• Home
  • »
  • News
  • »
  • uttara-kannada
  • »
  • Wonder Park: ಈ ಉದ್ಯಾನವನದಲ್ಲಿ ಬ್ರಹ್ಮಾಂಡವೇ ಇದೆ!

Wonder Park: ಈ ಉದ್ಯಾನವನದಲ್ಲಿ ಬ್ರಹ್ಮಾಂಡವೇ ಇದೆ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಯೆಸ್, ಇದು ಶಿರಸಿಯ ಹಿತ್ಲಳ್ಳಿಯ ಖ್ಯಾತ ಜೋತಿಷಿ ನಾಗೇಂದ್ರ ಭಟ್ ಅವರ ವಿಶೇಷ ಕಾಳಜಿಯಿಂದ ಅರಣ್ಯ ಇಲಾಖೆ ನಿರ್ಮಿಸಿದ ಶಾಸ್ತ್ರೀಯ ವನ. ಇಲ್ಲಿ ಎಲ್ಲೇ ನೋಡಿದ್ರು ರಾಶಿ, ನಕ್ಷತ್ರಗಳಿಗೆ ಸಂಬಂಧಿಸಿದ ಮರಗಳೇ ಕಾಣುತ್ತವೆ

  • Share this:

    ಶಿರಸಿ: ಮೇಷ, ವೃಷಭ, ಮಿಥುನ, ಕರ್ಕಾಟಕ.. ಅರೇ! ರಾಶಿಕುಂಡಲಿಗಳೆಲ್ಲ ಇಲ್ಲೇನ್ ಮಾಡ್ತಿವೆ? ಅದೋ, ಅಲ್ಲಿ ನಕ್ಷತ್ರಗಳೂ ಇವೆ! ಪಕ್ಕದಲ್ಲೇ ನವಗ್ರಹಗಳೂ ಇವೆ. ಉದ್ಯಾನವನ (Shstriya Vana Bakkala) ಬ್ರಹ್ಮಾಂಡವನ್ನೇ ಹೊತ್ತು ಕೂತಂತಿದೆ. ಹೀಗೆ ರಾಶಿವನ, ನಕ್ಷತ್ರವನ, ಕಣ್ವವನ, ಶಿವಪಂಚಾಯತವನ ಹೊಂದಿರೋದು ಯಾವುದೋ ಮಹರ್ಷಿಗಳ ಕುಟೀರವಿರುವ ಕಾಡಲ್ಲ, ಬದಲಿಗೆ ಉತ್ತರ ಕನ್ನಡದ ಶಿರಸಿಯ (Uttara Kannada Sirsi) ವ್ಯಕ್ತಿಯೋರ್ವರ ಸತತ ಪ್ರಯತ್ನದಿಂದ ತಲೆಯೆತ್ತಿ ನಿಂತ ಬಕ್ಕಳದ ಶಾಸ್ತ್ರೀಯ ವನ.


    ಯೆಸ್, ಇದು ಶಿರಸಿಯ ಹಿತ್ಲಳ್ಳಿಯ ಖ್ಯಾತ ಜೋತಿಷಿ ನಾಗೇಂದ್ರ ಭಟ್ ಅವರ ವಿಶೇಷ ಕಾಳಜಿಯಿಂದ ಅರಣ್ಯ ಇಲಾಖೆ ನಿರ್ಮಿಸಿದ ಶಾಸ್ತ್ರೀಯ ವನ. ಇಲ್ಲಿ ಎಲ್ಲೇ ನೋಡಿದ್ರು ರಾಶಿ, ನಕ್ಷತ್ರಗಳಿಗೆ ಸಂಬಂಧಿಸಿದ ಮರಗಳೇ ಕಾಣುತ್ತವೆ.


    65 ಹೆಕ್ಟೇರ್​ನಲ್ಲಿದೆ ಈ ಶಾಸ್ತ್ರೀಯ ವನ
    ಬ್ರಾಹ್ಮಿ ಸೊಪ್ಪಿನಿಂದ ಹಿಡಿದು ತೀರಾ ಅಪರೂಪದ ಗಿಡಮೂಲಿಕೆಗಳು ಇಲ್ಲಿ ನಳನಳಿಸುತ್ತಿವೆ. ಹಾಗಂತ ಇದು ಕೇವಲ ಅಧ್ಯಾತ್ಮಿಕ ಅಥವಾ ಜ್ಯೋತಿಷ್ಯ ಸಂಬಂಧಿತ ಮರಗಳ ಕೇಂದ್ರವಷ್ಟೇ ಅಲ್ಲ, ಬದಲಿಗೆ ಅರವತ್ತೈದು ಹೆಕ್ಟೇರಿನ ಈ ವನ ವಿಶೇಷ ಸಸ್ಯ ತಳಿಗಳನ್ನೂ ಹೊಂದಿದೆ.


    ಇದನ್ನೂ ಓದಿ: Freedom Fighter: 117 ವರ್ಷದ ಈ ಸ್ವಾತಂತ್ರ್ಯ ಹೋರಾಟಗಾರ ಕೇವಲ‌ ಗಡ್ಡೆಗೆಣಸು ತಿಂದು ಬದುಕುತ್ತಿದ್ದಾರೆ!


    ವಿದ್ಯಾರ್ಥಿಗಳು ಹುಡುಕಿ ಬರ್ತಾರೆ!
    ಸಸ್ಯಶಾಸ್ತ್ರ ಓದುತ್ತಿರೋ ವಿದ್ಯಾರ್ಥಿಗಳು ಇಲ್ಲಿಗೆ ಹೆಚ್ಚಿನ ಅಧ್ಯಯನಕ್ಕಂತ ಹುಡುಕಿ ಬರ್ತಾರೆ. ಜ್ಯೋತಿಷ್ಯ ಹಾಗೂ ವಿಜ್ಞಾನದ ಸಂಗಮತಾಣವಾಗಿರೋ ಈ ವನದಲ್ಲಿ ಹೇರಳವಾಗಿ ಕಾಡುಪ್ರಾಣಿಗಳಿದ್ದು ಒಬ್ಬರೇ ಬರುವುದು ಅಷ್ಟೊಂದು ಸೇಫ್ ಅಲ್ಲ. ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಈ ಉದ್ಯಾನದಲ್ಲಿ ವಿಹರಿಸಬಹುದು.


    ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


    ಇಲ್ಲಿ ಬರೋ ದಾರಿ ಹೀಗಿದೆ
    ನೀವೂ ಬಕ್ಕಳದ ಶಾಸ್ತ್ರೀಯವನಕ್ಕೆ ಬರಬೇಕಂದ್ರೆ ಶಿರಸಿಗೆ ಬಂದು ಹುಲೇಕಲ್ ಮಾರ್ಗದಿಂದ 18 ಕಿಲೋಮೀಟರ್ ಮುಂದೆ ಚಲಿಸಿ ಸಾಕು, ಕುತೂಹಲದ ಹಸಿರು ತಾಣ ಒಳಹೊಕ್ಕು ಸಸ್ಯಗಳಿಂದ ಇಡೀ ಬ್ರಹ್ಮಾಂಡವನ್ನೇ ಅರಿತುಕೊಳ್ಳಿ!


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: