ಉತ್ತರ ಕನ್ನಡ: ಅಬ್ಬಬ್ಬಾ ಈ ಕೆಂಡ ಹಾಯೋದೆ ಒಂಥರಾ ಮೈ ಜುಮ್ಮೆನ್ನಿಸೋ ದೃಶ್ಯ. ಅದ್ರಲ್ಲೂ ಮಕ್ಕಳನ್ನ (Children) ಹೊತ್ತ ಮಹಿಳೆಯರು (Women), ವೃದ್ಧೆಯರು (Old Age) ಹೀಗೆ ಭಕ್ತಿ ಪರಾಕಾಷ್ಠೆ ಮೆರೆಯೋದಂದ್ರೆ ಹೇಗಿರಬೇಡ? ಹೌದು, ಇಂತಹ ದೃಶ್ಯಗಳಿಗೆ ಸಾಕ್ಷಿಯಾಯ್ತು ನೋಡಿ ಉತ್ತರ ಕನ್ನಡದ ಪ್ರಸಿದ್ಧ ಜಾತ್ರೆಯೊಂದು, ಅಲ್ಲಿ ನೆರೆದಿದ್ದ ಕಿರಿಯರಿಂದ ಹಿಡಿದು ವಯೋವೃದ್ಧರವರೆಗೂ ಗಂಡು, ಹೆಣ್ಣು (Women) ಎಂಬ ಭೇದವಿಲ್ಲದೇ ಕೆಂಡ ಸೇವೆ ಮಾಡೋ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.
ಕೆಂಡ ಸೇವೆ
ಹೌದು, ಇದು ಭಟ್ಕಳದ ಪ್ರಸಿದ್ಧ ಸೋಡಿಗದ್ದೆ ಜಾತ್ರೆಯಲ್ಲಿ ಕಂಡು ಬಂದ ಕೆಂಡಸೇವೆಯ ದೃಶ್ಯಗಳು. ವಿಜೃಂಭಣೆಯಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಕೆಂಡ ಸೇವೆಗೈದು ಹರಕೆ ಒಪ್ಪಿಸಿದರು. ಚಿಕ್ಕ ಮಕ್ಕಳನ್ನು ಪೂಜಾರಿಗಳು ಹಾಗೂ ಅವರ ತಂದೆ- ತಾಯಿ ಎತ್ತಿಕೊಂಡು ಕೆಂಡ ಹಾಯ್ದರೆ, ಹಲವಾರು ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆ ತೀರಿಸಿದರು. ಈ ಎಲ್ಲ ಕ್ಷಣಕ್ಕೆ ಸಹಸ್ರಾರು ಭಕ್ತರೂ ಸಾಕ್ಷಿಯಾದರು.
ದೇವಿಗೆ ಬೆಳ್ಳಿ, ಬಂಗಾರ ಅರ್ಪಣೆ
ಕೋವಿಡ್-19 ಎರಡು ಅಲೆಯ ಬಳಿಕ ಈ ಬಾರಿ ನಡೆದ ಕೆಂಡ ಸೇವೆಯಲ್ಲಿ ಹರಕೆ ತೀರಿಸಲು ಪಾಲ್ಗೊಂಡಿದ್ದ ಭಕ್ತರ ಸಂಖ್ಯೆ ಕಳೆದ 5 ವರ್ಷದಲ್ಲೇ ಅತೀ ಹೆಚ್ಚಾಗಿತ್ತು. ವಿಶೇಷವಾಗಿ ಪೂಜಾರಿಯವರ ಮೇಲೆ ದೈವ ಆಹ್ವಾನೆ ಆಗಿದ್ದು ಭಕ್ತರ ನಂಬಿಕೆಯನ್ನು ಇಮ್ಮಡಿ ಮಾಡಿತು.
ಕೆಂಡ ಸೇವೆ ಮಾತ್ರವಲ್ಲದೇ ದೇವಿಗೆ ಪ್ರಿಯವಾದ ಹೂವಿನ ಪೂಜೆ, ಬಂಗಾರದ ತೊಟ್ಟಿಲು ಸಮರ್ಪಣೆ, ಬೆಳ್ಳಿ, ಬಂಗಾರದ ಕಣ್ಣು, ಬಂಗಾರದ ಆಭರಣ ಇತ್ಯಾದಿಗಳನ್ನು ಭಕ್ತಿಪೂರ್ವಕವಾಗಿ ಸಮರ್ಪಿಸುವ ಕಾರ್ಯ ಕೂಡಾ ಭಕ್ತರಿಂದ ನಡೆಯಿತು. ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿರುವ ಜಾತ್ರೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಇದನ್ನೂ ಓದಿ: ಮುತ್ತೈದೆಯರಿಂದ ಆರತಿ, ರಾಜಾತಿಥ್ಯ! ಕಂಬಳ ಕೋಣ ಸಾಕೋದು ಸುಲಭವಿಲ್ಲ ಕಣ್ರೀ!
ಒಟ್ಟಿನಲ್ಲಿ ಸೋಡಿಗದ್ದೆ ಜಾತ್ರಾ ಮಹೋತ್ಸವದ ಎರಡನೇ ದಿನದ ಕೆಂಡ ಸೇವೆಯಂತೂ ಭಕ್ತರ ಪರಾಕಾಷ್ಠೆಗೆ ಸಾಕ್ಷಿಯಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ