• Home
 • »
 • News
 • »
 • uttara-kannada
 • »
 • Success Story: ಸಾವಿರಾರು ಮಹಿಳೆಯರ ತಿಂಗಳ ರಗಳೆಗೆ ಪರಿಹಾರ! ಸ್ಟಾರ್ಟಪ್ ಮಾಡಿ ಸಕ್ಸಸ್ ಕಂಡ ಗೋಕರ್ಣದ ಯುವತಿ

Success Story: ಸಾವಿರಾರು ಮಹಿಳೆಯರ ತಿಂಗಳ ರಗಳೆಗೆ ಪರಿಹಾರ! ಸ್ಟಾರ್ಟಪ್ ಮಾಡಿ ಸಕ್ಸಸ್ ಕಂಡ ಗೋಕರ್ಣದ ಯುವತಿ

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮುಟ್ಟಿನ ಸಮಯದ ಯಾತನೆಯನ್ನ ಸಂಕೋಚದಿಂದ ಯಾರ ಜೊತೆಗೂ ಹೇಳಿಕೊಳ್ಳದ ಹೆಣ್ಮಕ್ಕಳ ಸಂಖ್ಯೆ ಕಡಿಮೆಯೇನಿಲ್ಲ. ಹೀಗಾಗಿ ಅಂತಹ ಮಕ್ಕಳನ್ನ ತಲುಪಬೇಕೆನ್ನುವುದು ದಿವ್ಯಾ ಅವರ ಇಚ್ಛೆ.

 • News18 Kannada
 • Last Updated :
 • Uttara Kannada, India
 • Share this:

  ಶಿರಸಿ: ಸ್ಯಾನಿಟರಿ ಪ್ಯಾಡ್​ಗಳು ಹೆಣ್ಮಕ್ಕಳಿಗೆ ಕೊಡೋ ರಗಳೆ ಕಡಿಮೆಯದ್ದಲ್ಲ. ಇನ್ನೇನಾದ್ರೂ ಸಣ್ಣ ವಯಸ್ಸಿಗೆ ಪ್ರೌಢರಾದರೆ ಆ ಮಕ್ಕಳ (Women's Problem) ಸಂಕಷ್ಟ ಹೇಳತೀರದ್ದು. ಆದ್ರೆ ಪ್ಯಾಡ್​ನಿಂದ ಅನಗತ್ಯವಾಗಿ ಎದುರಿಸ್ತಿರೋ ಕಿರಿಕಿರಿಗೆ ಈಗ ಸುಲಭವಾಗಿ ಗುಡ್ ಬೈ ಹೇಳ್ಬಹುದು. ಇಲ್ಲಿ ಕಾಣ್ತಿರೋ ಇಷ್ಟು ಐಟಂಗಳೂ ಮುಟ್ಟಿನ ಸಮಯವನ್ನ ಆರಾಮದಾಯಕವಾಗಿಸಬಹುದು. ಯೆಸ್, ಪೀರಿಯಡ್ ಕಪ್, ಪ್ಯಾಡ್, ಪ್ಯಾಂಟಿ ಹೀಗೆ ಮೂರು ವಿಧದ ಈ ಉತ್ಪನ್ನಗಳೇ ಪರಿಸರ ಸ್ನೇಹಿ ಜೊತೆಗೆ ಸುಲಭವಾಗಿ ಧರಿಸುವ ಉಡುಪಿನಂತಿದೆ. ಅಷ್ಟೆ ಅಲ್ದೇ, ಇದು ನಮ್ಮ ಉತ್ತರ ಕನ್ನಡದ ಶಿರಸಿಯ (Sirsi) ಮರಾಠಿ ಕೊಪ್ಪದ ದಿವ್ಯಾ ಗೋಕರ್ಣ (Divya Gokarna) ಎಂಬವರೇ  ಕಾಂಪಿ ಕಪ್ ಎಂಬ (Comfy Cup) ಈ ಉತ್ಪನ್ನಗಳನ್ನ ತಯಾರಿಸ್ತಿರೋರು, ಅಲ್ಲದೇ, ದಿವಾ ಟ್ರೇಡಿಂಗ್ ಎಂಬ ಕಂಪನಿಯನ್ನೂ ಅವ್ರು ಸ್ಥಾಪಿಸಿದ್ದಾರೆ.


  ಸಾಮಾನ್ಯ ಪ್ಯಾಡ್ ಗಳಂತೆ ಈ ಕಾಂಪಿ ಕಪ್​ಗಳಿಗೆ ವಿಲೇವಾರಿ ಸಮಸ್ಯೆ ಇಲ್ಲ. ಆಯಾಯ ವಯಸ್ಸಿಗೆ ತಕ್ಕಂತೆ ಪೀರಿಯಡ್ಸ್ ಕಪ್​ಗಳು ದಿವ್ಯಾ ಅವರ ಬಳಿ ದೊರೆಯುತ್ತೆ. ಜೊತೆಗೆ ಸುಲಭವಾಗಿ ಧರಿಸಬಲ್ಲ ಹಾಗೂ ಹಲವು ವರ್ಷಗಳವರೆಗೆ ರೀಯೂಸ್ ಮಾಡಬಹುದಾದ ಪ್ಯಾಡ್ ಮತ್ತು ಪ್ಯಾಂಟಿಸ್ ಕೂಡಾ ಇವೆ. ಹೀಗಾಗಿ ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಕಿರಿಕಿರಿಯನ್ನ ಈ ಉತ್ಪನ್ನಗಳು ಕಡಿಮೆ ಮಾಡುತ್ತವೆ ಅನ್ನೋದು ಫಲಾನುಭವಿಗಳ ಮಾತು.


  ಹೇಗೆ ಬಳಸೋದು ಅಂತ ಕಾರ್ಯಾಗಾರವೂ ಇರುತ್ತೆ
  ಮುಟ್ಟಿನ ಸಮಯದ ಯಾತನೆಯನ್ನ ಸಂಕೋಚದಿಂದ ಯಾರ ಜೊತೆಗೂ ಹೇಳಿಕೊಳ್ಳದ ಹೆಣ್ಮಕ್ಕಳ ಸಂಖ್ಯೆ ಕಡಿಮೆಯೇನಿಲ್ಲ. ಹೀಗಾಗಿ ಅಂತಹ ಮಕ್ಕಳನ್ನ ತಲುಪಬೇಕೆನ್ನುವುದು ದಿವ್ಯಾ ಅವರ ಇಚ್ಛೆ. ಹಾಗಾಗಿ ಶಾಲೆ, ಕಾಲೇಜು ಇತರೆ ಸಂಘ ಸಂಸ್ಥೆಗಳಲ್ಲಿ ಹೆಣ್ಮಕ್ಕಳಿಗಾಗಿಯೇ ಕಾರ್ಯಾಗಾರ ನಡೆಸಿ, ಇಂತಹ ಪರಿಸರ ಸ್ನೇಹಿ ಪೀರಿಯಡ್ ಪ್ರಾಡಕ್ಟ್ ಗಳನ್ನ ಬಳಸುವಂತೆ ಮನವರಿಕೆ ಮಾಡ್ತಿದ್ದಾರೆ. ಜೊತೆಗೆ ಹೆಣ್ಮಕ್ಕಳು ಅದನ್ನ ಯಾವ ರೀತಿಯಾಗಿ ಬಳಸಬಹುದು ಅನ್ನೋದನ್ನೂ ತಿಳಿಸಕೊಡ್ತಾರೆ.


  ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


  ದಿವ್ಯಾ ಗೋಕರ್ಣ ಅವರಿಗೆ ಪ್ರೇರಣೆಯೇನು?
  ಐಟಿ ಫೀಲ್ಡ್​ನಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ಅವರು 2016ರ ನಂತರ ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ರಂತೆ. ಅನಗತ್ಯವಾಗಿ ಪರಿಸರಕ್ಕೆ ಹಾನಿ ಮಾಡುವ ಸ್ಯಾನಿಟರಿ ಪ್ಯಾಡ್ ಬದಲು ಈ ರೀತಿಯ ಪ್ರಾಡಕ್ಟ್​ಗಳನ್ನ ತಯಾರಿಸೋಕೆ ಮುಂದಾಗಿದ್ರು. ಸದ್ಯ ಆ ಕನಸು ನನಸಾಗಿದೆ. ಅವರ ಶ್ರಮ ಕೈಹಿಡೀತಿದೆ. ಹಳ್ಳಿಹಳ್ಳಿಗೂ ಈ ಕಾಂಫಿ ಕಪ್​ಗಳು ತಲುಪುತ್ತಿವೆ. ತಮ್ಮಿಷ್ಟದ ಉತ್ಪನ್ನಗಳನ್ನ ಹೆಣ್ಮಕ್ಕಳೂ ಮುಂದೆ ಬಂದು ಖರೀದಿಸ್ತಿದ್ದಾರೆ. ಈ ಮೂಲಕ ಜಾಗೃತಿ ಜೊತೆಗೆ ಮಾರ್ಕೆಟಿಂಗ್ ಅನ್ನೂ ನಡೆಸುತ್ತಿರೋ ಸ್ಮಾರ್ಟ್ ಗರ್ಲ್ ದಿವ್ಯಾ ಅವರ ಈ ಸಾಧನೆಗೆ ಶಹಬ್ಬಾಸ್ ಎನ್ನಲೇಬೇಕು.


  ಇದನ್ನೂ ಓದಿ: Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ


  ಈ ಕಾಂಪಿ ಕಪ್​ಅನ್ನು ಆನ್​ಲೈನ್ ಮೂಲಕವೂ ಖರೀದಿ ಮಾಡಬಹುದಾಗಿದೆ. ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ ಕಾಂಪಿ ಕಪ್​ಗಳ ಬೆಲೆ, ಬಳಕೆ, ಬಾಳಿಕೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬಹುದು. +91 87628 59658 ಈ ನಂಬರಿಗೆ ಕಾಲ್ ಮಾಡಿ ಕಪ್ ತರಿಸಿಕೊಳ್ಳಬಹುದಾಗಿದೆ.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: