ಅದ್ದೂರಿ ಸಿನೆಮಾ ಸೆಟ್, ಭರದಿಂದ ಸಾಗಿದೆ ಶೂಟಿಂಗ್. ಮೀನುಗಾರರ ಬದುಕಿನ ಕುರಿತ ಸಿನೆಮಾ, ಕರಾವಳಿಯ ಜನಜೀವನ ಕುರಿತ ಚಿತ್ರಣ. ಇದುವೇ ಉತ್ತರ ಕನ್ನಡದಲ್ಲಿ ಹೊಚ್ಚ ಹೊಸ ಚಿತ್ರ ‘ಮತ್ಸ್ಯ ಗಂಧ' (Matsyagandha Film) ಸಿನೆಮಾ ಸ್ಪೆಷಲ್. ಯೆಸ್, ಲೈಟ್, ಕ್ಯಾಮೆರಾ, ಆ್ಯಕ್ಷನ್ ಅನ್ನೋ ಮೂಲಕ ಉತ್ತರ ಕನ್ನಡದ (Uttara Kannada) ಹೊನ್ನಾವರ (Honnavar) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಮತ್ಸ್ಯಗಂಧ ಹೆಸರಿನ ಸಿನೆಮಾ ಚಿತ್ರೀಕರಣ ಸಾಗಿದೆ. ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ (Pruthvi Ambaar) ಈ ಸಿನೆಮಾ ಮೂಲಕ ಮೊಟ್ಟ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮೀನುಗಾರರ ಬದುಕಿನ ಕುರಿತಾಗಿ ಹಾಗೂ ಕರಾವಳಿಯ ಜೀವನ ಕುರಿತಾಗಿ ಈ ಸಿನೆಮಾ ಬೆಳಕು ಚೆಲ್ಲಲಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಶಾಂತ್ ಸಿದ್ದಿ, ಹೊನ್ನಾವರದ ಕಿರಣ್ ನಾಯ್ಕ್ ಹಾಗೂ ಬೆಂಗಳೂರಿನ ಗೋಪಾಲಕೃಷ್ಣ ದೇಶಪಾಂಡೆ ನಟಿಸುತ್ತಿರುವ ಬಹುಮುಖಿ ಕಲಾವಿದರ ತಂಡವಿದೆ. ದೇವರಾಜ್ ಪೂಜಾರಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮತ್ಸ್ಯಗಂಧ ಚಿತ್ರವು ಭಾರೀ ನಿರೀಕ್ಷೆಯನ್ನೂ ಹುಟ್ಟು ಹಾಕಿದೆ.
ಇದನ್ನೂ ಓದಿ: Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ
ಉತ್ತರ ಕನ್ನಡದ ಜನಜೀವನದ ಚಿತ್ರಣ
ಉತ್ತರ ಕನ್ನಡ ಭಾಗದಲ್ಲಿ ಹಲವು ಸಿನೆಮಾಗಳು ಶೂಟಿಂಗ್ ಆಗಿದ್ದರೂ, ಇದೇ ಭಾಗದ ಮಂದಿಯ ಬದುಕಿನ ಕುರಿತು ಬೆಳಕು ಚೆಲ್ಲುವ ಸಿನೆಮಾವಾಗಿ ಮತ್ಸ್ಯಗಂಧ ಮೂಡಿ ಬರಲಿದೆ ಅನ್ನೋ ಖುಷಿ ಕಲಾವಿರದ್ದು ಕೂಡಾ.
ಇದನ್ನೂ ಓದಿ: Success Story: ಜೇನುತುಪ್ಪವೊಂದೇ ಅಲ್ಲ, ಮೇಣದಿಂದಲೂ ಲಾಭ ಗಳಿಸಬಹುದು!
ನಮ್ಮೂರ ಮಂದಾರ ಹೂವೇ ನೆನಪಿಸಿದ ಶೂಟಿಂಗ್!
ಒಟ್ಟಿನಲ್ಲಿ "ನಮ್ಮೂರ ಮಂದಾರ ಹೂವೇ" ನಂತರ ಸಂಪೂರ್ಣವಾಗಿ ನಮ್ಮೂರಲ್ಲೇ ತಯಾರಾಗುತ್ತಿರೋ ಸಿನೆಮಾವಿದು ಅನ್ನೋ ಖುಷಿ ಉತ್ತರ ಕನ್ನಡ ಭಾಗದ ಮಂದಿಯದ್ದು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ