• Home
  • »
  • News
  • »
  • uttara-kannada
  • »
  • Uttara Kannada: ಕರುನಾಡ ಅಪ್ರತಿಮ ಕಲಿಗಳ ನೃತ್ಯರೂಪಕ; ಇತಿಹಾಸದ ಕಥೆಗಳ ಅನಾವರಣ

Uttara Kannada: ಕರುನಾಡ ಅಪ್ರತಿಮ ಕಲಿಗಳ ನೃತ್ಯರೂಪಕ; ಇತಿಹಾಸದ ಕಥೆಗಳ ಅನಾವರಣ

ನೃತ್ಯರೂಪಕ ಸವಿಯಿರಿ

"ನೃತ್ಯರೂಪಕ ಸವಿಯಿರಿ"

ಭರತನಾಟ್ಯ ರೂಪಕದ ಕಲಾವಿದರು ಮನಸೆಳೆದರೆ, ಸ್ಥಳೀಯ ಕಲಾವಿದರು ಕೂಡಾ ಸಿದ್ದಿ ಕುಣಿತ, ನವಿಲು ಕುಣಿತದ ಮೂಲಕ ಮೆರುಗು ನೀಡಿದರು.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಕಣ್ಮುಂದೆಯೇ ರಾಣಿ ಅಬ್ಬಕ್ಕ, ಕಾಳುಮೆಣಸಿನ‌ ರಾಣಿ ಚೆನ್ನಭೈರಾದೇವಿ!
    ಮೈಯೆಲ್ಲ ರೋಮಾಂಚಕ ಅನಿಸೋ ಕನ್ನಡ ನಾಡಿನ ಈ ರಾಣಿಯರ ಅಪ್ರತಿಮ ಸಾಹಸ, ಅಚಲ ಹೋರಾಟ! ಜೊತೆಗೆ ಸಿದ್ದಿ ನೃತ್ಯ, ನವಿಲುಗಳ ಕುಣಿತ! ಬೆಂಗಳೂರಿನ (Bengaluru) ಇಂಟರ್‌ನ್ಯಾಷನಲ್ ಆರ್ಟ್ ಎಂಡ್ ಕಲ್ಚರ್‌ನ ಕಲಾವಿದರು ಉತ್ತರ ಕನ್ನಡ ಜಿಲ್ಲೆಯ (Uttara Kannada) ದಾಂಡೇಲಿಗೆ ಆಗಮಿಸಿ ನಡೆಸಿಕೊಟ್ಟ ಕಾರ್ಯಕ್ರಮದ ಝಲಕ್ ಇದು.


    ಸಿದ್ದಿ ಕುಣಿತ, ನವಿಲು ಕುಣಿತದ ಮೆರುಗು
    ಭರತನಾಟ್ಯ ರೂಪಕದ ಕಲಾವಿದರು (Bharatanatya Artist) ಗಮನಸೆಳೆದರೆ, ಸ್ಥಳೀಯ ಕಲಾವಿದರು ಕೂಡಾ ಸಿದ್ದಿ ಕುಣಿತ, ನವಿಲು ಕುಣಿತದ ಮೂಲಕ ಮೆರುಗು ನೀಡಿದರು.


    ಇದನ್ನೂ ಓದಿ: Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ


    ಇತಿಹಾಸ ತಿಳಿಸುವ ಪ್ರಯತ್ನ
    ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗ್ತಿದೆ. ನೃತ್ಯರೂಪಕದ ಮೂಲಕ ನಮ್ಮ ಇತಿಹಾಸದ ಕಥೆಗಳನ್ನು ಜನರಿಗೆ ತಿಳಿಸಬೇಕು ಅನ್ನೋದೆ ಇಂಟರ್‌ನ್ಯಾಷನಲ್ ಕಲ್ಚರ್ ಎಂಡ್ ಆರ್ಟ್ ಸಂಸ್ಥೆಯ ಉದ್ದೇಶ.


    ಇದನ್ನೂ ಓದಿ: Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ


    ಹೀಗಾಗಿ ಕರುನಾಡ ಅಪ್ರತಿಮ ಕಲಿಗಳ ಜೀವನಗಾಥೆಯನ್ನು ನೃತ್ಯರೂಪಕದಲ್ಲಿ ತೆರೆದಿಡಲಾಯ್ತು. ಒಟ್ಟಾರೆ ದಾಂಡೇಲಿಯ ಕಲಾರಸಿಕರು ಚಂದದ ಕಾರ್ಯಕ್ರಮವೊಂದನ್ನು ಕಣ್ತುಂಬಿಸಿಕೊಂಡರು.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: