ವಿಶಾಲವಾದ ಟೆಂಟ್, ಬಂಡೆಗಳ ನಡುವೆ ತಣ್ಣಗೆ ಹರಿಯೋ ನೀರಿನ ಬುಗ್ಗೆಗಳು.. ಕಣ್ಣಿಗೆ ಮನಸ್ಸಿಗೆ ಮುದ ನೀಡೋ ವೀವ್ ಪಾಯಿಂಟ್ಗಳು.. ಇದೆಲ್ಲದರ ನಡುವೆಯೇ ಇದ್ದಾನೆ ನಮ್ಮ ಒನ್ ಮ್ಯಾನ್ ಆರ್ಮಿ! (One Man Army) ಇದೊಂಥರ ಮಿಲ್ಟ್ರಿ ಕ್ಯಾಂಪ್, ಆದ್ರೆ ಇಲ್ಲಿರೋದು ಮಾತ್ರ ಒನ್ ಮ್ಯಾನ್ ಆರ್ಮಿ. ಉತ್ತರ ಕನ್ನಡ ಜಿಲ್ಲೆಯ (Uttara Kannada Trekking) ಶಿರಸಿಯ ಯೋಧ ಕ್ಯಾಪ್ಟನ್ ಸುಜಯ್ ಹೆಗ್ಡೆ. ಸದ್ಯ ನಿವೃತ್ತ ಜೀವನವನ್ನ ಸಾಗಿಸುತ್ತಿರೋ ಸುಜಯ್ ಹೆಗ್ಡೆ ಮಿನಿ ಮಿಲ್ಟ್ರಿ ಕ್ಯಾಂಪ್ (Mini Military Camp) ಅನ್ನೇ ತಯಾರು ಮಾಡ್ಕೊಂಡಿದ್ದಾರೆ. ಸುಜಯ್ ಅವರು ಇದಕ್ಕೆ ಕ್ಯಾಪ್ಟನ್ ಕ್ಯಾಂಪ್ ಅಂತಲೇ ಹೆಸರಿಟ್ಟಿದ್ಧಾರೆ.
ಪ್ರಕೃತಿ ಸೌಂದರ್ಯದ ನಡುವೆ ಇರೋ ಸುಜಯ್ ಕ್ಯಾಪ್ಟನ್ ಅವ್ರ ಈ ಕ್ಯಾಂಪ್ ಥೇಟ್ ಮಿಲ್ಟ್ರಿ ಕ್ಯಾಂಪ್ನ್ನೇ ಹೋಲುತ್ತೆ. ಮಿಲ್ಟ್ರಿಯಲ್ಲಿ ಎಂಟು ವರ್ಷ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ ರಿಟೈರ್ಮೆಂಟ್ ಆದ್ರೂ ಆ ಗುಂಗಿನಿಂದ ಹೊರಬರದೇ ಇಂತಹ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಶೂಟಿಂಗ್, ಆರ್ಚರಿ ಟ್ರೈನಿಂಗ್ ಕ್ಯಾಂಪ್ ಎಲ್ಲಾ ಇಲ್ಲಿದೆ
ಸುಜಯ್ ಹೆಗ್ಡೆ ಅವರ ಕ್ಯಾಪ್ಟನ್ ಕ್ಯಾಂಪ್ಗೆ ಎಂಟ್ರಿ ಆಗ್ತಿದ್ದಂಗೆ ನಿಮಗೆ 360 ಡಿಗ್ರಿ ವೀವ್ ಇರೋ ಟೆಂಟ್ಗಳು ಕಾಣಸಿಗುತ್ವೆ. ಸ್ವಲ್ಪ ಮುಂದೆ ಹೋದರೆ ಶೂಟಿಂಗ್, ಆರ್ಚರಿ ಟ್ರೈನಿಂಗ್ ಕ್ಯಾಂಪ್, ಅಲ್ಲೇ ಪಕ್ಕದಲ್ಲಿ ದಿನವೂ ಉರಿದು ಖುಷಿಕೊಡೋ ಫೈರ್ ಕ್ಯಾಂಪ್ ಸಹಾ ಇದೆ. ನಂತರ ಸ್ವಲ್ಪ ಮುಂದೆ ಹೋದರೆ ಗದ್ದೆಯಲ್ಲಿ ಇರುವ ಮನೆಯ ತರಹ ಒಂದು ತೆರೆದ ಗೋಡೆಯ ಬಿದಿರ ಮನೆಯಿದೆ. ಅಲ್ಲಿಂದ ಹರಿಯೋ ಕೆಂಗ್ರೆ ಹೊಳೆ ನೋಡೋದೆ ಕಣ್ಣಿಗೆ ಹಬ್ಬ.
ಇದನ್ನೂ ಓದಿ: Soil Prasad: ಇಲ್ಲಿ ಮಣ್ಣೇ ಪ್ರಸಾದ! ಮಕ್ಕಳ ಹಠ ಕಡಿಮೆ ಆಗೋಕೆ ಈ ದೇಗುಲದ ಮಣ್ಣು ತಿನಿಸುವ ಪೋಷಕರು!
ನೈಸರ್ಗಿಕ ಸ್ವಿಮ್ಮಿಂಗ್ ಪೂಲ್
ಅಷ್ಟು ಮಾತ್ರವಲ್ಲ, ಇನ್ನು ಕೆಳಕ್ಕೆ ಇಳಿಯುತ್ತಾ ಬಂದರೆ, ಕೆಂಗ್ರೆ ಹೊಳೆಯ ನೈಸರ್ಗಿಕ ಮಿನಿ ಸ್ವಿಮ್ಮಿಂಗ್ ಪೂಲ್ ಖುಷಿ ಕೊಡುತ್ತೆ. ಇನ್ನೂ ಬೆಟ್ಟ ಹತ್ತಿದರೆ ಸ್ವಿಂಗ್ ಚಾಲೆಂಜ್, ಅಂಡರ್ ಎಂಡ್ ಆಪ್, ಬರ್ಮಾ ಲೈನ್, ಫೆನ್ಸ್ ಚಾಲೆಂಜ್, ಹರ್ಡಲ್ಸ್, ಟ್ರಕ್ಕಿಂಗ್ ಮಿಲ್ಟ್ರಿಯಲ್ಲಿ ಏನೇನು ಟ್ರೈನಿಂಗ್ ಸಿಗುತ್ತೋ ಅದು ಇಲ್ಲೇ ಸಿಗುತ್ತೆ.
ಇದನ್ನೂ ಓದಿ: Solo Cycle Trip: ಟ್ರಿಣ್ ಟ್ರಿಣ್, ದಾರಿಬಿಡಿ! ಇದು ಏಕಾಂಗಿ ಯುವತಿಯ ಸೈಕಲ್ ಯಾತ್ರೆ
ಮಿಲ್ಟ್ರಿ ಟ್ರೇನಿಂಗ್ ಹೇಗಿರುತ್ತೆ ಅಂತ ತಿಳಿಯೋಕೆ ನೀವು ಎಲ್ಲೆಲ್ಲೋ ಹೋಗ್ಬೇಕಂತಿಲ್ಲ, ಇಲ್ಲಿಗೆ ಬಂದ್ರೆ ಸಾಕು, ಆದ್ರೆ ಇಲ್ಲಿಗೆ ಬರಬೇಕೆಂದ್ರೆ ನಿಮಗೆ ಬಸ್ ಸೌಕರ್ಯ ಇಲ್ಲ, ಶಿರಸಿ ಹೊಸ ಬಸ್ ಸ್ಟ್ಯಾಂಡಿಂದ 1.5 ಕಿಮೀ ನಡೆಯಬೇಕು. ಅಥ್ವಾ ಆಟೋ ಮಾಡ್ಕೊಂಡು ಬರಬೇಕು. ಸ್ವಂತ ವಾಹನದ ಜೊತೆ ಫ್ಯಾಮಿಲಿ ಕರ್ಕೊಂಡ್ ಬಂದ್ರಂತೂ ಇಲ್ಲಿ ಫುಲ್ ಮಜಾ ಸಿಗೋದು ಪಕ್ಕಾ.
ಕ್ಯಾಪ್ಟನ್ ಕ್ಯಾಂಪ್ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಕ್ಯಾಪ್ಟನ್ ಸುಜಯ್ ಹೆಗಡೆ ಅವರ ಸಂಪರ್ಕ ಸಂಖ್ಯೆ: 93803 70235
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ