• Home
 • »
 • News
 • »
 • uttara-kannada
 • »
 • Power Cut: ಇಲ್ಲಿ ಕೇಳಿ ಮಾರಾಯ್ರೇ, ಈ ಊರಲ್ಲಿ ಇರಲ್ಲ ಕರೆಂಟ್!

Power Cut: ಇಲ್ಲಿ ಕೇಳಿ ಮಾರಾಯ್ರೇ, ಈ ಊರಲ್ಲಿ ಇರಲ್ಲ ಕರೆಂಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದು ವೇಳೆ ಹೇಳಿದ ಅವಧಿಗೆ ಮುನ್ನವೇ ದುರಸ್ತಿ ಕಾರ್ಯ ಪೂರ್ಣವಾದರೆ ಕರೆಂಟ್ ಪೂರೈಕೆ ಬೇಗನೆ ಮಾಡಲಾಗುವುದು ಎಂದು ಹೆಸ್ಕಾಂ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

 • News18 Kannada
 • Last Updated :
 • Uttara Kannada, India
 • Share this:

  ಶಿರಸಿ: ಉತ್ತರ ಕನ್ನಡ ಜಿಲ್ಲೆಯ (Uttara Kannada News) ಶಿರಸಿ ತಾಲೂಕಿನಲ್ಲಿ ಮಳೆಗಾಲದಲ್ಲಿ ಆದ ಕೆಲವೊಂದು ವಿದ್ಯುತ್ ಸೆಕ್ಟರ್​ಗಳ ಹಾನಿಯನ್ನು ಈ ತಿಂಗಳಲ್ಲೇ ದುರಸ್ತಿ ಮಾಡಿಕೊಳ್ಳಲು ಹೆಸ್ಕಾಂ ನಿರ್ಧರಿಸಿದೆ ಹಾಗಾಗಿ ಅದಕ್ಕೆ ಪೂರ್ವಭಾವಿಯಾಗಿ ತಿಂಗಳ ಮೊದಲ ವಾರದಲ್ಲೇ ವಿದ್ಯುತ್ ದುರಸ್ತಿ ಆರಂಭವಾಗಲಿದೆ. ಆದ್ದರಿಂದ ಡಿಸೆಂಬರ್ 2 ಹಾಗೂ 3 ಅಂದರೆ ಉತ್ತರ ಕನ್ನಡದ ಶಿರಸಿಯಲ್ಲಿ ಕೆಲಭಾಗಗಳಿಗೆ ವಿದ್ಯುತ್ ಪೂರೈಕೆಯನ್ನು (Power Cut) ಕಡಿತಗೊಳಿಸಲಾಗುತ್ತಿದೆ.


  ಈ ಏರಿಯಾಗಳಲ್ಲಿ ಇರಲ್ ಕರೆಂಟ್
  ಮಾಹಿತಿಯ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶೃದ್ಧಾನಂದಗಲ್ಲಿ, ಐದು ರಸ್ತೆ, ಮಾರ್ಕೆಟ್ ಪ್ರದೇಶ, ದೇವಿಕೆರೆ, ಸಿಂಪಿಗಲ್ಲಿ, ಉಣ್ಣೆಮಠಗಲ್ಲಿ, ಸಿಪಿ ಬಝಾರ್, ಹಳೆ ಬಸ್ಟ್ಯಾಂಡ್, ಮುಸ್ಲಿಂಗಲ್ಲಿ, ಎಸ್.ಬಿ.ಐ, ತಾಲೂಕಾ ಪಂಚಾಯತ್, ಝೂ ಸರ್ಕಲ್, ಚರ್ಚ್ ರೋಡ್ ಮತ್ತು ಹಾಲೊಂಡ ಬಡಾವಣೆ, ನೀಲೆಕಣಿ, ಕೋರ್ಟ್ ರಸ್ತೆ, ಚೌಕಿ ಮಠ, ರಾಜೀವನಗರ, ಪಡ್ತಿಗಲ್ಲಿ, ಕುಮಟಾ ರೋಡ್, ಗಾಂಧೀನಗರ, ಭೀಮನಗುಡ್ಡ, ವಿಜಯನಗರ ಹಾಗೂ ಸರ್ಕಾರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿ ದಿನಾಂಕ ಡಿಸೆಂಬರ್ 2 ರಂದು ಬೆಳಿಗ್ಗೆ 9.30 ಯಿಂದ ಸಾಯಂಕಾಲ 6.00 ವರೆಗೆ ವಿದ್ಯುತ್ ಇರುವುದಿಲ್ಲ.


  ಇದನ್ನೂ ಓದಿ: Uttara Kannada: ಅಯ್ಯಪ್ಪನ ದರ್ಶನಕ್ಕೆ ಹೊರಟ ನಾಯಿ! ಪಾದಯಾತ್ರಿಗಳ ಜೊತೆ ಶಬರಿಮಲೆಗೆ ಪಯಣ


  ಸೆಕ್ಟರ್ 11 ಕೆ.ವಿಯಲ್ಲಿ ದೋಷ ಕಂಡುಬಂದಿದ್ದರಿಂದ ರಿಪೇರಿ ಕಾರ್ಯದಲ್ಲಿ ಹೆಸ್ಕಾಂ ತೊಡಗಲಿದ್ದು ಈ ಭಾಗಗಳಿಗೆ ಕರೆಂಟ್ ಇರುವುದಿಲ್ಲ.


  ಡಿಸೆಂಬರ್ 3 ರಂದು ಈ ಪ್ರದೇಶಗಳಲ್ಲಿ ಇರಲ್ಲ ವಿದ್ಯುತ್
  ಜೊತೆಗೆ ಡಿಸೆಂಬರ್ 3 ನೇ ತಾರೀಕಿನಂದು ಬಂಕನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಕೆ.ವಿ ಸೆಕ್ಟರ್​ನ ದುರಸ್ತಿ ಕಾರ್ಯವಿರುವುದರಿಂದ ಸದರಿ ವಿಭಾಗದ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯನ್ನು ಬೆಳಿಗ್ಗೆ 9.30 ಯಿಂದ ಸಾಯಂಕಾಲ 6 ಗಂಟೆಯವರೆಗೆ ಸ್ಥಗಿತಗೊಳಿಸಲಾಗುತ್ತದೆ.


  ಇದನ್ನೂ ಓದಿ: Best Travel Plan: ಬಾವಿಯೊಳಗಿನ ಕೋಟೆಯಲ್ಲಿ 3 ಸುರಂಗ! ಇದು ಗೋಳಬಾವಿಯ ರಹಸ್ಯ!


  ಒಂದು ವೇಳೆ ಹೇಳಿದ ಅವಧಿಗೆ ಮುನ್ನವೇ ದುರಸ್ತಿ ಕಾರ್ಯ ಪೂರ್ಣವಾದರೆ ಕರೆಂಟ್ ಪೂರೈಕೆ ಬೇಗನೆ ಮಾಡಲಾಗುವುದು ಎಂದು ಹೆಸ್ಕಾಂ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು