• Home
 • »
 • News
 • »
 • uttara-kannada
 • »
 • Uttara Kannada: ನೀವು ಕಂಡು ಕೇಳಿರದ ಗಡ್ಡೆ ಗೆಣಸುಗಳು ಇಲ್ಲಿವೆ ನೋಡಿ!

Uttara Kannada: ನೀವು ಕಂಡು ಕೇಳಿರದ ಗಡ್ಡೆ ಗೆಣಸುಗಳು ಇಲ್ಲಿವೆ ನೋಡಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ತುಪ್ಪಗೆಣಸು, ಮರಗೆಣಸು, ಸಿಹಿಗೆಣಸು, ಕೆಸುವಿನ ಗೆಡ್ಡೆ, ರಚ್ಚೇವು ಗೆಡ್ಡೆ, ಕಂಬಕೆಸು, ಚಿಪ್ಪಗೆಸು, ನೇಗಲಗೊನ್ನೆ, ಪಂಜರಗೆಡ್ಡೆ, ಹಾಲುಗೆಸು, ಚೆಂಗೆಣಸು, ಚಿರಕಾಂಡೆ ಮೊದಲಾದ ಗೆಡ್ಡೆ ಗೆಣಸಿನ ವಿಧಗಳು ಜನರ ಗಮನಸೆಳೆದವು.

 • News18 Kannada
 • 2-MIN READ
 • Last Updated :
 • Uttara Kannada, India
 • Share this:

  ಉತ್ತರ ಕನ್ನಡ: ಎಲ್ಲಿ ನೋಡಿದ್ರಲ್ಲಿ ಗಡ್ಡೆ ಗೆಣಸುಗಳ ರಾಶಿ. ತುಪ್ಪಗೆಣಸು, ಮರಗೆಣಸು, ಸಿಹಿಗೆಣಸು, ಚೆಂಗೆಣಸು ಹೀಗೆ ಗೆಣಸುಗಳ ರಾಶಿ. ಕೆಸುವಿನ ಗೆಡ್ಡೆ, ರಚ್ಚೇವು ಗೆಡ್ಡೆ, ಕಂಬಕೆಸು, ಚಿಪ್ಪಗೆಸು, ನೇಗಿಲಗೊನ್ನೆ, ಪಂಜರಗೆಡ್ಡೆ, ಹಾಲುಗೆಸು, ಚಿರಕಾಂಡೆ ಹೀಗೆ ಬಗೆ ಬಗೆಯ ಗಡ್ಡೆಗಳ ರಾಶಿ. ಹೌದು, ಹೀಗೆ ಗಡ್ಡೆ ಗೆಣಸುಗಳ ಈ ರಾಶಿ ಕಂಡು ಬಂದಿದ್ದು ಗಡ್ಡೆ ಗೆಣಸು (Roots And Tuber Mela Joida)ಮೇಳದಲ್ಲಿ.


  ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಕಾಳಿ ಕೃಷಿ ಅಭಿವೃದ್ಧಿ ಸಂಸ್ಥೆ ನಡೆಸಿದ ಗಡ್ಡೆ-ಗೆಣಸು ಮೇಳದಲ್ಲಿ ವಿವಿಧ ಗಡ್ಡೆ ಗೆಣಸುಗಳ ರಾಶಿ ಕಂಡುಬಂತು. ಸಾರ್ವಜನಿಕರು ಆಸಕ್ತಿಯಿಂದ ಗಡ್ಡೆ ಗೆಣಸುಗಳನ್ನ ಖರೀದಿಸಿದರು. ಬಹುತೇಕ ಅಪರೂಪದ ಗಡ್ಡೆ ಗೆಣಸುಗಳನ್ನ ಕಂಡು ಸಾರ್ವಜನಿಕರು ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಪಡೆದುಕೊಂಡರು. ಕುಣುಬಿ ಸಮುದಾಯ ಭವನದಲ್ಲಿ ಸುಮಾರು 135 ಗಡ್ಡೆ ಗೆಣಸುಗಳು ಸ್ಟಾಲ್​ಗಳು ಕಂಡು ಬಂದವು.
  ಈ ಎಲ್ಲ ವಿಧದ ಗೆಣಸುಗಳಿದ್ವು!
  ತುಪ್ಪಗೆಣಸು, ಮರಗೆಣಸು, ಸಿಹಿಗೆಣಸು, ಕೆಸುವಿನ ಗೆಡ್ಡೆ, ರಚ್ಚೇವು ಗೆಡ್ಡೆ, ಕಂಬಕೆಸು, ಚಿಪ್ಪಗೆಸು, ನೇಗಿಲಗೊನ್ನೆ, ಪಂಜರಗೆಡ್ಡೆ, ಹಾಲುಗೆಸು, ಚೆಂಗೆಣಸು, ಚಿರಕಾಂಡೆ ಮೊದಲಾದ ಗೆಡ್ಡೆ ಗೆಣಸಿನ ವಿಧಗಳು ಜನರ ಗಮನಸೆಳೆದವು.
  ಇದನ್ನೂ ಓದಿ: Ganapathi Temple: ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಕುಮಟಾದ ಗಣಪ!


  ಗುಡ್ಡಗಾಡು ಭಾಗದ ಬೆಳೆಗೆ ಒಳ್ಳೆಯ ಮಾರುಕಟ್ಟೆ
  ಬರೀ ಬಾಯಲ್ಲಿ ತಿನ್ನುವ ಸಿಹಿ ಗೆಣಸು, ಭೂಚಕ್ರಗಡ್ಡೆ ಜನರ ಬಾಯಲ್ಲಿ ನೀರೂರಿಸಿತ್ತು. ಸದಾ ಕಾಡು ಗುಡ್ಡ ಭಾಗಗಳಲ್ಲಿರುವ ಜೋಯಿಡಾದ ಜನರ ಕಸುಬು ಕೂಡಾ ಇಲ್ಲಿ ಪ್ರದರ್ಶನವಾದಂತಾಯಿತು.
  ಇದನ್ನೂ ಓದಿ: Mangteshwar God Temple: ಸಮುದ್ರದ ಗಡಿ ಕಾಯೋ ಮಂಗ್ತೇಶ್ವರ ದೇವರು, ಅಂಕೋಲಾದಲ್ಲೇ ರಾಮೇಶ್ವರ ನೆನಪಾಗೋದು ಪಕ್ಕಾ!


  ಒಟ್ಟಿನಲ್ಲಿ ನಾಗರಿಕತೆಯ ಮೊದಲ ಆಹಾರ ಎನಿಸಿಕೊಂಡಿರುವ ಗೆಡ್ಡೆ ಗೆಣಸುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಗೆಡ್ಡೆ ಗೆಣಸುಗಳ ಮೇಳವು ಸಾಕ್ಷಿಯಾಯಿತು.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್, ನ್ಯೂಸ್ 18 ಕನ್ನಡ ಉತ್ತರ ಕನ್ನಡ

  Published by:ಗುರುಗಣೇಶ ಡಬ್ಗುಳಿ
  First published: