Uttara Kannada: ಗಡಿಭಾಗದಲ್ಲಿ ಗಾಂಜಾ ಘಾಟು! ದಂಧೆಕೋರರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸ್
ಡಾ. ಸುಮನ ಪೆನ್ನೇಕರ್, 2021ರ ಅಕ್ಟೋಬರ್ನಲ್ಲಿ ಉತ್ತರ ಕನ್ನಡಕ್ಕೆ ವರ್ಗಾವಣೆಗೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರ ವಹಿಸಿಕೊಂಡಿದ್ದರು. ಜಿಲ್ಲೆಯಲ್ಲಿ ಡ್ಯೂಟಿ ಕೈಗೆತ್ತಿಕೊಳ್ಳುತ್ತಿದ್ದಂತೆ ಅಕ್ರಮ, ಅನಧಿಕೃತ ಚಟುವಟಿಕೆಗಳ ವಿರುದ್ಧ ಸಮರ ಸಾರಿದ್ದ ಅವರು, ಕೇವಲ ಆರು ತಿಂಗಳಲ್ಲೇ ಜೂಜು ಅಡ್ಡೆಕೋರರು, ಸಾರಾಯಿ ದಂಧೆಗಳಿಗೆ ಕಡಿವಾಣ ಹೇರಿ ನಿಯಂತ್ರಣಕ್ಕೆ ತಂದಿದ್ದಾರೆ.
ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಅಕ್ರಮ, ಅನಧಿಕೃತ ಚಟುವಟಿಕೆಗಳಿಗೆ ಬಂದ ಹೊಸತರಲ್ಲೇ ಕಡಿವಾಣ (Control) ಹಾಕಿ ದಿಟ್ಟತನ ತೋರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ ಪೆನ್ನೇಕರ್ (Sumana Pannekar), ಮಾದಕ ವಸ್ತುಗಳ (Drugs) ವಿರುದ್ಧ ಕೂಡ ಅಭಿಯಾನ ಸಾರಿರುವುದು ದಂಧೆಕೋರರಲ್ಲಿ ನಡುಕ ಹುಟ್ಟಿಸಿದೆ. ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಂಜಾ (Ganja) ಘಾಟು ಜೋರಾಗಿದೆ. ಅವ್ಯಾಹತವಾಗಿ ಗಾಂಜಾ ಸಾಗಾಟ (Ganja Sale) ನಡೆಯುತ್ತಿದೆ. ಇದರ ಬೆನ್ನಲ್ಲೇ ಪೋಲಿಸ್ ಇಲಾಖೆಯಿಂದ (Police Department) ಗಾಂಜಾ ಬೇಟೆ ಕೂಡಾ ಜೋರಾಗಿದೆ. ಹತ್ತಾರು ಕಡೆ ದಾಳಿ (Raid) ನಡೆಸಿದ ಪೋಲಿಸ್ ಇಲಾಖೆ ಎಲ್ಲಕಡೆಯೂ ಸಫಲತೆ ಕಂಡಿದೆ. ಈ ನಿಟ್ಟಿನಲ್ಲಿ ಗಾಂಜಾ ಸಾಗಾಟ ನಿಯಂತ್ರಣಕ್ಕೆ ತರಲು ಪೋಲಿಸ್ ಇಲಾಖೆ ಮುಂದಾಗಿದೆ.
ಖಡಕ್ ಅಧಿಕಾರಿ ಕಾರ್ಯಾಚರಣೆಗೆ ದಂಧೆಕೋರರು ಕಂಗಾಲು
ಕಾರ್ಯನಿರ್ವಹಿಸದ ಕಡೆಗಳಲ್ಲೆಲ್ಲ ಸರಳ- ಸಜ್ಜನಿಕೆಯ ಐಪಿಎಸ್ ಅಧಿಕಾರಿಯೆಂದೇ ಹೆಸರು ಮಾಡಿರುವ ಡಾ. ಸುಮನ ಪೆನ್ನೇಕರ್, 2021ರ ಅಕ್ಟೋಬರ್ನಲ್ಲಿ ಉತ್ತರ ಕನ್ನಡಕ್ಕೆ ವರ್ಗಾವಣೆಗೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರ ವಹಿಸಿಕೊಂಡಿದ್ದರು. ಜಿಲ್ಲೆಯಲ್ಲಿ ಡ್ಯೂಟಿ ಕೈಗೆತ್ತಿಕೊಳ್ಳುತ್ತಿದ್ದಂತೆ ಅಕ್ರಮ, ಅನಧಿಕೃತ ಚಟುವಟಿಕೆಗಳ ವಿರುದ್ಧ ಸಮರ ಸಾರಿದ್ದ ಅವರು, ಕೇವಲ ಆರು ತಿಂಗಳಲ್ಲೇ ಜೂಜು ಅಡ್ಡೆಕೋರರು, ಸಾರಾಯಿ ದಂಧೆಗಳಿಗೆ ಕಡಿವಾಣ ಹೇರಿ ನಿಯಂತ್ರಣಕ್ಕೆ ತಂದಿದ್ದಾರೆ.
ಒಂದೇ ತಿಂಗಳಲ್ಲಿ 44 ರೇಡ್
ಕೇವಲ ಇದೊಂದೇ ತಿಂಗಳಲ್ಲಿ 44 ದಾಳಿಗಳನ್ನು ನಡೆಸಿ ಓಸಿ, ಜುಗರಾಟ, ಮಟ್ಕಾದಂಥ ಜೂಜಾಟಗಳಲ್ಲಿ ತೊಡಗಿಕೊಂಡಿದ್ದವರನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇನ್ನು ಇವೆಲ್ಲ ರುಟಿನ್ ದಾಳಿಗಳೆಂದುಕೊಂಡರೂ, ಡಾ.ಸುಮನ ಅವರು ಇತ್ತೀಚಿಗೆ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಾದಕ ವಸ್ತುಗಳ ಮಾರಾಟ- ಸಾಗಾಟ ದಂಧೆಯನ್ನ ಸಂಪೂರ್ಣವಾಗಿ ಮಟ್ಟಾ ಹಾಕಲು ಪಣತೊಟ್ಟಿ ನಿಂತಿದ್ದು, ಇವುಗಳ ವಿರುದ್ಧ ಅಭಿಯಾನದಂತೆ ದಾಳಿಗಳನ್ನ ನಡೆಸುತ್ತಿದ್ದಾರೆ.
2021ರ ನವೆಂಬರ್ನಿಂದ ಈ ವರ್ಷದ ಏಪ್ರಿಲ್ 26ರವರೆಗಿನ ಅಂಕಿ- ಅಂಶದ ಪ್ರಕಾರ ಮಾದಕ ವಸ್ತುಗಳ ಸಾಗಾಟ- ಮಾರಾಟಕ್ಕೆ ಸಂಬಂಧಿಸಿದಂತೆ 25 ಕೇಸುಗಳನ್ನ ದಾಖಲಿಸಿ, 33 ಮಂದಿಯನ್ನ ಬಂಧಿಸಿದ್ದಾರೆ. ಅವರಿಂದ ಸುಮಾರು 1 ಲಕ್ಷ 71 ಸಾವಿರ ರೂ. ಮೌಲ್ಯದ ಏಳು ಕೆಜಿಯಷ್ಟು ಗಾಂಜಾವನ್ನ ಜಪ್ತಿಪಡಿಸಿಕೊಂಡು, ಮಾದಕ ವ್ಯಸನಿಗಳಿಗೆ ಹಾಗೂ ಇದರ ದಂಧೆಕೋರರಿಗೆ ಆತಂಕ ಹುಟ್ಟಿಸಿದ್ದಾರೆ.
ಗಡಿಭಾಗದಲ್ಲಿ ಡ್ರಗ್ಸ್ ಡೀಲ್ ಅವ್ಯಾಹತ
ಗೋವಾ ಗಡಿಗೆ ಹೊಂದಿಕೊಂಡಂತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ- ಮಾದಕ ವಸ್ತುಗಳ ಸಾಗಾಟ ಪೊಲೀಸರ ಕಣ್ತಪ್ಪಿಸಿ ನಡೆಯುತ್ತಲೇ ಇರುತ್ತದೆ. ಯುವ ಜನಾಂಗವನ್ನೇ ಗುರಿಯಾಗಿಸಿಕೊಂಡು ನಡೆಯುವ ಈ ದಂಧೆಯಿಂದಾಗಿ ಸಮಾಜದ ಸ್ವಾಸ್ಥ್ಯ ಕದಡುತ್ತಿತ್ತು. ಹೀಗಾಗಿ ಇವುಗಳಿಗೆಲ್ಲ ಕಡಿವಾಣ ಹಾಕಲು ಪಣತೊಟ್ಟು ನಿಂತಿರುವ ಎಸ್ಪಿ ಡಾ.ಸುಮನ ಪೆನ್ನೇಕರ್ ಅವರಿಗೆ ಸಾರ್ವಜನಿಕರಿಂದ ಶ್ಲಾಘನೆ ಕೂಡ ವ್ಯಕ್ತವಾಗುತ್ತಿದೆ.
ಮಹಿಳಾ ಅಧಿಕಾರಿಯಾಗಿಯೂ ಎದೆಗುಂದದೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪಣ ತೊಟ್ಟಿ ನಿಂತಿರುವ ಡಾ.ಸುಮನ ಪೆನ್ನೇಕರ್ ಅವರ ಧೈರ್ಯಕ್ಕೆ ಮೆಚ್ಚಲೇಬೇಕು. ಎಸ್ಪಿಯವರ ಕಾರ್ಯ ಹೀಗೆ ನಿರಂತರವಾಗಿ ಮುಂದುವರಿದು, ಇಂಥ ಅಕ್ರಮ ಚಟುವಟಿಕೆಗಳನ್ನ ಬೇರು ಸಮೇತ ಕಿತ್ತೆಸೆಯುವ ಕಾರ್ಯವಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.