Uttara Kannada: ಮಲೆನಾಡಿಗೆ ಆಗಮಿಸಿದ ಮರುಭೂಮಿಯ ಅತಿಥಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೀಗೆ ಸೊಲ್ಲಾಪುರದಿಂದ ಪ್ರತಿ ವರ್ಷ ಬೇರೆ ಬೇರೆ ಊರುಗಳಿಗೆ ಹೊರಡುವ ಈ ಒಂಟೆಗಳ ಸವಾರಿ ಹಳಿಯಾಳದಲ್ಲಿ ಕಂಡುಬಂತು. ಮಕ್ಕಳಿಗಂತೂ ಮರುಭೂಮಿಯ ಪ್ರಾಣಿಯ ಕಂಡು ಸಂಭ್ರಮವೋ ಸಂಭ್ರಮ!

  • Share this:

    ಉತ್ತರ ಕನ್ನಡ: ಸೊಪ್ಪು, ಸೌದೆ ಜೊತೆಗೆ ಮಾಲಿಕನ ಹೊತ್ತು ಸಾಗ್ತಿರೋ ಒಂಟೆಗಳು. ಊರಿಗೆ ಬಂದ ವಿಶೇಷ ಅತಿಥಿಯನ್ನ (Special Guest) ಕಂಡು ಫಾಲೋ ಮಾಡ್ತಿರೋ ಮಕ್ಕಳು. ಅಂದಹಾಗೆ ಇದು ಯಾವ ಮರುಭೂಮಿಯೂ (Desert) ಅಲ್ಲ, ಅಡ್ವೆಂಚರ್ ಪಾರ್ಕೂ ಅಲ್ಲ, ಅರಬ್ಬೀ ಕಡಲ ತೀರವೂ ಅಲ್ಲ.ಮತ್ಯಾಕೆ ಇಲ್ಲಿ ಈ ಮರಳುಗಾಡಿನ ಹಡಗುಗಳು ಅಂತೀರಾ? ಆ ಕುರಿತ ಕಥೆಯನ್ನ (Camel In Uttara Kannada)  ಹೇಳ್ತೀವಿ ನೋಡಿ.

    ಹೀಗೆ ಉತ್ತರ ಕನ್ನಡದ ಹಳಿಯಾಳದಲ್ಲೇ ಒಂಟೆ ಸವಾರಿ ಮಾಡ್ತಾ ಸಾಗೋ ರಾಜಸ್ಥಾನದ ಮಂದಿ ಕಂಡುಬಂದಿದ್ದು. ಸದ್ಯ ಸೊಲ್ಲಾಪುರದಲ್ಲಿ ನೆಲೆಸಿರುವ ಇವರ ಮುಖ್ಯ ಕಸುಬು ಒಂಟೆ ಸವಾರಿ. ಊರೂರಿಗೆ ತಾವು ಸಾಕಿದ ಒಂಟೆಗಳನ್ನ ಕರೆದೊಯ್ದು ಅದನ್ನ ಸಾರ್ವಜನಿಕ ಸ್ಥಳಗಳಲ್ಲಿ ಸವಾರಿ ನಡೆಸು ಕೆಲಸ ಮಾಡುತ್ತಾರೆ.


    ಪ್ರವಾಸಿಗರಿಗೆ ಮೋಜು, ಮಾಲೀಕರ ಹೊಟ್ಟೆಪಾಡು
    ಹೀಗೆ ಒಂಟೆಗಳು ತನ್ನ ಮೈಮೇಲೆ ಹತ್ತಿಕೊಂಡವರನ್ನ ಹೊತ್ತು ಸಾಗುತ್ತವೆ. ಇದೊಂಥರಾ ಪ್ರವಾಸಿಗರಿಗೆ ಮೋಜೆನಿಸಿದರೆ, ಮಾಲೀಕರಿಗೆ ಹೊಟ್ಟೆಪಾಡು, ಒಂಟೆಗಂತೂ ಬದುಕು ಅನ್ನೋ ಹಾಗೆ ಭಾಸವಾಗುತ್ತೆ.


    ಇದನ್ನೂ ಓದಿ: Uttara Kannada: ಇವರ ಮನೆಯಲ್ಲೇ ಪರಿವಾರ ಸಮೇತ ನೆಲೆಸಿದ್ದಾನೆ ಶ್ರೀರಾಮ!




    ಒಂಟೆ ಕಂಡು ಮಕ್ಕಳಿಗೆ ಸಂಭ್ರಮ
    ಹೀಗೆ ಸೊಲ್ಲಾಪುರದಿಂದ ಪ್ರತಿ ವರ್ಷ ಬೇರೆ ಬೇರೆ ಊರುಗಳಿಗೆ ಹೊರಡುವ ಈ ಒಂಟೆಗಳ ಸವಾರಿ ಹಳಿಯಾಳದಲ್ಲಿ ಕಂಡುಬಂತು. ಮಕ್ಕಳಿಗಂತೂ ಮರುಭೂಮಿಯ ಪ್ರಾಣಿಯ ಕಂಡು ಸಂಭ್ರಮವೋ ಸಂಭ್ರಮ. ಸೊಪ್ಪು, ಸೌದೆಯ ಹೊತ್ತು ಯಜಮಾನನ ಜೊತೆ ಸಾಗುವ ಅದರ ಸ್ಥಿತಿಯಂತೂ ತುಂಬಾ ಕರುಣಾಜನಕ ಎಂದೂ ಭಾಸವಾಗುತ್ತಿತ್ತು.


    ಇದನ್ನೂ ಓದಿ: Uttara Kannada: 2 ಸಾವಿರಕ್ಕಿಂತ ಕಡಿಮೆ ಹಣಕ್ಕೆ ಅದ್ಭುತ ಕೃಷಿ ಉಪಕರಣ ತಯಾರಿಸಿದ ವಿದ್ಯಾರ್ಥಿಗಳು!


    ಮನರಂಜನೆ ನೀಡಿದ ಮರುಭೂಮಿಯ ಜೀವಿ
    ಒಟ್ಟಿನಲ್ಲಿ ಆರಾಮದಾಯಕ ಸವಾರಿ ಮಾಡಲು ಸೂಕ್ತವೆನಿಸುವ ಎತ್ತರದ ಪ್ರಾಣಿ ಒಂಟೆ ಅದೆಷ್ಟೋ ಜನರ ಪಾಲಿನ ಮನರಂಜನೆಗೂ ಕಾರಣವಾಗಿದೆ.


    ವರದಿ: ಎ.ಬಿ.ನಿಖಿಲ್,  ನ್ಯೂಸ್ 18 ಕನ್ನಡ ಡಿಜಿಟಲ್ ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: