ಉತ್ತರ ಕನ್ನಡ: ಸುರುಳಿಯಾಕಾರದ ಸಿಗಡಿ ಕರಾವಳಿಯ ಸಖತ್ ಅಡುಗೆ ರುಚಿ. ಸಿಗಡಿ ಐಟಂಗಳಂತೂ ಭಾರೀ ಟೇಸ್ಟಿ. ಜೊತೆಗೆ ಸ್ಪೈಸಿ ಕೂಡಾ. ಅದ್ರಲ್ಲೂ ಶಿರಸಿಯಲ್ಲಿ ಈ ಸಿಗಡಿ ಮಂಚೂರಿ ತಿನ್ನೋದರ ಗಮ್ಮತ್ತೇ ಬೇರೆ. ಅಷ್ಟೇ ಅಲ್ಲ ಕಣ್ರೀ ಸಿಗಡಿ ತವಾ ಫ್ರೈ, ರವಾ ಫ್ರೈ, ಸಿಗಡಿ 65, ಸಿಗಡಿ ಮಸಾಲಾ, ಸಿಗಡಿ ಡ್ರೈ ಹೀಗೆ ನಾನಾ ತರಹದ ಟೇಸ್ಟ್ ನೋಡ್ಕೊಂಡು ಬರಬಹುದು.
ಯೆಸ್, ಇದು ಶಿರಸಿಯ ಹಳೆ ಬಸ್ ಸ್ಟ್ಯಾಂಡ್ ಸಮೀಪದ ಅಶ್ವತ್ಥಕಟ್ಟೆಯ ಬಳಿ ಇರುವ ಕರಾವಳಿ ಹೋಟೆಲ್. ಎಲ್ಲಾ ಸಮಯದಲ್ಲೂ ಇಲ್ಲಿ ಸಿಗಡಿ ಐಟಂ ಸವಿಯಬಹುದು. ಇನ್ನು ನ್ಯೂಸ್ 18 ಕನ್ನಡ ಡಿಜಿಟಲ್ ವೀಕ್ಷಕರಿಗಾಗಿ ಕರಾವಳಿ ಹೊಟೇಲ್ ಬಾಣಸಿಗರ ಸಿಗಡಿ ಮಂಚೂರಿಯ ರೆಸಿಪಿ ಹೇಳಿಕೊಟ್ಟಿದ್ದಾರೆ ನೋಡಿ.
ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು
ಸಿಗಡಿ ಮಂಚೂರಿ ರೆಸಿಪಿ
ಮೊದಲಿಗೆ ಸಿಪ್ಪೆ ಬಿಡಿಸಿದ ಸಿಗಡಿಯನ್ನು ಸಮವಾಗಿ ಹೆಚ್ಚಿ, ಅದಕ್ಕೆ ಕಾರ್ನ್ ಫ್ಲಾರ್ ಸೇರಿಸಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೆರೆಸಿ ಕಾರ್ನ್ ಫ್ಲಾರ್ನ ಹಿಟ್ಟಲ್ಲಿ ಅದ್ದಿಕೊಂಡು, ಕರಿಬೇವು ಹಾಕಿಕೊಂಡು ಕರಿಯಬೇಕು.
ಇಷ್ಟು ಮಾಡಿದ್ರೆ ರೆಡಿ!
ನಂತರ ಇನ್ನೊಂದು ಕಡೆ ಈರುಳ್ಳಿ, ಮೆಣಸು, ಕೊತ್ತಂಬರಿ ಹೆಚ್ಚಿಕೊಂಡು ಒಗ್ಗರಣೆ ಕೊಟ್ಟು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಖಾರ ಹಾಕಿ ಸೋಯಾ ಸಾಸ್, ಟೊಮೆಟೋ ಸಾಸ್, ನೀರು, ಜಿಂಜರ್ ಪೇಸ್ಟ್ ಬೇಕೆಂದರೆ ಹಾಕಿಕೊಂಡು ಐದು ನಿಮಿಷ ಕರೆದರೆ ಸಿಗಡಿ ಮಂಚೂರಿ ರೆಡಿ.
ಇದನ್ನೂ ಓದಿ: Fish Hunting: ಕೆಸರು ತುಂಬಿದ ಕೆರೆಯಲ್ಲಿ ಭರ್ಜರಿ ಮೀನು ಶಿಕಾರಿ, ಇದು ಕೆರೆ ಬೇಟೆಯ ಸ್ಪೆಷಲ್!
ಒಟ್ಟಿನಲ್ಲಿ ಸಿಗಡಿ ಮಂಚೂರಿ ಎಂತವರ ನಾಲಗೆ ರುಚಿ ಹೆಚ್ಚಿಸೋದ್ರಲ್ಲಿ ಮೋಸ ಮಾಡದು. ನಿಮಗೂ ಸಿಗಡಿ ಸಿಕ್ರೆ ಮನೆಯಲ್ಲಿ ಸಹ ಸಿಗಡಿ ಮಂಚೂರಿ ಮಾಡಿಕೊಂಡು ಸವಿಯಬಹುದು ನೋಡಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ