• Home
 • »
 • News
 • »
 • uttara-kannada
 • »
 • Kashmiri Apple: 50 ರೂಪಾಯಿಗೆ ಕಾಶ್ಮೀರದ ಸೇಬು! ಮಾಜಿ ಯೋಧರ ಆ್ಯಪಲ್ ಸೇವೆ

Kashmiri Apple: 50 ರೂಪಾಯಿಗೆ ಕಾಶ್ಮೀರದ ಸೇಬು! ಮಾಜಿ ಯೋಧರ ಆ್ಯಪಲ್ ಸೇವೆ

X
50 ರೂಪಾಯಿಗೆ ಒಂದು ಕೆಜಿ ಸೇಬು!

"50 ರೂಪಾಯಿಗೆ ಒಂದು ಕೆಜಿ ಸೇಬು!"

ಊರ ಜನರಿಗೂ ಪೌಷ್ಠಿಕಾಂಶಭರಿತ ಹಣ್ಣುಗಳು ಕಡಿಮೆ ಬೆಲೆಗೆ ಸಿಗಲಿ ಅನ್ನೋದೇ ಇವರ ಉದ್ದೇಶವಂತೆ. ಇದೊಂಥರಾ ಆ್ಯಪಲ್ ಸೇವೆ!

 • Share this:

  ಕಾಶ್ಮೀರಿ ಸೇಬು (Kashmiri Apple) ಕಡಿಮೆ ಬೆಲೆಗೆ ಬೇಕಿದ್ರೆ ಎಲ್ಲಿಗೆ ಹೋಗ್ಬೇಕು? ಅರೇ! ಕಾಶ್ಮೀರಕ್ಕೇ ಹೋಗ್ಬೇಕು ಅಂತಿದ್ದೀರಾ? ಅಷ್ಟು ದೂರ ಏನ್ ಹೋಗ್ಬೇಕಿಲ್ಲ ಕಣ್ರೀ.. ನೀವ್ ನೋಡ್ತಿರೋ ಈ ಊರು ಕಾಶ್ಮೀರದ ಹಳ್ಳಿಯಲ್ಲ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಈ ಊರಲ್ಲೇ ಕಾಶ್ಮೀರಿ ಆ್ಯಪಲ್ ಕೆಜಿಗೆ ಕೇವಲ ಐವತ್ತೇ ಐವತ್ತು ರೂಪಾಯಿಗೆ (Kashmiri Apple Price) ಸಿಗುತ್ತೆ. ಹಾಗಂತ ಇಲ್ಲೇನು ಸೇಬನ್ನ ಬೆಳೆಯಲ್ಲ. ಹಾಗಿದ್ರೆ ಕಾಶ್ಮೀರಿ ಸೇಬು ಕಡಿಮೆ ಬೆಲೆಗೆ ಸಿಗೋದು ಹೇಗೆ ಅಂದ್ಕೊಂಡ್ರಾ? ನಾವ್ ಹೇಳ್ತೀವಿ ನೋಡಿ.


  ಹೀಗೆ ಜೋಡಿಸಿಟ್ಟಿರೋ ಇವೆಲ್ಲವೂ ಕಾಶ್ಮೀರಿ ಸೇಬುಹಣ್ಣುಗಳು. ಈ ಹಣ್ಣುಗಳಿಗೂ ಉತ್ತರ ಕನ್ನಡದ ಕುಮಟಾಕ್ಕೂ ಅವಿನಾಭಾವ ಸಂಬಂಧ. ಮಾರ್ಕೆಟ್​ನಲ್ಲಿ ಸೇಬಿಗೆ ಎಷ್ಟೇ ದರ ಇರ್ಲಿ, ಕುಮಟಾದ ಮಾಜಿ ಯೋಧ ಪ್ರಕಾಶ್ ನಾಯ್ಕ್ ಮನೇಲಿ ಮಾತ್ರ ಕೆಜಿಗೆ 50 ರೂಪಾಯಿ ಮೀರೋದಿಲ್ಲ.


  ಇದನ್ನೂ ಓದಿ: ಕಡಲ ಮೇಲೆ ತೇಲುವ ನಗರ! 12 ಫುಟ್​ಬಾಲ್ ಸ್ಟೇಡಿಯಂನಷ್ಟು ದೊಡ್ಡದು INS Vikramaditya


  ಸ್ನೇಹಿತರ ಸಹಾಯದಿಂದ ಅಲ್ಲಿಂದಿಲ್ಲಿಗೆ ಬರುತ್ತೆ
  ಹೇಳಿಕೇಳಿ ಪ್ರಕಾಶ್ ನಾಯ್ಕ್ ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿದವರು. ರಿಟೈರ್ಡ್ ಆಗಿ ಮನೆಗೆ ಬಂದ್ಮೇಲೆ ತಮ್ಮ ಸ್ನೇಹಿತರ ಸಹಾಯದಿಂದ ಕಾಶ್ಮೀರದಿಂದ ಆ್ಯಪಲ್​ಗಳನ್ನ ತರಿಸಿಕೊಳ್ತಿದ್ದಾರೆ.


  ಊರ ಜನರ ಹಿತವೇ ಮುಖ್ಯವಂತೆ
  ಕಾಶ್ಮೀರದಿಂದ ಉತ್ತರ ಕನ್ನಡದ ಕುಮಟಾಕ್ಕೆ ಬಂದ ಸೇಬು ಹಣ್ಣುಗಳನ್ನು ಹೆಚ್ಚಿನ ಲಾಭ ನಿರೀಕ್ಷಿಸದೇ ಮಾರಾಟ ಮಾಡ್ತಾರೆ. ಊರ ಜನರಿಗೂ ಪೌಷ್ಠಿಕಾಂಶಭರಿತ ಹಣ್ಣುಗಳು ಕಡಿಮೆ ಬೆಲೆಗೆ ಸಿಗಲಿ ಅನ್ನೋದೇ ಇವರ ಉದ್ದೇಶವಂತೆ. ಇದೊಂಥರಾ ಆ್ಯಪಲ್ ಸೇವೆ!


  ಇದನ್ನೂ ಓದಿ: Kannada: ಕನ್ನಡ ತಾಯಿಯ ತೇರು ಹೊರಟಿತು, ಆಹಾ! ವೈಭವ ನೋಡಿ


  ಸೇಬು ಬೇಕೇ? ಸೀದಾ ಇವರ ಮನೆಗೆ ಹೋಗಿ ಸಾಕು!
  ಪ್ರಕಾಶ್ ನಾಯ್ಕ್ ಮಾರುವ ಕಾಶ್ಮೀರಿ ಸೇಬುಹಣ್ಣು ಮಾರಾಟಕ್ಕಾಗಿ ಮಾರ್ಕೆಟ್​ನಲ್ಲಿ ಸಿಗಲ್ಲ. ಯಾರಿಗಾದ್ರೂ ಸೇಬು ಬೇಕಾದ್ರೆ ಇವರ ಮನೆಗೇ ಹೋಗ್ಬೇಕು. ಹೀಗೆ ಜನಸಾಮಾನ್ಯರಲ್ಲಿ ಆ್ಯಪಲ್ ಅನ್ನೋದು ಗಗನ ಕುಸುಮ ಅನ್ನೋ ಭಾವನೆ ದೂರ ಮಾಡಿ ಕಡಿಮೆ ಬೆಲೆಗೆ ಸಿಗುವಂತೆ ಮಾಡ್ತಿದ್ದಾರೆ ಪ್ರಕಾಶ್ ನಾಯ್ಕ್ ಎಂಬ ಮಾಜಿ ಯೋಧ. ಒಟ್ಟಾರೆ ಕುಮಟಾ ನಾಗರಿಕರಲ್ಲಿ ಸೇಬು ಹಣ್ಣು ಬೇಕಂದ್ರೆ ಪ್ರಕಾಶ್ ನಾಯ್ಕ್ ಅವರ ಮನೆಗೆ ಹೋದ್ರಾಯ್ತು ಅನ್ನೋ ಫೀಲ್ ಮೂಡಿಬಿಟ್ಟಿದೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು