Karwar: ಏಳು ಗ್ರಾಮದ ದೇವರಿಗೆ ಸಮುದ್ರ ಕಿನಾರೆಯಲ್ಲಿ ಪೂಜೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಎಲ್ಲ ಊರಿನ ಜನರು ಇಲ್ಲಿ ಸೇರುವುದರಿಂದ ಏನೇ ವೈಮನಸ್ಸುಗಳಿದ್ದರೂ ಅದನ್ನು ಬಿಟ್ಟು ಎಲ್ಲರೂ ಒಂದಾಗಿರುವಂತೆ ಮಾಡಲು ಈ ಜಾತ್ರೆಯನ್ನ ಹಿರಿಯರು ಆಚರಿಸಿಕೊಂಡು ಬಂದಿದ್ದಾರೆ.

  • News18 Kannada
  • 3-MIN READ
  • Last Updated :
  • Karwar, India
  • Share this:

    ಉತ್ತರ ಕನ್ನಡ: ಒಂದೆಡೆ ಹರಹರ ಮಹದೇವ ಘೋಷಣೆ ಕೂಗುತ್ತಾ ಪಲ್ಲಕ್ಕಿಗಳನ್ನ ಹೊತ್ತು ತರುತ್ತಿರುವ ಭಕ್ತರ ದಂಡು, ಇನ್ನೊಂದೆಡೆ ಕಡಲತೀರದಲ್ಲಿ ಮರಳಿನ ಶಿವಲಿಂಗ ಮಾಡಿ ವಿವಿಧ ಪೂಜಾ ಕಾರ್ಯದಲ್ಲಿ (Special Puja) ತೊಡಗಿರುವ ಜನರು. ಮತ್ತೊಂದೆಡೆ ಕಡಲಿಗೆ ಇಳಿದು ಸ್ನೇಹಿತರು, ಕುಟುಂಬದವರ ಜೊತೆ ನೀರಿನಲ್ಲಿ ಎಂಜಾಯ್ ಮಾಡುತ್ತಿರುವ ಜನರು. ಅರೆ! ಇದೇನಪ್ಪಾ ಇಂತಹ ವಿಶೇಷ ಉತ್ಸವ (Festival) ಅಂದ್ಕೊಂಡ್ರ? ಹಾಗಿದ್ರೆ ಈ ಆಚರಣೆ ಬಗ್ಗೆ ಡೀಟೆಲ್ ಆಗಿ ಹೇಳ್ತೀವಿ ನೋಡಿ.


    ಜಾತ್ರಾ ಸಂಭ್ರಮದಲ್ಲಿ ಮಿಂದು ಮುಳುಗಿದ ಕಾರವಾರ
    ಕಡಲತಡಿಯ ತುಂಬಾ ಹಬ್ಬದ ವಾತಾವರಣ ಮೂಡಿಸಿದ ಈ ದೃಶ್ಯ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯ ಗಾಂವಗೇರಿಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ. ಪ್ರತಿವರ್ಷದಂತೆ ಈ ವರ್ಷ ಸಹ ಗಾಂವಗೇರಿಯಲ್ಲಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ಸಾಮಾನ್ಯವಾಗಿ ಈ ಜಾತ್ರಾ ಮಹೋತ್ಸವವು ಶಿವರಾತ್ರಿಯ ಮಾರನೇ ದಿನ ಅಥವಾ ಶಿವರಾತ್ರಿ ನಂತರ ಬರುವ ಅಮವಾಸ್ಯೆಯ ದಿನ ನಡೆಯುತ್ತದೆ. ಭಕ್ತರೆಲ್ಲರೂ ಈ ಜಾತ್ರಾ ಮಹೋತ್ಸವದಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕುತ್ತಾರೆ.


    ಏಳು ಗ್ರಾಮದ ದೇವರ ಪಲ್ಲಕ್ಕಿ
    ಜಾತ್ರೆಯಲ್ಲಿ ಅಸ್ನೋಟಿ, ಮಾಜಾಳಿ, ಕೃಷ್ಣಾಪುರ, ಚಿತ್ತಾಕುಲ, ಮುಡಿಗೇರಿ, ಹೊಸಳ್ಳಿ ಗ್ರಾಮಗಳಿಂದ ಬೇರೆ ಬೇರೆ ದೇವರುಗಳನ್ನ ಪಲ್ಲಕ್ಕಿಯಲ್ಲಿ ಕಡಲ ತೀರಕ್ಕೆ ತರಲಾಗುತ್ತದೆ. ಬಳಿಕ ಪಲ್ಲಕ್ಕಿಯಲ್ಲಿನ ದೇವರನ್ನ ಸಮುದ್ರದಲ್ಲಿ ಸ್ನಾನ ಮಾಡಿಸುವುದು ಇಲ್ಲಿನ ವಿಶೇಷ. ಅದರಂತೆ ಈ ಬಾರಿ ಸಹ ಪಲ್ಲಕ್ಕಿಯಲ್ಲಿ ತಂದ ಏಳು ಗ್ರಾಮದ ದೇವರುಗಳಿಗೆ ಸಮುದ್ರದ ನೀರು ಹಾಕಿ ಸ್ನಾನ ಮಾಡಿಸಿ ದರ್ಶನಕ್ಕೆ ಇರಿಸಲಾಯಿತು.


    ಭಕ್ತ ಸಾಗರ
    ಜಾತ್ರೆಗೆ ಬಂದಂತಹ ಭಕ್ತರು ಸಮುದ್ರ ಸ್ನಾನ ಮಾಡಿ ಪಲ್ಲಕ್ಕಿಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಮುಕ್ತಾಯಗೊಳಿಸಿದರು. ಇನ್ನು ಗಾಂವಗೇರಿಯಲ್ಲಿ ನಡೆಯುವ ಈ ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಗೋವಾ, ಮಹಾರಾಷ್ಟ್ರ, ಸೇರಿದಂತೆ ವಿವಿಧ ಭಾಗಗಳಿಂದ ಸಹ ಭಕ್ತರು ಆಗಮಿಸಿ ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯ ದಿನದಂದು ಉಪವಾಸ ಮಾಡಿ ನಂತರ ಸಮುದ್ರಸ್ನಾನ ಮಾಡುವ ಮೂಲಕ ಉಪವಾಸ ಬಿಡುವುದು ಸಹ ಈ ಜಾತ್ರೆಯ ವಿಶೇಷ.


    ಇದನ್ನೂ ಓದಿ: Uttara Kannada: ಈ ಹಳ್ಳಿ ಮಕ್ಕಳು ತಾವೇ ಡ್ರೋನ್ ಮಾಡಿ ಹಾರಿಸ್ತಿದ್ದಾರೆ ನೋಡಿ!




    ಹಲವು ಊರುಗಳ ಜನರನ್ನು ಒಂದುಗೂಡಿಸುವ ಜಾತ್ರೆ
    ಅಲ್ಲದೇ, ಸಮುದ್ರ ಸ್ನಾನಗಳಿಂದ ಪಾಪಗಳನ್ನ ತೊಳೆದು, ರೋಗ ರುಜಿನಗಳು ದೂರಾಗುವ ನಂಬಿಕೆ ಇದೆ. ಜೊತೆಗೆ ಎಲ್ಲ ಊರಿನ ಜನರು ಇಲ್ಲಿ ಸೇರುವುದರಿಂದ ಏನೇ ವೈಮನಸ್ಸುಗಳಿದ್ದರೂ ಅದನ್ನು ಬಿಟ್ಟು ಎಲ್ಲರೂ ಒಂದಾಗಿರುವಂತೆ ಮಾಡಲು ಈ ಜಾತ್ರೆಯನ್ನ ಹಿರಿಯರು ಆಚರಿಸಿಕೊಂಡು ಬಂದಿದ್ದಾರೆ.


    ಇದನ್ನೂ ಓದಿ: House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್


    ಒಟ್ಟಿನಲ್ಲಿ ಕಡಲತಡಿಯಲ್ಲಿ ಹಬ್ಬದ ವಾತಾವರಣದ ಜೊತೆಗೆ ಭಕ್ತಿಯ ಕಡಲನ್ನೇ ಹರಿಸುವ ಈ ಜಾತ್ರೆಯು ಸಮುದ್ರ ಕಿನಾರೆಯಲ್ಲಿ ಸಂಪನ್ನಗೊಳ್ಳುತ್ತವೆ.

    Published by:ಗುರುಗಣೇಶ ಡಬ್ಗುಳಿ
    First published: