Uttara Kannada: ಪತ್ತೆಯಾಯ್ತು ಅಪರೂಪದ ರಣಗಂಬ! ಹೆಚ್ಚಿದ ಕುತೂಹಲ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂಕೋಲಾದಲ್ಲಿ ಅಪರೂಪದ ರಣಗಂಬ ಒಂದು ಪತ್ತೆಯಾಗಿದೆ. ಇದು ಈವರೆಗೆ ಪತ್ತೆಯಾಗಿರುವ ರಣಗಂಬದಲ್ಲೇ ವಿಶಿಷ್ಟವಾಗಿದೆ.

  • News18 Kannada
  • 3-MIN READ
  • Last Updated :
  • Uttara Kannada, India
  • Share this:

    ಅಂಕೋಲಾ: ವಿಶಿಷ್ಟ ವಾಸ್ತುಶಿಲ್ಪ ಹೊಂದಿರೋ ಕಂಬ. ಅದನ್ನ ಶುಚಿಗೊಳಿಸುತ್ತಿರೋ ಇತಿಹಾಸಕ್ತರು. ಹೌದು, ಇದು ಅಂತಿಂತ ಕಂಬವಲ್ಲ, ಅದ್ಯಾವುದೋ ರಾಜ ಮಹಾರಾಜರ ಕಾಲದ ಚರಿತ್ರೆ (History) ಹೇಳೋ ರಣಗಂಬ. ಅಂದಹಾಗೆ ಇದ್ರಲ್ಲಿ (Ranagambha) ಕೆತ್ತಲ್ಪಟ್ಟಿರೋ ಆ ಶಿಲ್ಪವಾದ್ರೂ ಏನು ಅಂತೀರಾ? ನಿಜಕ್ಕೂ ಇದು ನಿಮ್ಮ ಕುತೂಹಲ ಹೆಚ್ಚಿಸೋದು ಗ್ಯಾರಂಟಿ.


    ಯೆಸ್, ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಮಾಬಗಿಯಲ್ಲಿ ಸಿಕ್ಕ ಈ ವಿಶೇಷವಾದ ರಣಗಂಬ ಮೇಲ್ನೋಟಕ್ಕೆ ಕುದುರೆ, ಮಹಿಳೆಯರು, ಪುರುಷರ ಕೆತ್ತನೆಯಂತಿದ್ರೆ ಇತಿಹಾಸಾಕ್ತರು ಅದರ ಆಳವಾದ ಅಧ್ಯಯನದ ಬಳಿಕ ಇದು ಪ್ರಸವ ಕಾಲದ ಕೆತ್ತನೆ ಎಂದಿದ್ದಾರೆ. ಅಂದ್ರೆ ಶಿಶು ಜನಿಸುವ ಸಂದರ್ಭದಲ್ಲಿನ ಕೆತ್ತನೆ ಇದು ಎಂದು ಅಂದಾಜಿಸಲಾಗಿದೆ.


    ಮಹತ್ವದ ಶೋಧ
    ನಿಜಕ್ಕೂ ಇದು ಅಪರೂಪದ ಕೆತ್ತನೆಯುಳ್ಳ ರಣಗಂಬವೆಂದೇ ಭಾವಿಸಲಾಗಿದೆ. ದೇವಾಲಯದ ಭಿತ್ತಿಗಳಲ್ಲಿ ಈ ಬಗೆಯ ಶಿಲ್ಪಗಳು ದೊರೆತ ಉದಾಹರಣೆಗಳಿವೆ. ಆದರೆ ವೀರಗಲ್ಲಿನಲ್ಲಿ ಈ ರೀತಿಯ ಶಿಲ್ಪವಿರುವುದು ಈ ಹಿಂದೆ ಪತ್ತೆಯಾದ ವಿವರಗಳಿಲ್ಲ. ಆದ್ದರಿಂದ ಇದೊಂದು ಮಹತ್ವದ ಶೋಧವೆನಿಸಿದೆ.


    ಪತ್ತೆಯಾಗಿದ್ದು ಇಲ್ಲಿ!
    ಮಾಬಗಿ ಗ್ರಾಮದಲ್ಲಿ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಾತು ಗೌಡರ ಜಮೀನಿನಲ್ಲಿ ಈ ರಣಗಂಬ ಪತ್ತೆಯಾಗಿದೆ. ಒಂದು ಅಡಿ ಅಗಲ, ದಪ್ಪ ಮತ್ತು ಏಳು ಅಡಿ ಉದ್ದವಿರುವ ಈ ಸ್ಥಂಭದ ಮೂರು ಮುಖದಲ್ಲಿ ಶಿಲ್ಪಗಳಿದ್ದು, ಒಂದು ಮುಖದಲ್ಲಿ ಏನನ್ನೂ ಚಿತ್ರಿಸದೇ ಖಾಲಿ ಬಿಡಲಾಗಿದೆ.


    ಇದನ್ನೂ ಓದಿ: Karwar: ಮದುವೆಗೂ ಮುನ್ನ ಹೊಕ್ಕಳ ಬಳಿ ಸೂಜಿಯಿಂದ ದಾರ ಪೋಣಿಸುವ ಜಾತ್ರೆ!




    ಜೊತೆಗೆ, ಕಾಲಾಳುಗಳ, ಕುದುರೆ ಸವಾರರ ಹಾಗೂ ಗಜಪಡೆಗಳ ಯುದ್ಧ ಚಿತ್ರಣಗಳನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ. ಅಷ್ಟೇ ಅಲ್ದೇ, ಯುದ್ಧಗಳಲ್ಲಿ ತೊಡುವ ವೇಷ ಭೂಷಣ, ಬಳಸುತ್ತಿದ್ದ ಆಯುಧಗಳನ್ನು ಕಾಣಬಹುದಾಗಿದೆ.


    ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!


    ಈ ಕಂಬಗಳಲ್ಲಿ ದೊರೆಯುವ ಶಾಸನಗಳ ಆಧಾರದಿಂದ ನಾಗವರ್ಮರಸನ ಕಾಲದ್ದಾಗಿದೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ರಣಗಂಬ ನೋಡಲೆಷ್ಟು ವಿಶೇಷವಾಗಿದೆಯೋ ಅದರಲ್ಲಿರೋ ವಿಷಯಗಳು ಕೂಡಾ ಅಷ್ಟೇ ಕುತೂಹಲಕರವಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: