• Home
  • »
  • News
  • »
  • uttara-kannada
  • »
  • Puneeth Rajkumar: ಗಂಧದಗುಡಿಯಲ್ಲಿ ಉತ್ತರ ಕನ್ನಡ, ಕನ್ನಡಿಗ!

Puneeth Rajkumar: ಗಂಧದಗುಡಿಯಲ್ಲಿ ಉತ್ತರ ಕನ್ನಡ, ಕನ್ನಡಿಗ!

ಪುನೀತ್‌ ರಾಜ್‌ಕುಮಾರ್ ಅಭಿನಯದ ಗಂಧದಗುಡಿ

ಪುನೀತ್‌ ರಾಜ್‌ಕುಮಾರ್ ಅಭಿನಯದ ಗಂಧದಗುಡಿ

ಗಂಧದಗುಡಿ ಸಿನಿಮಾದಲ್ಲಿ ಉತ್ತರ ಕನ್ನಡದ ದಟ್ಟ ಅಡವಿಯನ್ನು ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಕಾಳಿ ಕಣಿವೆಯಲ್ಲಿ ಅಪ್ಪು ಓಡಾಡುವ, ಉತ್ತರ ಕನ್ನಡದ ಜೀವ ವೈವಿಧ್ಯ ದೃಶ್ಯಗಳು ಅಭಿಮಾನಿಗಳ ಮನಸೂರೆಗೊಳ್ಳುತ್ತಿವೆ.

  • News18 Kannada
  • Last Updated :
  • Uttara Kannada, India
  • Share this:

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗಂಧದಗುಡಿ ಬಿಡುಗಡೆಗೊಂಡು ಅಭಿಮಾನಿಗಳನ್ನು ರಂಜಿಸುತ್ತಿದೆ.  ಇಂತಹ ಗಂಧದಗುಡಿ ಚಿತ್ರವನ್ನು (Gandhadagudi Movie)  ಉತ್ತರ ಕನ್ನಡ ಜಿಲ್ಲೆಯ (Uttara Kannada) ಬನವಾಸಿ ಮೂಲದ ಪ್ರಕೃತಿ ಎನ್ ಬನವಾಸಿಯವರ ಅಡಿಬರಹ ಅಥವಾ ಸಬ್​ಟೈಟಲ್ಸ್​ ರೂಪಿಸಿದ್ದಾರೆ. ಇದು ಉತ್ತರ ಕನ್ನಡ ಜಿಲ್ಲೆಯ ನಾಗರಿಕರಲ್ಲಿ ಜನರಲ್ಲಿ ಅಭಿಮಾನ ಮೂಡಿಸಿದೆ.  ಉತ್ತರ ಕನ್ನಡದ ಅರಣ್ಯದಲ್ಲೂ ಗಂಧದಗುಡಿ ಶೂಟಿಂಗ್ (Gandhadagudi Shooting)  ನಡೆದಿರುವ ಬೆನ್ನಲ್ಲೇ ಚಿತ್ರ ನಿರ್ಮಾಣದಲ್ಲೂ ಉತ್ತರ ಕನ್ನಡಿಗರು ಕೆಲಸ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. 


    ಪ್ರಕೃತಿ ಎನ್ ಬನವಾಸಿ ಅವರು ಅವರು ಹಲವು  ವರ್ಷದಿಂದ ಪುನೀತ್ ಅವರ ನಿಕಟವರ್ತಿಯಾಗಿದ್ದರು. ಪುನೀತ್ ರಾಜ್​ಕುಮಾರ್ ಹಾಗೂ ಅವರು ಇಬ್ಬರೂ ಸೇರಿ ಡಾ. ರಾಜ್​ಕುಮಾರ ಅವರ ಬಗ್ಗೆ ಪುಸ್ತಕ ಬರೆದದ್ದನ್ನು ಇಲ್ಲಿ ಸ್ಮರಿಸಬಹುದು.


    ಉತ್ತರ ಕನ್ನಡದ ದಟ್ಟ ಅಡವಿಯ ವೈಭವ
    ಅಷ್ಟೇ ಅಲ್ಲದೇ ಗಂಧದಗುಡಿ ಸಿನಿಮಾದಲ್ಲಿ ಉತ್ತರ ಕನ್ನಡದ ದಟ್ಟ ಅಡವಿಯನ್ನು ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಕಾಳಿ ಕಣಿವೆಯಲ್ಲಿ ಅಪ್ಪು ಓಡಾಡುವ, ಉತ್ತರ ಕನ್ನಡದ ಜೀವ ವೈವಿಧ್ಯ ದೃಶ್ಯಗಳು ಅಭಿಮಾನಿಗಳ ಮನಸೂರೆಗೊಳ್ಳುತ್ತಿವೆ.


    ನೇತ್ರಾಣಿ ದ್ವೀಪದಾಳದಲ್ಲಿ ಅಪ್ಪು ಪಯಣ
    ನೇತ್ರಾಣಿ ದ್ವೀಪ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೆ. ಕರಾವಳಿಯ ಬದಿಯಲ್ಲಿಯೇ ಈ ದ್ವೀಪ ಇರೋದು ವಿಶೇಷ. ಮುರುಡೇಶ್ವರದಿಂದ 10 ಕಿಲೋ ಮೀಟರ್ ದೂರದಲ್ಲಿಯೇ ಇದೆ. ಇದು ಸ್ಕೂಬಾ ಡೈವಿಂಗ್ ಗೆ ಅದ್ಭುತ ಜಾಗವೇ ಆಗಿದೆ. ಇಲ್ಲಿ ಅಪ್ಪು ಮತ್ತು ಅಮೋಘ ವರ್ಷ ಬರ್ತಾರೆ. ಅದ್ಭುತವಾಗಿಯೇ ಸ್ಕೂಬಾ ಡೈವಿಂಗ್ ಕೂಡ ಮಾಡ್ತಾರೆ.


    ಅಲ್ಲದೇ ಅಪ್ಪು ದಾಂಡೇಲಿಯ ಕಾಳಿ ನದಿಯತ್ತ ಪಯಣ ಬೆಳೆಸುತ್ತಾರೆ. ಕಾಳಿನದಿಯಲ್ಲಿ ಬೋಟಿಂಗ್ ಮಾಡಿ ದಡದಲ್ಲಿ ಕ್ಯಾಂಪ್ ಕೂಡ ಮಾಡ್ತಾರೆ.


    ಕಾಳಿ ನದಿಯನ್ನ ನಂಬಿಕೊಂಡು ಜೀವಿಸುತ್ತಿರೋ ಬುಡಕಟ್ಟು ಜನಾಂಗದ ಆ ಪುಟ್ಟ ಊರಿಗೂ ಕಾಲಿಡುತ್ತಾರೆ. 9 ಮನೆಗಳಿರೋ 50 ಜನರ ಈ ಊರಲ್ಲಿ ಅಪ್ಪು ಯಾರು ಅನ್ನೋದೇ ಗೊತ್ತಿಲ್ಲ. ಆದರೂ ಅವರೊಟ್ಟಿಗೆ ಇದ್ದು ಸಮಯ ಕಳೆದು ಊಟ ಮಾಡಿ ಕಟ್ಟ ಕಡೆಯದಾಗಿ ಕಾಳಿ ಹುಟ್ಟಿದ ಆ ಉಗಮ ಸ್ಥಾನಕ್ಕೂ ಭೇಟಿಕೊಡ್ತಾರೆ.


    ಇದನ್ನೂ ಓದಿ: ಅಭಿಮಾನಿಯಿಂದ ಅಪ್ಪು ದೇವಸ್ಥಾನ ನಿರ್ಮಾಣ! ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲಾ ನೀವೇ ಎಂಬ ಫ್ಯಾನ್ಸ್


    ಯಾರಿವರು ಪ್ರಕೃತಿ. ಎನ್. ಬನವಾಸಿ?
    ಮೂಲತಃ ಇಂಗ್ಲೀಷ್ ಭಾಷೆಯಲ್ಲಿ ಪರಿಣಿತಿ ಹೊಂದಿರುವ ಪ್ರಕೃತಿ, ಎನ್.ಬನವಾಸಿ ಗಂಧದಗುಡಿಗೆ ಸಬ್ ಟೈಟಲ್ಸ್ ಅನ್ನು ಕನ್ನಡ ಹಾಗೂ ಇತರ ಭಾಷೆಯಿಂದ ಇಂಗ್ಲೀಷ್​ಗೆ ಅನುವಾದಿಸಿ ಕೊಟ್ಟಿದ್ದಾರೆ.


    ಇದನ್ನೂ ಓದಿ: Bamboo Cracker: ಬಿದಿರಿನಿಂದ ತಯಾರಾಯ್ತು ಪಟಾಕಿ! ಉತ್ತರ ಕನ್ನಡ ಕೃಷಿಕನ ಸಂಶೋಧನೆ


    ಹೀಗಿರುವಾಗ ಉತ್ತರಕನ್ನಡ ಜಿಲ್ಲೆಯ ನಿವಾಸಿಯೊಬ್ಭರು ಗಂಧದಗುಡಿ ಚಿತ್ರದ ತಾಂತ್ರಿಕ ವಿಭಾಗದಲ್ಲಿ ಮುಖ್ಯ ಪಾತ್ರ ವಹಿಸಿರುವುದು ಉತ್ತರ ಕನ್ನಡ ಜಿಲ್ಲೆಯ ನಾಗರಿಕರಲ್ಲಿ ಹೆಮ್ಮೆ ಮೂಡಿಸಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇಂಗ್ಲೀಷ್ ಭಾಷೆಯ ಮಾರ್ಗದರ್ಶಕರಾಗಿ ಸ್ಪೋಕನ್ ಇಂಗ್ಲೀಷ್, ಅನುವಾದ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: