ಕಾರವಾರ: ಅಲ್ಲೆಲ್ಲ ಹಬ್ಬದ ವಾತಾವರಣ, ಇಬ್ಬರು ಗೆಳತಿಯರು ಪರಸ್ಪರ ಭೇಟಿಯಾಗೋ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗೋ ತವಕ. ಹೌದು, ಅಪರೂಪದಲ್ಲಿ ಅಪರೂಪದ ಸಾಧಕ ಗೆಳತಿಯರು ಪರಸ್ಪರ ಭೇಟಿಯಾದ ವಿಶಿಷ್ಟ ಸನ್ನಿವೇಶಕ್ಕೆ ಉತ್ತರ ಕನ್ನಡದ (Uttara Kannada News) ಅಂಕೋಲಾ ಸಾಕ್ಷಿಯಾಯ್ತು. ಪದ್ಮಶ್ರೀ ತುಳಸಿ ಗೌಡ (Padma Shri Tulasi Gowda) ಅವರ ಮನೆಗೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ (Padma Shri Saalumarada Thimmakka) ಭೇಟಿ ನೀಡಿದರು.
ಅಂಕೋಲಾದ ಹೊನ್ನಳ್ಳಿ ಗ್ರಾಮದಲ್ಲಿರುವ ತುಳಸಿ ಗೌಡ ಅವರ ಮನೆಗೆ ಸಾಲುಮರದ ತಿಮ್ಮಕ್ಕ ಬಂದಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಯ್ತು.
ಇದನ್ನೂ ಓದಿ: Uttara Kannada: ಕಂಬಳದ ಬಾರುಕೋಲು ಇಲ್ಲೇ ತಯಾರಾಗುತ್ತೆ!
ಮಗನ ಮದುವೆಗೆ ಆಮಂತ್ರಣ ನೀಡಿದ ಸಾಲುಮರದ ತಿಮ್ಮಕ್ಕ
ಸಾಲುಮರದ ತಿಮ್ಮಕ್ಕನವರು ತಮ್ಮ ಮಗನ ಮದುವೆಗೆ ಆಮಂತ್ರಣ ನೀಡಲು ಗೆಳತಿ ತುಳಸಿ ಗೌಡ ಅವರ ಮನೆಗೆ ಖುದ್ದು ಭೇಟಿ ನೀಡಿದರು.
ಇದನ್ನೂ ಓದಿ: Positive Story: 1,500 ರೂಪಾಯಿಯಲ್ಲಿ ಕಮಾಲ್ ಮಾಡಿದ ಉತ್ತರ ಕನ್ನಡದ ಯುವಕ
ಆತ್ಮೀಯವಾಗಿ ಶಾಲು ಹೊದೆಸಿ ಸನ್ಮಾನ
ತುಳಸಿ ಗೌಡರಿಗೆ ಆತ್ಮೀಯವಾಗಿ ಶಾಲು ಹೊದಿಸಿ ಸನ್ಮಾನಿಸಿ ಆಮಂತ್ರಿಸಿ ಮಗನ ಮದುವೆಗೆ ಮುದ್ದಾಂ ಬರುವಂತೆ ಆಹ್ವಾನಿಸಿದರು. ವೃಕ್ಷಮಾತೆಯರ ಸಮ್ಮಿಲನಕ್ಕೆಅಂಕೋಲಾದ ಹೊನ್ನಳ್ಳಿ ಗ್ರಾಮ ಸಾಕ್ಷಿಯಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ