹೋಮ ನಡೆಯುವುದು ಇಲ್ಲಿನ ವಿಶೇಷ. ಅಯ್ಯಪ್ಪಸ್ವಾಮಿಯೊಂದಿಗೆ ಗಣೇಶ, ಷಣ್ಮುಖ, ರಾಜರಾಜೇಶ್ವರಿ, ಚೌಡೇಶ್ವರಿ, ಬೀರಪ್ಪ, ಭೂತರಾಜ, ನಾಗಯಕ್ಷಿ ದೇವರುಗಳ ಸನ್ನಿಧಾನವೂ ಅಯ್ಯಪ್ಪನ ಸನ್ನಿಧಿಯಲ್ಲಿದೆ. ಇಲ್ಲಿನ ಜಾತ್ರಾ ಸಮಯದಲ್ಲಂತೂ ಪ್ರತಿದಿನ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ವಿಶೇಷ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: