ಎಲ್ಲಿ ನೋಡಿದ್ರೂ ಹಸಿರು ಹಸಿರಾಗಿ ನಗುತ್ತಿರೋ ಕಾಳುಮೆಣಸಿನ ಬಳ್ಳಿ! ಇತ್ತ ಕಾಳುಮೆಣಸಿನ ಕೋಟೆ ಅತ್ತ ಕಾಳುಮೆಣಸಿನ (Pepper Success Story) ಪಿರಾಮಿಡ್, ಅಬ್ಬಬ್ಬಾ! ಇಡೀ ಊರಿನ ಕಾಳುಮೆಣಸೆಲ್ಲ ಇಲ್ಲೇ ಇದೆಯೇನೋ ಎಂಬಷ್ಟು ಬೃಹತ್ ಕಾಳುಮೆಣಸಿನ ಬಳ್ಳಿಗಳ ಸಾಮ್ರಾಜ್ಯವೇ (Agriculture Success Story) ಇಲ್ಲಿ ಸೃಷ್ಟಿಯಾಗಿದೆ! ಇದು ಉತ್ತರ ಕನ್ನಡದ ಕೃಷಿಕರೊಬ್ಬರ (Uttara Kannada) ಕಾಳುಮೆಣಸಿನ ಕರಾಮತ್ತು. ಹೀಗೊಂದು ಬಳ್ಳಿಗಳ ಲೋಕವನ್ನೇ ಸೃಷ್ಟಿಸಿದ್ದು ಉತ್ತರ ಕನ್ನಡದ ಕುಮಟಾ ಪ್ರಗತಿಪರ ಕೃಷಿಕರು ನೋಡಿ.
ಇವರು ನಾರಾಯಣ್ ಹೆಗಡೆ ಅಂತ, ಸುಮಾರು 10 ವರ್ಷದಿಂದ ಕೃಷಿ ಮಾಡುತ್ತಿರೋ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಂತ್ರವಳ್ಳಿ ಬಳಿ 6 ವರ್ಷದಿಂದ ಕಾಳು ಮೆಣಸಿನ ಕೋಟೆಯನ್ನೇ ಕಟ್ಟಿದ್ದಾರೆ. ಮೆಣಸು ಬಳ್ಳಿಗಳು ಹಿಪ್ಲಿ ಎಂಬ ರೋಗದಿಂದ ಬಳಲಿದಾಗ ಟಿಷ್ಯು ಪದ್ಧತಿ ಆರಂಭಿಸಿದ್ರು. ಆಮೇಲೆ ಕಾಳು ಮೆಣಸು ಬೆಳೆಯಬೇಕು ಅಂತಿರೋ ಎಲ್ರೂ ಇವ್ರ ಹಿಂದೆ ಬಿದ್ಬಿಟ್ಟಾರಂತೆ!
ಇದನ್ನೂ ಓದಿ: Kashmiri Apple: 50 ರೂಪಾಯಿಗೆ ಕಾಶ್ಮೀರದ ಸೇಬು! ಮಾಜಿ ಯೋಧರ ಆ್ಯಪಲ್ ಸೇವೆ
ಬರೋಬ್ಬರಿ 35 ತಳಿಗಳ ಕಾಳುಮೆಣಸಿನ ಒಡೆಯ
ಕೇವಲ ಒಂದೆರಡಲ್ಲ, ಬರೋಬ್ಬರಿ 35 ತಳಿಗಳ ಕಾಳುಮೆಣಸಿನ ಒಡೆಯ ಇವ್ರು! ಕಾಳು ಮೆಣಸಿನ ಕೊಯ್ಲಿಗೆ ಸಮಸ್ಯೆಯಾಗಬಾರದೆಂದು ಕಡಿಮೆ ಎತ್ತರದಲ್ಲೇ ಅಧಿಕ ಇಳುವರಿ ಕೊಡುವ ತಳಿಗಳನ್ನೂ ಬೆಳೆಸಿದರು. ಈಗ ಇದು ಬರೀ ನರ್ಸರಿ ಅಲ್ಲ ತೋಟಗಾರಿಕಾ ಶಿಕ್ಷಣ ನೀಡುವ ವಿಶ್ವವಿದ್ಯಾಲಯವೇ ಆಗ್ಬಿಟ್ಟಿದೆ.
ಇದನ್ನೂ ಓದಿ: Kannada: ಕನ್ನಡ ತಾಯಿಯ ತೇರು ಹೊರಟಿತು, ಆಹಾ! ವೈಭವ ನೋಡಿ
ಖಾರ ಮೆಣಸಿನಿಂದ ಬದುಕೇ ಸಿಹಿ!
ನಾರಾಯಣ ಹೆಗಡೆಯವರು ಬೆಳೆದ ಕಾಳುಮೆಣಸು ತುಂಬಾ ಖಾರವಾಗಿದ್ರೂ ಬದುಕಿಗೆ ಸಿಹಿಯಾದ ಉಡುಗೊರೆಗಳನ್ನೂ ಕೊಡಿಸಿದೆಯಂತೆ. ಕಾಳು ಮೆಣಸು ಬೆಳೆ ಕಲಿಯೋಕೆ ಮೊದಲು ನಾರಾಯಣ ಹೆಗಡೆಯವ್ರ ಸಾಮ್ರಾಜ್ಯಕ್ಕೊಮ್ಮೆ ಹೋಗಿಬರೋದು ಬೆಸ್ಟ್ ಅಂತಾರೆ ಸ್ಥಳೀಯರು!
ನಾರಾಯಣ ಹೆಗಡೆಯವರ ಸಂಪರ್ಕ ಸಂಖ್ಯೆ: 82773 94054
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ