ಇದೇನಿದು ಪೈಪು ಹಿಡಿದುಕೊಂಡು (PVC Pipe) ಗನ್ ಥರಾ ಫೋಸ್ ಕೊಡ್ತಿದಾರಲ್ಲ ಅನ್ಕೊಂಡ್ರಾ. ಹೌದು ಕಣ್ರೀ, ಇದು ಗನ್ನೇ. ಹೆಂಗೆ ಸಿಡಿಯುತ್ತೆ ನೋಡಿ. ಒಂದ್ಸಲ ದೂರದಲ್ಲಿದ್ದು ಸೌಂಡ್ ಕೇಳ್ದೋನು ಇಲ್ಲೇನು ಶೂಟೌಟ್ ನಡೀತಾ ಅಂದ್ಕೊಂಡು ಬೆಚ್ಚಿ ಬೀಳೋದು ಗ್ಯಾರಂಟಿ! ಯಾಕಂದ್ರೆ ಈ ಪೈಪ್ ಗನ್ (PVC Pipe Gun) ಸದ್ದು ಇದ್ಯಲ್ಲ ಯಾವ ಫೈರ್ ಗನ್ಗಿಂತಲೂ ಕಡಿಮೆಯೇನಿಲ್ಲ. ಹೌದು, ಇದರ ಸೌಂಡ್ ಕೇಳಿದ್ರೆ ಮನುಷ್ಯನೇ ಬೆಚ್ಚಿ ಬೀಳ್ತಾನೆ. ಇನ್ನು ಪ್ರಾಣಿ ಪಕ್ಷಿಗಳನ್ನ ಕೇಳ್ಬೇಕೆ? ಈ ಗನ್ ಸಿಡಿದ್ರೆ ಮಂಗಗಳಂತೂ (Monkey Problem) ಮಂಗಮಾಯವಾಗೋದ್ರಲ್ಲಿ ಡೌಟಿಲ್ಲ.
ಈ ನಾಟಿ ಗನ್ ಅನ್ನ ಸೊರಬ ಮೂಲದ ಯುವಕರಾದ ಪ್ರದೀಪ್ ಮತ್ತು ಚಂದ್ರು ಅವರು ಕಂಡು ಹಿಡಿದಿದ್ದಾರೆ. ಕೃಷಿಕರು ಎದುರಿಸುತ್ತಿರೋ ಪ್ರಾಣಿಗಳ ಉಪಟಳದಿಂದಾಗಿ ಈ ಪೈಪ್ ಗನ್ಗೆ ಒಳ್ಳೆ ಮಾರ್ಕೆಟ್ ಸಿಗ್ತಿದೆ.
ಈ ಗನ್ಗೆ ಇದೆ ಭಾರೀ ಡಿಮ್ಯಾಂಡ್
ಮಲೆನಾಡಿನಲ್ಲಂತೂ ಈ ಪೈಪ್ ಗನ್ಗೆ ಒಳ್ಳೆ ಡಿಮ್ಯಾಂಡ್ ಇದೆ. ಸೊರಬದ ಈ ಯುವಕ ಉತ್ತರ ಕನ್ನಡದಲ್ಲೂ ಸಖತ್ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ರಸ್ತೆ ಬದಿ ನಿಂತು ಪೈಪ್ ಗನ್ ಮಾರಾಟ ಮಾಡುತ್ತಿದ್ದು ಹೊಲ, ಗದ್ದೆ, ತೋಟ ಹೊಂದಿರೋ ಕೃಷಿಕರು ಸುಲಭವಾಗಿ ಆಕರ್ಷಿತರಾಗುತ್ತಿದ್ದಾರೆ.
ಮಂಗಗಳ ಉಪಟಳಕ್ಕೆ ಹೀಗೆ ಮಾಡಬಹುದಂತೆ
ಮುಂಡಗೋಡ, ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಂಗಗಳ ಉಪಟಳ ಜಾಸ್ತಿ. ಹಾಗಾಗಿ ಅದನ್ನ ನಿಯಂತ್ರಿಸಲೆಂದೇ ಈ ಪೈಪ್ ಗನ್ ಕಂಡು ಹಿಡಿಯಲಾಗಿದೆ. ಇಲ್ಲಿ ಎರಡು ಬೇರೆ ಬೇರೆ ಗಾತ್ರದ ಪೈಪನ್ನ ಗನ್ ಆಕಾರದಲ್ಲಿ ಜೋಡಿಸಿ ನಡುವೆ ಒಂದು ಹೋಲ್ ಮಾಡಲಾಗಿದೆ.
ಇದನ್ನೂ ಓದಿ: Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ
ಅದರಲ್ಲಿ ಕಾರ್ಪೆಟ್ ಕಲ್ಲು ಹಾಕಿ ಅದರ ಮೇಲೆ ಚೂರು ನೀರು ಹೊಯ್ದು ಆ ಹೋಲನ್ನು ಮುಚ್ಚಿ ಹಿಂಬದಿ ಇರುವ ಲೈಟರ್ ಅನ್ನು ಪುಶ್ ಮಾಡಿದರೆ ಸಾಕು, ಫೈರಿಂಗ್ ಜೊತೆ ಸದ್ದಾಗುತ್ತವೆ.ಈ ಒಂದು ಪೈಪ್ ಗನ್ ಮಾರುಕಟ್ಟೆ ಬೆಲೆ 250 ರೂಪಾಯಿ. ಹೀಗೆ ಒಮ್ಮೆ ಖರೀದಿಸಿದರೆ ತುಂಬಾ ಬಾಳಿಕೆ ಬರೋ ಗನ್ ಕೂಡಾ ಇದು. ಕಾರ್ಪೆಟ್ ಕಲ್ಲು ತುಂಬಿ ಹನಿ ನೀರು ಹಾಕಿದರೆ ಸಾಕು ನಿಮ್ಮ ಪೈಪ್ ಗನ್ ಫೈರ್ ಗನ್ ಆಗಿ ಬದಲಾಗ್ತದೆ.
ಇದನ್ನೂ ಓದಿ: Success Story: ಜೇನುತುಪ್ಪವೊಂದೇ ಅಲ್ಲ, ಮೇಣದಿಂದಲೂ ಲಾಭ ಗಳಿಸಬಹುದು!
ಹೀಗೆ ಪ್ರಾಣಿಗಳ ಉಪಟಳದಿಂದ ರೈತರೇನಾದರೂ ಬೇಸತ್ತಿದ್ದರೆ ಈ ನಾಟಿ ಗನ್ ಅಥವಾ ಪೈಪ್ ಗನ್ ಸಖತ್ ವರ್ಕೌಟ್ ಆಗೋದ್ರಲ್ಲಿ ಡೌಟಿಲ್ಲ. ನೀವೂ ನಿಮ್ಮ ತೋಟ, ಹೊಲದಲ್ಲಿ ಒಮ್ಮೆ ಟ್ರೈ ಮಾಡಬಹುದು ನೋಡಿ.
ವರದಿ:
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ