Sirsi Red Fort: ಶಿರಸಿಯಲ್ಲೇ ಇದೆ ಕೆಂಪುಕೋಟೆ! ಒಳಗಿದ್ದಾನೆ ಗಣಪ!

ಉತ್ತರ ಕನ್ನಡದ ಶಿರಸಿಯ ಝೂ ಸರ್ಕಲ್​ನಲ್ಲಿ ಕೆಂಪುಕೋಟೆಯಲ್ಲಿ ಗಣಪತಿ ಕೂರಿಸಲಾಗಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಕೆಂಪುಕೋಟೆ, ಕೋಟೆ ಒಳಗಡೆ ಗಣಪ. ಸಾಲಲ್ಲಿ ನಿಂತು ನಮಸ್ಕರಿಸೋ ಭಕ್ತರು. ಕೆಂಪುಕೋಟೆ ಎಂದು ಮಾತ್ರಕ್ಕೆ ಇದು ದೆಹಲಿರೋ ಕೆಂಪುಕೋಟೆ (Delhi Red Fort) ಅಂದ್ಕೋಬೇಡಿ. ಇದು ಉತ್ತರ ಕನ್ನಡದ ಶಿರಸಿಯಲ್ಲಿರೋ (Uttara Kannada Sirsi) ಕೆಂಪುಕೋಟೆ. ಈ ಕೆಂಪುಕೋಟೆನಾ ಕಟ್ಟಿರೋದು ಗಣಪತಿನಾ ಕೂರಿಸೋದಕ್ಕೆ! ಅಂತಂದ್ರೆ ನೀವು ನಂಬಲೇಬೇಕು. ಉತ್ತರ ಕನ್ನಡದ ಶಿರಸಿಯ ಝೂ ಸರ್ಕಲ್​ನಲ್ಲಿ (Sirsi Zoo Circle) ಕೆಂಪುಕೋಟೆಯಲ್ಲಿ ಗಣಪತಿನಾ ಕೂರಿಸಲಾಗಿದೆ. ಇಲ್ಲಿ ಸುಮಾರು 46 ವರ್ಷದಿಂದ ಗಣಪತಿನ (Ganapati Idol) ಕೂರಿಸ್ತಿದ್ದು, ಪ್ರತೀ ಬಾರಿಯು ಗಣಪತಿ ಪ್ರತಿಷ್ಠಾಪಿಸುವ ಪೆಂಡಾಲ್​ಗಳು ವಿಭಿನ್ನ ಶೈಲಿಯಲ್ಲಿರುತ್ತವೆ.

    ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಕೆಂಪು ಕೋಟೆ ಮಾದರಿಯನ್ನ ಆಯ್ದುಕೊಳ್ಳಲಾಗಿದೆ. ಸದ್ಯ ಶಿರಸಿಯ ಈ ಕೆಂಪುಕೋಟೆ ಗಣಪ ಭಕ್ತರು ಮಾತ್ರವಲ್ಲದೇ ಎಲ್ಲರ ಚಿತ್ತವನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ.

    ಇದನ್ನೂ ಓದಿ: Kadubu Recipe: ಸಿಹಿಸಿಹಿಯಾದ ಉತ್ತರ ಕನ್ನಡ ಸ್ಪೆಷಲ್ ಕಡುಬು ಮಾಡಿ! ಇಲ್ಲಿದೆ ನೋಡಿ ರೆಸಿಪಿ

    ಈ ಕೆಂಪುಕೋಟೆ ಒಳಗೆ ಆಸೀನನಾಗಿರುವ ಗಣೇಶನೂ ಅಷ್ಟೇ. ಚತುರ್ಭುಜ, ಸುಖಾಸೀನ, ರಾಜಗಾಂಭೀರ್ಯ ನೋಟವನ್ನು ಹೊಂದಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಗಣೇಶನ ಮೂರ್ತಿಯನ್ನ ಪ್ರಸಿದ್ಧ ಕಲಾವಿದ ಜಿ.ಡಿ. ಭಟ್ ಕೆಕ್ಕಾರ ತಯಾರಿಸಿದ್ರೆ, ದೆಹಲಿ ಮಾದರಿಯಲ್ಲಿ ಕೆಂಪುಕೋಟೆಯನ್ನ ರಾಮಕೃಷ್ಣ ಶಿರಾಲಿ ಹಾಗೂ ಸಂಗಡಿಗರು ನಿರ್ಮಿಸಿದ್ದಾರೆ.

    Sirsi Zoo Circle
    ಶಿರಸಿ ಕೆಂಪುಕೋಟೆ ನೊಡಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಇದನ್ನೂ ಓದಿ: Sirsi Marikamba Temple Buffalo: ಮಾರಿಕಾಂಬೆಯ ಪಟ್ಟದ ಕೋಣ! ಇದು ಬಾಹುಬಲಿಗಿಂತ ಅಜಾನುಬಾಹು!

    ಒಟ್ಟಿನಲ್ಲಿ ಶಿರಸಿಯ ಝೂ ಸರ್ಕಲ್​ನಲ್ಲಿ ನಿರ್ಮಿಸಲಾದ ಕೆಂಪುಕೋಟೆ ಗಣಪನು ಅತ್ಯಾಕರ್ಷಕವಾಗಿದ್ದು ಜನರು ಕೂಡಾ ದರ್ಶನ ಪಡೆಯುತ್ತಿದ್ದಾರೆ. ಅದ್ರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸವಿನೆನಪಿನಲ್ಲಿ ಕೆಂಪುಕೋಟೆಯೊಳಗೆ ಗಣಪತಿಯನ್ನ ನೋಡುವಂತಾಗಿರುವುದು ಸಾರ್ವಜನಿಕರಿಗೂ ಉತ್ಸಾಹ ಹೆಚ್ಚಿಸಿದೆ.
    Published by:guruganesh bhat
    First published: