Underwater Proposal: ಲವರ್​ಗೆ ಸಮುದ್ರದೊಳಗೆ ಪ್ರಪೋಸ್ ಮಾಡಿ! ಇದು ಅದ್ಭುತ ಕಿಕ್ ಕೊಡುವ ವಿಸ್ಮಯ ತಾಣ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Netrani Island Scuba Diving: ಜೀವನದಲ್ಲೊಮ್ಮೆ ಜೋಗದ ಗುಂಡಿ ನೋಡಿ ಅಂತ ಅಣ್ಣೋರು ಡಾ. ರಾಜ್​ಕುಮಾರ್ ಅವರೇ ಹೇಳಿದ್ದಾರಂತೆ. ಆದ್ರೆ, ಜೋಗದ ಗುಂಡಿಗಿಂತಲೂ ಆಳದ ಜಗತ್ತನ್ನ ನಿಮ್ಮ ಪ್ರೀತಿಪಾತ್ರರಿಗೆ ತೋರಿಸಿ!

 • News18 Kannada
 • 2-MIN READ
 • Last Updated :
 • Karwar, India
 • Share this:

  ಕಾರವಾರ: ಟ್ರಾಫಿಕ್ಕು, ಕೆಲಸ, ಬಾಸು, ಕಿರಿಕಿರಿ ಎಲ್ಲಾ ಸಾಕ್ ಸಾಕಾಯ್ತು, ನಾಲ್ಕ್ ದಿನ ಎಲ್ಲಾದ್ರೂ ಹೋಗಿಬರೋಣ ಅನಿಸ್ತಾ? ನಿಮ್ಮ ಪ್ರೇಯಸಿಗೂ ಒಂದು ಸರ್ಪ್ರೈಸ್ ಕೊಡೋಣ ಅಂದ್ಕೊಂಡ್ರೆ ನಿಮಗೆ ಬೆಸ್ಟ್ ಪ್ಲೇಸ್ (Best Travel Plan) ಸಮುದ್ರದಾಳದ ಈ ತಾಣ! ಹೃದಯದ ಆಕಾರದಲ್ಲಿರೋ ಈ ದ್ವೀಪ! (Heart Shaped Island) ವೀಸಾ, ಪಾಸ್ಪೋರ್ಟ್ ಬೇಕಂತಿಲ್ಲ, ಲಕ್ಷಾಂತರ ಹಣವೂ ಬೇಕಿಲ್ಲ, ಅತೀ ಕಡಿಮೆ ಖರ್ಚಲ್ಲಿ ಸಮುದ್ರದಾಳಕ್ಕೆ ಇಳಿದು (Underwater Proposal) ನಿಮ್ಮ ಪ್ರಿಯಕರನಿಗೋ, ಪ್ರೇಯಸಿಗೋ ಪ್ರಪೋಸ್ ಮಾಡಬಹುದು. ಬನ್ನಿ, ಇಂಥದ್ದೊಂದು ಸಖತ್ ಜಾಗಕ್ಕೆ (Travel Plan) ವಿಸಿಟ್ ಹಾಕೋಣ.


  ಜೀವನದಲ್ಲೊಮ್ಮೆ ಜೋಗದ ಗುಂಡಿ ನೋಡಿ ಅಂತ ಅಣ್ಣೋರು ಡಾ. ರಾಜ್​ಕುಮಾರ್ ಅವರೇ ಹೇಳಿದ್ದಾರಂತೆ. ಆದ್ರೆ, ಜೋಗದ ಗುಂಡಿಗಿಂತಲೂ ಆಳದ ಜಗತ್ತನ್ನ ನಿಮ್ಮ ಪ್ರೀತಿಪಾತ್ರರಿಗೆ ತೋರಿಸಿ! ನೀವು ಇದುವರೆಗೂ ನೋಡದಿರದ ವೈವಿಧ್ಯಮಯ ಜೀವ ಜಗತ್ತನ್ನ ಕಣ್ತುಂಬಿಸಿಕೊಳ್ಳಬಹುದು. ನಿಮ್ಮ ಮನದೊಡತಿಯ ಜೊತೆ ಮಸ್ತ್ ಮಜಾ ಮಾಡಬಹುದು!


  ಮುರುಡೇಶ್ವರದಿಂದ 20 ಕಿಲೋ ಮೀಟರ್ ದೂರದಲ್ಲಿ ವಿಸ್ಮಯ!
  ಇದು ವಿಶ್ವವಿಖ್ಯಾತ ಮುರ್ಡೇಶ್ವರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರೋ ನೇತ್ರಾಣಿ ದ್ವೀಪದ ಬಳಿಯ ಸ್ಕೂಬಾ ಡೈವಿಂಗ್ (Scuba Diving) ದೃಶ್ಯ. ಡ್ರೋನ್ ಕಣ್ಣಿನಲ್ಲಿ ಹಾರ್ಟ್ ಶೇಪ್​ನಂತೆ ಕಾಣೋ ನೇತ್ರಾಣಿ, ಸ್ಕೂಬಾ ಡೈವ್ ಪ್ರಿಯರಿಗೆ ಹಾಟ್ ಫೇವರಿಟ್ ತಾಣ. ದೇಶದ ಕೆಲವೇ ಕೆಲವು ಕಡೆಗಳಲ್ಲಿ ಇರುವ ಸ್ಕೂಬಾ ಡೈವಿಂಗ್ನ ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿರೋ ಈ ನೇತ್ರಾಣಿಯಲ್ಲೂ (Netrani Island) ನಡೆಸಲಾಗುತ್ತೆ.


  ಇದನ್ನೂ ಓದಿ: Uttara Kannada: ಇನ್ನೂ ಬಳಕೆಯಲ್ಲಿದೆ ಮೈಸೂರು ರಾಜರ ಕಾಲದ ಬಸ್ ಸ್ಟ್ಯಾಂಡ್!


  ಹಲವು ಸ್ಟಾರ್​ಗಳಿಂದ ಸ್ಕೂಬಾ ಡೈವ್
  ಪವರ್ ಸ್ಟಾರ್ ಪುನೀತ್ ರಾಜಕುಮಾರ್, ದೂದ್ ಪೇಡಾ ದಿಗಂತ್- ಐಂದ್ರಿತಾ ಜೋಡಿ ಸೇರಿದಂತೆ ಅನೇಕರು ಇಲ್ಲಿಗೆ ಭೇಟಿ ನೀಡಿ, ಡೈವ್ ಮಾಡಿ ಖುಷಿಪಟ್ಟಿದ್ದಾರೆ. ದೇಶ- ವಿದೇಶಗಳಿಂದಲೂ ಇಲ್ಲಿಗೆ ಸ್ಕೂಬಾ ಡೈವ್ ಮಾಡಲೆಂದೇ ಪ್ರವಾಸಿಗರು ಬರ್ತಾರೆ. ಆದ್ರೆ ನಮ್ಗೆ ಈಜೇ ಬರಲ್ಲ, ಸ್ಕೂಬಾ ಡೈವ್ ಮಾಡೋದು ಹೇಗೆ ಅನ್ನೋರಿಗೂ ಇಲ್ಲಿ ಅವಕಾಶವಿದೆ. ಜೊತೆಗೆ ಸಮುದ್ರ ಒಳಗೆ ಈಜಿ ಪ್ರಪೋಸ್ ಮಾಡುವವರ ಸಂಖ್ಯೆಯೂ ಕಡಿಮೆಯಿಲ್ಲ!


  ಇದನ್ನೂ ಓದಿ: ಶಿರಸಿಯಲ್ಲಿ IT ಕಂಪನಿ ಸ್ಥಾಪನೆ! ಮಲೆನಾಡು, ಕರಾವಳಿಯ ಪ್ರತಿಭೆಗಳಿಗೆ ಹೊಸ ಅವಕಾಶ
  netrani island scuba diving location
  ಈ ದ್ವೀಪಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ನೇತ್ರಾಣಿ ದ್ವೀಪಕ್ಕೆ ನೀವೂ ಬರಬೇಕಂದ್ರೆ ಹತ್ತಿರದ ತಾಲೂಕಾ ಕೇಂದ್ರ ಭಟ್ಕಳಕ್ಕೆ ರಾಜ್ಯದ ಎಲ್ಲೆಡೆಯಿಂದ ಬಸ್​ಗಳಿವೆ. ರೈಲು ನಿಲ್ದಾಣವೂ ಭಟ್ಕಳದಲ್ಲಿದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡೋಕೆ ಸುಮಾರು 4ರಿಂದ 5 ಸಾವಿರ ಖರ್ಚಾಗುತ್ತೆ. ಈ ಕುರಿತು ಹೆಚ್ಚಿನ ಮಾಹಿತಿಗೆ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ದೂರವಾಣಿ ಸಂಖ್ಯೆ 99004 31111 ಯನ್ನು ಸಂಪರ್ಕಿಸಬಹುದು

  Published by:ಗುರುಗಣೇಶ ಡಬ್ಗುಳಿ
  First published: