PM Narendra Modi Birthday: ವಾವ್! ಇದು ಮೋದಿ ರಂಗೋಲಿ! ಪ್ರಧಾನಿ ಹುಟ್ಟಿದ್ದು ಹಬ್ಬವಾಗಿದ್ದು ಹೀಗೆ

ಬಿಜೆಪಿ ಕಾರ್ಯಕರ್ತರೆಲ್ಲ ಸೇರ್ಕೊಂಡು ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್​ ಸ್ಟಾಂಡ್​ಲ್ಲಿರುವ ಪಬ್ಲಿಕ್ ಟಾಯ್ಲೆಟ್ ಕ್ಲೀನ್ ಮಾಡಿದರು. ಸ್ವಚ್ಛತೆಯ ಮಹತ್ವ ಸಾರಿದರು.

ವಿಡಿಯೋ ನೋಡಿ

"ವಿಡಿಯೋ ನೋಡಿ"

 • Share this:
  ಕಡಲ‌ ಕಿನಾರೆ, ಸಾರ್ವಜನಿಕ ಶೌಚಾಲಯ.. ಎಲ್ಲೆಲ್ಲೂ ಸ್ವಚ್ಛ ಸ್ವಚ್ಛ ಸ್ವಚ್ಛ! ಅರೇ ನಿನ್ನೆ ಇದ್ದಹಾಗೆ ಇಲ್ವಲ್ಲ..ಏನಿದು ಕಾರವಾರ, ಉಳ್ಳಾಲ, ಸೋಮೇಶ್ವರ ಬೀಚುಗಳೆಲ್ಲ ಲಕಲಕ ಹೊಳಿತಿವೆ ಅಂದ್ಕೊಂಡ್ರಾ? ಇದು ನಮ್ಮ ಪ್ರಧಾನಿ‌ ನರೇಂದ್ರ ಮೋದಿ ಎಫೆಕ್ಟ್. ಹೌದು, ನಮ್ಮ ಪ್ರಧಾನಿ ನರೇಂದ್ರ ಮೋದಿಯವರ 72 ನೇ ಹುಟ್ಟುಹಬ್ಬಕ್ಕೆ (PM Narendra Modi Birthday) ಬಿಜೆಪಿ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಜೊತೆಗೆ ಇಂದು ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನವೂ ಹೌದು. ಹೀಗಾಗಿ ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Karnataka Governor Thawar Chand Gehlot) ಸಹ ಕಾರವಾರ ಬೀಚಿಗೆ ಆಗಮಿಸಿದ್ದರು. ಸಮುದ್ರ ಪೂಜೆ ನಡೆಸಿ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು. ನಂತರ ಸುಮಾರು ನಾಲ್ಕು ಕಿಲೋ‌ಮೀಟರ್ ಇರೋ ಕಾರವಾರ ಬೀಚನ್ನು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಜೊತೆಗೂಡಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡರು.

  ಉಡುಪಿಯ ಸಾಸ್ತಾನದಲ್ಲಿ ಪ್ರಧಾನಿ ಮೋದಿಯವರ ರಂಗೋಲಿ ಬಿಡಿಸಿ ಶುಭಹಾರೈಸಲಾಯಿತು. ಚಿತ್ರ ಕಲಾವಿದೆ ಸ್ಪೂರ್ತಿ ಆಚಾರ್ ಮತ್ತು ಅಶ್ವತ್ಥ್ ಆಚಾರ್ಯ ಕೈಚಳಕದಲ್ಲಿ ಮೋದಿ ಮೂಡಿಬಂದರು. 15 ಗಂಟೆ ಶ್ರಮವಹಿಸಿ ಚಿತ್ರಿಸಿದ 12 ಅಡಿ ಎತ್ತರ 7.5 ಅಡಿ ಅಗಲದ ಮೋದಿ ರಂಗೋಲಿ ಜನರ ಗಮನಸೆಳೆಯಿತು.

  72ನೇ ಹುಟ್ಟುಹಬ್ಬಕ್ಕೆ 72 ಸಸಿ
  ವಿಜಯಪುರದ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ರುದ್ರಭೂಮಿಯಲ್ಲಿ 72 ತರಹೇವಾರಿ ಸಸಿಗಳನ್ನ ನೆಟ್ಟು ಸಂಭ್ರಮಿಸಿದರು. ಜಗದೀಶ್ ಸುನಗದ ಎಂಬುವರು ಪ್ರಧಾನಿ ಮೋದಿಯವರ 72 ಮೋದಿ ಭಾವಚಿತ್ರವನ್ನ ಅಭಿಮಾನಿಗಳಿಗೆ ಕೊಡುಗೆಯಾಗಿ ನೀಡಿದರು.

  ಇದನ್ನೂ ಓದಿ: Vijayapura: ಬಟ್ಟೆ ಅಂಗಡಿಲಿ ಸಂಸ್ಕೃತ! ಮುಸ್ಲಿಂ ನೌಕರರ ಸಂಸ್ಕೃತ ಕೇಳೋಕೆ ಹಿತ

  ದಕ್ಷಿಣ ಕನ್ನಡದಲ್ಲೂ ಫುಲ್ ಕ್ಲೀನಿಂಗ್
  ಇದೇ ರೀತಿ ದಕ್ಷಿಣ ಕನ್ನಡದಲ್ಲೂ ವಿವಿಧ ಬೀಚ್ ಕ್ಲೀನಿಂಗ್ ಮಾಡಲಾಯ್ತು. ಉಳ್ಳಾಲ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಗಳನ್ನು ಸ್ವಚ್ಛಗೊಳಿಸಲಾಯಿತು. ಟನ್‌ಗಟ್ಟಲೆ ಪ್ಲಾಸ್ಟಿಕ್ ಮತ್ತು ಇತರ ವೇಸ್ಟ್ ಸಂಗ್ರಹಿಸಿ ಬೀಚ್ ಸೌಂದರ್ಯ ಹೆಚ್ಚಿಸಿದರು.

  ಇದನ್ನೂ ಓದಿ: Uttara Kannada: ಉತ್ತರ ಕನ್ನಡಕ್ಕೆ ಸದ್ದಿಲ್ದೇ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ!

  ಮಂಡ್ಯದಲ್ಲಿ ಶೌಚಾಲಯ ಗುಡಿಸಿದ ಕಾರ್ಯಕರ್ತರು
  ಇತ್ತ ಮಂಡ್ಯದಲ್ಲೂ ಪ್ರಧಾನಿ‌ ಮೋದಿಯವರ ಹುಟ್ಟುಹಬ್ಬ ಸಂಭ್ರಮ‌ ಅರ್ಥಪೂರ್ಣವಾಗಿತ್ತು. ಬಿಜೆಪಿ ಕಾರ್ಯಕರ್ತರೆಲ್ಲ ಸೇರ್ಕೊಂಡು ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್​ ಸ್ಟಾಂಡ್​ಲ್ಲಿರುವ ಪಬ್ಲಿಕ್ ಟಾಯ್ಲೆಟ್ ಕ್ಲೀನ್ ಮಾಡಿದರು. ಸ್ವಚ್ಛತೆಯ ಮಹತ್ವ ಸಾರಿದರು.
  Published by:ಗುರುಗಣೇಶ ಡಬ್ಗುಳಿ
  First published: