Uttara Kannada: ಜೀವಂತ ಹಾವಿಗೆ ಪೂಜೆ! ಇವರ ಹೆಂಡತಿ, ಮಕ್ಕಳಿಗೂ ಹಾವಂದ್ರೆ ಭಯವಿಲ್ಲ!

ಆದರೆ ಕಳೆದ ಕೆಲ ವರ್ಷದಿಂದ ಮನೆಯಲ್ಲೇ ಹಾವನ್ನು ತಂದು ಪೂಜೆ ಮಾಡಿ ಬಿಟ್ಟು ಬರ್ತಾರೆ. ಹಾವು ಇವರ ಕುಟುಂಬಕ್ಕೆ ಹಿರಿಯಣ್ಣನ ತರಹ! ವಿಡಿಯೋ ನೋಡಿ

ನಿಜದ ನಾಗರಕ್ಕೆ ನಮನ

"ನಿಜದ ನಾಗರಕ್ಕೆ ನಮನ"

  • Share this:
    ಹಾವು ಕಾಣಬೇಕಂತಿಲ್ಲ, ಹೆಸರು ಕೇಳಿದರೆ ಸಾಕು, ಬೆಚ್ಚಿ ಬೀಳ್ತೀವಿ ನಾವು. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(Sirsi)  ಈ ವ್ಯಕ್ತಿ ಎಲ್ಲೇ ಹಾವು ಕಂಡರೂ "ಬಾ ದೋಸ್ತಾ!" ಎಂಬಂತೆ ಹಾವಿನ ಜೊತೆ ಬೆರೆತು ಹಾವನ್ನು ಹಿಡಿದು ಕಾಡಿಗೆ ಬಿಟ್ಟುಬಿಡ್ತಾರೆ. ನಾಗರ ಹಬ್ಬದ ಸಡಗರ ಸಂಭ್ರಮದಲ್ಲಿ ಎಲ್ರೂ ಕಲ್ಲು ನಾಗರಕ್ಕೆ ಪೂಜೆ ಮಾಡಿದ್ರೆ ಇವ್ರು ನಿಜದ ಹಾವಿಗೇ ಪೂಜೆ ಮಾಡ್ತಾರೆ! ಇವ್ರೇ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹುಲೇಕಲ್ ನ ಪ್ರಶಾಂತ್! ಹಾವಿಗೂ ಒಂದು ಮೆದುಳಿದೆ, ಸಂವೇದನೆಗಳಿವೆ ಅದಕ್ಕೂ ಬೇಕು-ಬೇಡಗಳಿವೆ, ಪಕ್ಕದಲ್ಲಿ ಇರೋ ವ್ಯಕ್ತಿಯ ಮನ್ಸನ್ನೇ ಅರಿಯೋದು ಕಷ್ಟ ಆದ್ರೆ ಇವರು ಹಾವುಗಳ ಮನಸ್ಸನ್ನ ಅರಿತುಕೊಳ್ಳೋದರಲ್ಲಿ ಪಿಎಚ್​ಡಿ ಮಾಡ್ಬಿಟ್ಟಿದಾರೆ ನಮ್ಮ ಪ್ರಶಾಂತ್!

    ಹಾವಿನ ಹಾವ-ಭಾವಗಳನ್ನು ಈ ಮನುಷ್ಯ 35 ವರ್ಷದಿಂದ ಅಭ್ಯಾಸ ಮಾಡ್ತಿದಾರೆ. ಅವರದ್ದೇ ಸ್ವಂತ ಅಣ್ಣ ಹಾವಿನ ಕಡಿತಕ್ಕೆ ಬಲಿಯಾದ್ರೂ ಪ್ರಶಾಂತ್ ನಾಗರಹಾವಿನ ಪೂಜೆ ಬಿಟ್ಟಿಲ್ಲ ನೋಡಿ! ಹಾವುಗಳಿಗೆ ಗಾಯ ಆದರೆ ಆರೈಕೆ ಮಾಡಿ ಕಾಡಿಗೆ ಬಿಡ್ತಾ ಇದ್ದ ಇವರು ಪ್ರತಿ ವರ್ಷ ಕಾಡಿಗೆ ಹೋಗಿ ನಿಜ ನಾಗಕ್ಕೆ ಪೂಜೆ ಮಾಡ್ತಿದ್ರಂತೆ.



    ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

    ಆದರೆ ಕಳೆದ ಕೆಲ ವರ್ಷದಿಂದ ಮನೆಯಲ್ಲೇ ಹಾವನ್ನು ತಂದು ಪೂಜೆ ಮಾಡಿ ಬಿಟ್ಟು ಬರ್ತಾರೆ. ಹಾವು ಇವರ ಕುಟುಂಬಕ್ಕೆ ಹಿರಿಯಣ್ಣನ ತರಹ!

    ಇದನ್ನೂ ಓದಿ: Nag Panchami Vijayapura: ಎಳ್ಳು, ಹೋಳಿಗೆ, ಉಂಡೆ, ಅರಿಶಿನ ದಾರ! ವಿಜಯಪುರದಲ್ಲಿ ಹೀಗಿತ್ತು ನಾಗರ ಪಂಚಮಿ

    ಕರಾವಳಿಯವರೆಲ್ಲ ನಮ್ಮ ವಂಶದ ನಾಗ ಅದು ಇದು ಅಂತ ಹೇಳ್ತಿವಲ್ಲ ಮಲ್ನಾಡೂ ಅದ್ಕೆ ಹೊರ್ತಾಗಿಲ್ಲ ಅಲ್ವಾ?! ನಿಜವಾಗಲೂ ಹಾವುಗಳಿಗೆ ಬಾಯಿದ್ದಿದ್ರೆ "ನಮ್ ಬಳಗ ಇವನು" ಅಂತ ಅವು ಅಂದುಕೊಳ್ತಿದ್ವೆನೋ!

    ವರದಿ: ಎ.ಬಿ.ನಿಖಿಲ್
    Published by:guruganesh bhat
    First published: