ಉತ್ತರ ಕನ್ನಡ: ಚಟ್ನಿ ಅಂದ್ರೆ ಯಾರಿಗೆ ತಾನೇ ಇಷ್ಟ ಹೇಳಿ! ಅದ್ರಲ್ಲೂ ಇಡ್ಲಿ, ದೋಸೆಗಂತೂ ಚಟ್ನಿ ನೆಚ್ಚಿಕೊಂಡ್ರೇನೆ ಟೇಸ್ಟು. ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿ ಇದ್ರಂತೂ ಸೂಪರ್ರೋ ಸೂಪರ್. ಅದೆ ಇವ್ರು ತಯಾರಿಸೋ ಚಟ್ನಿಗೆ ಹುಳಿಯೇ ಬೇಕಿಲ್ಲ! ಅದ್ರ ಪಾಡಿಗೆ ಅದಾಗಿಯೇ ಹುಳಿ ಹುಳಿಯಾಗುತ್ತೆ. ಅರೆ! ಇದೆಂತಹಾ ಚಟ್ನಿ ಮಾರ್ರೆ ಅಂದ್ರ? ಈ ಸ್ಟೋರಿ ನೋಡಿದ್ರೆ ನಿಮ್ಗೇ ಗೊತ್ತಾಗುತ್ತೆ.
ಕೆಂಪು ಇರುವೆ ಚಟ್ನಿ!
ಯೆಸ್, ಹೀಗೆ ಇಡ್ಲಿ, ದೋಸಾ ಬದಲು ಗೆಣಸಿನ ಜೊತೆಗೆ ನೆಚ್ಚಿಕೊಂಡಿರೋ ಈ ಕ್ಯಾರೆಟ್ ಬಣ್ಣದ ಚಟ್ನಿ ಇದ್ಯಲ್ಲ, ಇದು ಸವಳಿ ಚಟ್ನಿ. ವಾವ್.. ಇದ್ಯಾವುದಿದು ಸವಳಿ ಚಟ್ನಿ? ಇದೆಲ್ಲಿ ಸಿಗುತ್ತೆ? ಅಂತಾ ನೀವ್ ಕೇಳಿದ್ರೆ, ಇದು ಕಾಡಲ್ಲಿ ಸಿಗುತ್ತೆ ಅನ್ತಾರೆ ಉತ್ತರ ಕನ್ನಡದ ಸಿದ್ಧಿ ಜನಾಂಗದವರು. ಅಷ್ಟಕ್ಕೂ ಇದು ಯಾವ್ ಸೊಪ್ಪು ಅಂತಾ ಕೇಳಿದ್ರೆ, ನೋ ಆನ್ಸರ್. ಯಾಕೆಂದ್ರೆ ಇದು ಯಾವುದೇ ಸೊಪ್ಪು ತರಕಾರಿನೂ ಅಲ್ಲ, ಸವಳಿ ಅಂದ್ರೆ ಅದ್ಯಾವ ಹಣ್ಣು ಕಾಯಿನೂ ಅಲ್ಲ, ಬದಲಿಗೆ ನಾವೆಲ್ಲ ಕಂಡ್ರೆ ದೂರ ಓಡಿ ಹೋಗೋ ಕೆಂಪು ಇರುವೆ!
ಸಿದ್ಧಿಗಳ ಅಡುಗೆ ಸ್ಪೆಷಲ್!
ನಿಜ, ಸವಳಿ ಚಟ್ನಿ ಅಂದ್ರೆ ಸಿದ್ಧಿ ಜನಾಂಗದ ಸಖತ್ ಟೇಸ್ಟಿ, ಭೋಜನಕ್ಕೆ ಬಳಸೋ ಕೆಂಪು ಇರುವೆ ಚಟ್ನಿ. ಇದ್ಯಾವುದು ಆಫ್ರಿಕಾ ಖಂಡದ ಅಡುಗೆನಾ ಅಂತಾ ಕೇಳ್ಬೇಡಿ. ಯಾಕಂದ್ರೆ ಸಿದ್ಧಿ ಜನಾಂಗದ ಮೂಲವೂ ದಕ್ಷಿಣ ಆಫ್ರಿಕಾವೇ ಆಗಿದೆ.
ಹೀಗೆ ಮಾಡ್ತಾರೆ ಸವಳಿ ಚಟ್ನಿ
ಇನ್ನು ಈ ಸವಳಿ ಚಟ್ನಿ ಮಾಡಬೇಕೆಂದರೆ ಮರ ಹತ್ಬೇಕು, ಅಲ್ಲಿರೋ ಕೆಂಪಿರುವೆ ಗೂಡನ್ನ ತೆಗೆದು ನಂತರ ಇರುವೆ, ಮೊಟ್ಟೆ,ಮರಿಗಳಿಗೆ ಉಪ್ಪು ಹಾಕಬೇಕು. ಅವು ಸತ್ತ ನಂತರ ಅವುಗಳನ್ನು ಬಾಣಲೆಯಲ್ಲಿ ಹುರಿದು, ನಂತರ ಶುಂಠಿ, ರಾಮಪತ್ರೆ, ಕರಿಬೇವು, ಸಾಸಿವೆ, ಜೀರಿಗೆ, ಅರಿಶಿನ ಎಲ್ಲವನ್ನೂ ಸೇರಿಸಿ ಮಸಾಲೆ ಮಾಡಿಕೊಳ್ಳಬೇಕು. ನಂತರ ಮಿಕ್ಸಿಗೆ ಹಾಕಿ ಅಥವಾ ಗುಂಡುಕಲ್ಲಲ್ಲಿ ರುಬ್ಬಿದ್ರೆ ರುಚಿಕರ ಸವಳಿ ಚಟ್ನಿ ರೆಡಿಯಾಗುತ್ತೆ.
ಇದನ್ನೂ ಓದಿ: Uttara Kannada: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!
ಆರೋಗ್ಯಕ್ಕೆ ಭಾರೀ ಬೆಸ್ಟ್ ಅಂತೆ!
ಇನ್ನೊಂದು ಕಡೆ ಇದಕ್ಕೆ ನೆಚ್ಚಿಕೊಳ್ಳೋಕೆ ಕಾಡುಗೆಣಸು ಬೇಯಿಸಿಕೊಂಡು ತಿನ್ನಬೇಕು. ಈ ಸವಳಿ ಚಟ್ನಿ ಆರೋಗ್ಯಕ್ಕೆ ಉತ್ತಮ ಅನ್ನೋದನ್ನ ಸಿದ್ಧಿ ಜನಾಂಗದ ಮಂದಿ ಕಂಡುಕೊಂಡಿದ್ದಾರೆ. ಹಾಗಾಗಿ ತಮ್ಮ ಊಟದ ಪ್ರಮುಖ ಆಹಾರವಾಗಿ ಇದನ್ನ ಇರಿಸಿಕೊಳ್ಳುತ್ತಾರೆ.
ಇದನ್ನೂ ಓದಿ: Khapri Temple: ಮದ್ಯದ ಅಭಿಷೇಕ, ಬೀಡಿ ಸಿಗರೇಟಿನ ಆರತಿ; ಕಾರವಾರದಲ್ಲಿ ಆಫ್ರಿಕಾ ಮೂಲದ ದೇವರ ಜಾತ್ರೆ!
ಒಟ್ಟಿನಲ್ಲಿ ಸಿದ್ಧಿ ಜನಾಂಗದವರು ತಯಾರಿಸುವ ಕೆಂಪು ಇರುವೆ ಚಟ್ನಿ ಅವರ ಆರೋಗ್ಯದ ಗುಟ್ಟಿನ ಜೊತೆಗೆ, ಆ ಜನಾಂಗದ ಆಹಾರ ಪದ್ಧತಿಯ ವೈವಿಧ್ಯತೆಯನ್ನು ತೋರಿಸಿಕೊಡುತ್ತಿದೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ