ಉತ್ತರ ಕನ್ನಡ: ನೋಡೋಕೆ ಯೂನಿಫಾರಂ ಹಾಕಿಕೊಂಡ ಕೆಜಿ ಕ್ಲಾಸ್ ಹುಡುಗಿ ಥರ ಇದ್ರೂ ಮಕ್ಕಳಿಗೆಲ್ಲ ಇವಳೇ ಟೀಚರ್! ಮಗ್ಗಿ ಹೇಳಿ ಕೊಡೋ ಈ ಗೊಂಬೆ ಟೀಚರ್ ಅಂದ್ರೆ ಮಕ್ಕಳಿಗೆಲ್ಲ (Students) ಭಾರೀ ಖುಷಿ. ಹೌದು, ಅಷ್ಟಕ್ಕೂ ಈ ಗೊಂಬೆ ಟೀಚರ್ (Doll Teacher) ಯಾರು ಅನ್ನೋದೆ ಮಕ್ಕಳಿಗೆಲ್ಲ ಕ್ಯೂರಿಯಾಸಿಟಿ! ಪಾಠ ಹೇಳಿಕೊಡೋ ಈ ಟೀಚರ್ನ ಮುದ್ದು ಮಾಡೋದೇನು? ಮಾತನಾಡುವುದೇನು? ಅಷ್ಟಕ್ಕೂ ಏನಿದು ಗೊಂಬೆ ಟೀಚರ್ (Robot Teacher) ಅಂತೀರಾ? ಹೇಳ್ತೀವಿ ನೋಡಿ.
‘ಶಿಕ್ಷಾ‘ ರೋಬೋ ಟೀಚರ್
ಹೌದು, ಈ ಟೀಚರ್ ಹೆಸ್ರು ‘‘ಶಿಕ್ಷಾ" ಅಂತ. ಅಂದಹಾಗೆ ಇದೊಂದು ರೋಬೋಟ್ ಆಗಿದ್ದು ಶಿರಸಿಯ ಎಂ.ಇ.ಎಸ್ ಚೈತನ್ಯ ಕಾಲೇಜ್ನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ ಅಕ್ಷಯ್ ಮಾಶೇಲ್ಕರ್ ಅವರ ಕನಸಿನ ಕೂಸು ಕೂಡಾ.
ಟಾಪ್ ವಿದ್ಯಾರ್ಥಿ, ಜೊತೆಗೆ ಆಟದ ಗೊಂಬೆ!
ಎಲ್ಲರ ಕ್ಯೂಟ್ ಫೇವರಿಟ್ ಆಗಿದೆ ಈ ರೋಬೋಟ್ ಶಿಕ್ಷಾ. ಕಾಗುಣಿತ, ಮಗ್ಗಿ, ಪದ್ಯ ಎಲ್ಲವನ್ನೂ ಮಕ್ಕಳಿಗೆ ಹೇಳಿಕೊಡುವ ಶಿಕ್ಷಾ ರೋಬೋಟ್ ಕ್ಲಾಸಿನ ಟಾಪ್ ವಿದ್ಯಾರ್ಥಿಯೂ ಹೌದು, ಮಕ್ಕಳ ಆಟದ ಗೊಂಬೆಯೂ ಹೌದು!
ಪಾಠ ಮಾಡ್ತಾ ಹತ್ತಾರು ಆಟ ಆಡಿಸುತ್ತೆ!
ಈ ರೋಬೋಟ್ಗೆ ಮೊದಲೇ ಅಗತ್ಯ ವಿಷಯಗಳನ್ನೆಲ್ಲಾ ಫೀಡ್ ಮಾಡಲಾಗಿದೆ. ಕೈಯಲ್ಲಿ ಸ್ಮಾರ್ಟ್ ಕಾರ್ಡ್ ಇಟ್ಟ ತಕ್ಷಣ ಏನೆಲ್ಲಾ ವಿಷಯಗಳಿದೆಯೋ ಆ ವಿಷಯಗಳ ಬಗ್ಗೆ ಈ ರೊಬೋಟ್ ಪ್ರತಿಯೊಬ್ಭರಿಗೂ ಅರ್ಥ ಆಗುವ ಹಾಗೆ ವಿಷಯವನ್ನು ತಲುಪಿಸುತ್ತೆ. ಈಗಾಗಲೇ ಶಾಲೆ ಶಾಲೆಗೆ ಸವಾರಿ ಆರಂಭಿಸಿರುವ ಶಿಕ್ಷಾ ರೊಬೋಟ್ ಮಕ್ಕಳನ್ನು ಪಾಠದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ಕೆರೆ-ದಡ, ಮ್ಯೂಸಿಕಲ್ ಚೇರ್ ಮತ್ತು ಗಣಿತಕ್ಕೆ ಸಂಬಂಧಪಟ್ಟ ಆಟಗಳನ್ನು ಕೂಡ ಮಕ್ಕಳಿಗೆ ಆಡಿಸುತ್ತದೆ.
ಹೀಗಿದೆ ರೋಬೋ
ಪ್ರೋ.ಅಕ್ಷಯ್ ಮಾಶೇಲ್ಕರ್ ಹಾಗೂ ಅವರ ಶಿಷ್ಯ ಆದರ್ಶ್ ದೇವಾಡಿಗ ಅವರು ಸೇರಿ ನಿರ್ಮಿಸಿರುವ ಈ ರೊಬೋಟ್ ವಿದ್ಯುತ್ ಚಾಲಿತ ರೊಬೋಟ್ ಆಗಿದೆ. ಹಲವು ಸೆನ್ಸಾರ್ಗಳನ್ನು ಈ ಸಾಧನಕ್ಕೆ ಅಳವಡಿಸಲಾಗಿದೆ.
ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!
ವಿಶೇಷವಾಗಿ ಸ್ಮಾರ್ಟ್ ಕಾರ್ಡ್ ಹಾಗೂ ಗೊಂಬೆಯ ಕೈ ಇವೆರಡರಿಂದ ಸಂವಹನ ಸಾಧ್ಯವಾಗಿರುವುದರಿಂದ ಯಾರು ಬೇಕಾದ್ರೂ ಈ ರೊಬೋಟ್ ಅನ್ನು ನಿಯಂತ್ರಿಸಬಹುದು. ತೂಕ ಕಡಿಮೆ ಇರೋದ್ರಿಂದ ಆರಾಮಾಗಿ ಸಾಗಣೆ ಮಾಡಬಹುದು. ಬರೀ ಇಲ್ಲಿಗೆ ಇವರ ಸಂಶೋಧನೆ ನಿಂತಿಲ್ಲ, ಕಲಿಕೆಗೆ ಅನುಕೂಲವಾಗುವ ಹಲವು ಮಾದರಿಗಳನ್ನು ಅವರು ತಯಾರಿಸಿದ್ದಾರೆ.
ಇದನ್ನೂ ಓದಿ: Karwar: ಮದುವೆಗೂ ಮುನ್ನ ಹೊಕ್ಕಳ ಬಳಿ ಸೂಜಿಯಿಂದ ದಾರ ಪೋಣಿಸುವ ಜಾತ್ರೆ!
ಒಟ್ಟಿನಲ್ಲಿ 'ಶಿಕ್ಷಾ' ರೋಬೋ ಇದೀಗ ಮಕ್ಕಳ ಅಚ್ಚುಮೆಚ್ಚಿನ ಫ್ರೆಂಡ್ಲಿ ಟೀಚರ್ ಕೂಡಾ ಆಗಿದೆ. ಇಂತಹ ಸಂಶೋಧನೆಗೆ ನಿಜಕ್ಕೂ ಭೇಷ್ ಎನ್ನಲೇಬೇಕು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ