ಇದು ಅಂತಿಂಥಾ ವೀಣೆಯಲ್ಲ, ಗಂಧರ್ವ ಲೋಕದ ವಿಶಿಷ್ಟ ಅನುಭವ ನೀಡೋ ಇಡೀ ಭಾರತದಲ್ಲಿ ಎಂಟೇ ಎಂಟು ಕಲಾವಿದರಿಗೆ ನುಡಿಸಲು ಬರೋ ವೀಣೆಯಿದು. ಅದರಲ್ಲೊಬ್ಬರು ಇಲ್ಲಿ ನೀವು ನೋಡ್ತಿರೋ ಉತ್ತರ ಕನ್ನಡದ (Uttara Kannada News) ಶಿರಸಿಯ ಆರ್.ವಿ. ಹೆಗಡೆ (R.V Hegde) ಅವರು ಕೂಡಾ ಒಬ್ಬರು. ನಿಜ, ಭಾರತದ ಸಂಗೀತ ಪ್ರಕಾರಗಳೇ (Indian Music) ಅತ್ಯದ್ಭುತ. ಅದೆಷ್ಟು ಕಲಿತರೂ ಮುಗಿಯದ ವಿದ್ಯಾಭ್ಯಾಸ. ಕೈ ಬೆರಳುಗಳಿಗೆ ನಖಿ ಸಿಕ್ಕಿಸಿಕೊಂಡು ವೀಣೆಯೆದೆಯ ಮೇಲೆ ಕೈಯಿಟ್ಟು ಒಲುಮೆಯಿಂದ ತೀಡಿದರೆ ಸಾಕು, ಹೊರಬರುವ ಭೀಮಪಲಾಸವೂ, ಯಮನ ರಾಗವೂ ನಿಮ್ಮನ್ನು ಗಂಧರ್ವಲೋಕಕ್ಕೆ ಕರೆದೊಯ್ಯುತ್ತೆ. ಅಂದಹಾಗೆ ಈ ವೀಣೆಯ ಹೆಸರು ರುದ್ರವೀಣೆ (Rudraveena) ಅಂತ.
ಶಿವನೊಮ್ಮೆ ಪಾರ್ವತಿಯು ಮಲಗಿರುವಾಗ ಅವಳ ದೇಹಾಕಾರದಿಂದ ಸ್ಫೂರ್ತಿ ಪಡೆದು ರುದ್ರವೀಣೆಯ ಡಿಸೈನ್ ಮಾಡಿದನಂತೆ. ಹಿಂದೂಸ್ಥಾನಿ ಸಂಗೀತದಲ್ಲಿ ಬಳಕೆಯಾಗುವ ಈ ವಾದ್ಯಕ್ಕೆ ತುಂಬಾ ಗಂಭೀರ ವಾದ್ಯ ಎಂದು ವಿಶೇಷಣವಿದೆ.
ಈ ಅಪರೂಪದ ವಾದ್ಯದಲ್ಲಿ ಪರಿಣಿತ ಕಲಾವಿದರಿವರು
ಈ ರುದ್ರವೀಣೆ ಕೈ ಜೊತೆ ತಲೆಗೂ ಭಾರೀ ಕೆಲಸ ಕೊಡುತ್ತೆ. ಬಲವಾದ ಅಭ್ಯಾಸ, ನುಡಿಸಲು ಹಿಡಿತ ಬಯಸುವ ಅಪರೂಪದ ವಾದ್ಯ. ಇಂತಹ ಅಪರೂಪದ ಸಂಗೀತ ಸಾಧನದಲ್ಲಿ ತನ್ನ ಪ್ರಾಬಲ್ಯ ಸಾಧಿಸಿದವರಲ್ಲಿ ನೀವು ನೋಡ್ತಿರೋ ಉತ್ತರ ಕನ್ನಡ ಆರ್. ವಿ. ಹೆಗಡೆ ಅವರೂ ಒಬ್ಬರು. ಇವರಂತ ಸಾಧಕರು ಕೇವಲ ದೇಶದಲ್ಲಿ ಎಂಟು ಮಂದಿ ಮಾತ್ರ ಅಂತ ಹೇಳಲಾಗುತ್ತೆ.
ಇದನ್ನೂ ಓದಿ: Uttara Kannada: ಶಿರಸಿಯಲ್ಲಿ ಅರಳುತ್ತಿದೆ ಕಾಫಿ! ಅಡಿಕೆ ತೋಟದಲ್ಲಿ ಕೃಷಿಕರ ಪ್ರಯೋಗ
ಸಂಗೀತಗಾರರ ಕುಟುಂಬ!
ಆರ್.ವಿ ಹೆಗ್ಡೆಯವರದ್ದೇ ಮೂಲತಃ ಸಂಗೀತಗಾರರ ಕುಟುಂಬ. ತಂದೆಯೂ ಹಾರ್ಮೋನಿಯಂ ವಾದಕರಾಗಿದ್ದರು. ಸಿತಾರ್ ಅನ್ನು ಹುಬ್ಬಳಿಯ ಬಿಂದುಮಾಧವ್ ಪಾಠಕ್ ಅವರ ಬಳಿ ಅಧ್ಯಯನ ಮಾಡಿ ಎಂ.ಎಂ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನಲ್ಲಿ 33 ವರ್ಷಗಳ ಕಾಲ ಸಂಗೀತ ಶಿಕ್ಷಕರಾಗಿದ್ದರು.
ಮುಂದಿನ ತಲೆಮಾರಿಗೂ ತಯಾರಿ
ರುದ್ರವೀಣೆ ಇವರ ಅಚ್ಚುಮೆಚ್ಚಿನ ವಾದ್ಯ. ಹೀಗಾಗಿ ಬಿಂದುಮಾಧವರ ಸೂಚನೆಯಂತೆ ಇವರು ರುದ್ರವೀಣೆ ಕಲಿತು ಪಾರಂಗತರಾದರು. ಈಗ ಆಯ್ದ ವಿದ್ಯಾರ್ಥಿಗಳನ್ನು ಮುಂದಿನ ತಲೆಮಾರಿಗಾಗಿ ತಯಾರಿಸುತ್ತಿದ್ದಾರೆ.
ಇದನ್ನೂ ಓದಿ: Ganagapura: ಭಕ್ತರ ಕಾಯುವ ಗಾಣಗಾಪುರ ದತ್ತ ಪಾದುಕೆ, ವರ್ಷದಲ್ಲಿ 2 ಬಾರಿ ರಥೋತ್ಸವ ನಡೆಯುವ ಸನ್ನಿಧಿ
ಒಟ್ಟಿನಲ್ಲಿ ಮುಂದಿನ ಪೀಳಿಗೆಗೆ ರುದ್ರ ವೀಣೆಯನ್ನು ಉಳಿಸಿಕೊಳ್ಳಲು ಆರ್.ವಿ. ಹೆಗಡೆ ತೋರುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ