Uttara Kannada: ಈ ಅಕ್ಕಿ ಯಾವ ಸುಗಂಧ ದ್ರವ್ಯಕ್ಕೂ ಕಡಿಮೆಯಿಲ್ಲ, ಊರೆಲ್ಲ ಪರಿಮಳ ಸೂಸುತ್ತೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕನ್ನಡದ ಶಿರಸಿಯ ಮಂಜುಗುಣಿಯಲ್ಲಿ ಕಾಣಸಿಗೋ ಪರಿಮಳ ಸಣ್ಣಕ್ಕಿ ಅಪರೂಪದಲ್ಲಿ ಅಪರೂಪದ ಅಕ್ಕಿ. ಇದಕ್ಕೆ ಯಾವ ಕೆಮಿಕಲ್​ ಅನ್ನೂ ಹಾಕಲ್ಲ, ಪರ್ಫ್ಯೂಮ್ ಸ್ಪ್ರೇ ಮಾಡಲ್ಲ, ಆದ್ರೂ ಇದೊಂಥರ ಪರಿಮಳ ಸೂಸುವ ಅಕ್ಕಿ.

  • News18 Kannada
  • 4-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಸಣ್ಣ ಸಣ್ಣದಾಗಿರೋ ಈ ಅಕ್ಕಿಯೇನೋ ನಾರ್ಮಲ್ ಆಗಿದೆ. ಆದ್ರೆ ಒಂದು ಹಿಡಿ ಕೈಲಿ ಹಿಡಿದ್ರೆ ಮಾತ್ರ ಊರೆಲ್ಲ ಘಮ್ (Parimala Sannakki) ಎನ್ನುತ್ತೆ. ಅರೇ! ಇದಕ್ಕೆಂತ ಕೆಮಿಕಲ್ ಮಿಕ್ಸ್ ಮಾಡಿದ್ದಾರ ಅಂತಾ ಕೇಳ್ಬೇಡಿ. ಯಾಕೆಂದ್ರೆ ಈ ಅಕ್ಕಿ ಹೆಸರೇ ಪರಿಮಳ ಸಣ್ಣಕ್ಕಿ ಅಂತಾ. ಹೆಸರು, ಫಸಲು ಎರಡೂ ಹೊಸತು ಅನ್ನಿಸ್ತಿದ್ಯಲ್ವ? ಹಾಗಿದ್ರೆ ಇದ್ರ ಡಿಟೇಲ್ಸ್ ಇನ್ನಷ್ಟು ಇಂಟೆರೆಸ್ಟಿಂಗ್ ಇದೆ ನೋಡಿ.




ಪರಿಮಳದ ಕಂಪು
ಯೆಸ್, ಉತ್ತರ ಕನ್ನಡದ ಶಿರಸಿಯ ಮಂಜುಗುಣಿಯಲ್ಲಿ ಕಾಣಸಿಗೋ ಪರಿಮಳ ಸಣ್ಣಕ್ಕಿ ಅಪರೂಪದಲ್ಲಿ ಅಪರೂಪದ ಅಕ್ಕಿ. ಇದಕ್ಕೆ ಯಾವ ಕೆಮಿಕಲ್​ ಅನ್ನೂ ಹಾಕಲ್ಲ, ಪರ್ಫ್ಯೂಮ್ ಸ್ಪ್ರೇ ಮಾಡಲ್ಲ, ಆದ್ರೂ ಇದೊಂಥರ ಪರಿಮಳ ಸೂಸುವ ಅಕ್ಕಿ.




ಅಪರೂಪದ ತಳಿ
ಭಾರತದಲ್ಲಿ ಇಂತಹ ಭತ್ತ ಕಂಡು ಬರೋದು ಎರಡು ಕಡೆಗಳಲ್ಲಿ ಮಾತ್ರ ಅಂತಾರೆ ಇಲ್ಲಿನ ಸ್ಥಳೀಯರು. ಅದ್ರಲ್ಲಿ ಒಂದು ಪರಿಮಳಭರಿತ ಆಂಧ್ರದ ಆಮ್ಮದಾನಿಯಲ್ಲಿ, ಇನ್ನೊಂದು ಕರ್ನಾಟಕದ ಈ ಮಂಜುಗುಣಿಯಂತೆ.


ಫಸಲು ಕಡಿಮೆ
ವಿಶೇಷ ಅಂದ್ರೆ, ಮಾಮೂಲಿ ಅಕ್ಕಿ ಎಕರೆಗೆ ಒಂದು ಇಪ್ಪತ್ತೈದು ಮೂಟೆಯಾದರೂ ಇರುತ್ತದೆ. ಆದರೆ ಈ ಅಕ್ಕಿ ಬರೋದು 8 ರಿಂದ 12 ಮೂಟೆ ಮಾತ್ರ! ಹುಟ್ಟುತ್ತಲೇ ಪರಿಮಳ ಇಟ್ಕೊಂಡ ಇದಕ್ಕೆ ಭತ್ತವಾದಾಗ ಪರಿಮಳ ಇರಲ್ಲ. ಮತ್ತೆ ಭತ್ತ ಬಿರಿದು ಅಕ್ಕಿಯಾದಾಗ ಮಿಲ್ ತುಂಬಾ ಪರಿಮಳವೋ ಪರಿಮಳ. ಇನ್ನು ಮನೆಯಲ್ಲಿ ಸ್ಟವ್ ನಲ್ಲಿ ಬೇಯೋಕೆ ಇಟ್ರಂತೂ ನೀವ್ ಪರಿಮಳ ಸಣ್ಣಕ್ಕಿ ಅಡುಗೆಗೆ ಬಳಸ್ತಿದ್ದೀರ ಅಂತಾ ಪಕ್ಕಾ ಹೇಳ್ಬಹುದು. ಅಷ್ಟೊಂದು ಸುವಾಸನೆ ಮನೆ ತುಂಬಾ ಹರಡುತ್ತೆ.


ಯಾಕೆ ಬಳಸುತ್ತಾರೆ?
ಇದು ಈಗ ಅಳಿವಿನಂಚಿನಲ್ಲಿರುವ ಅಕ್ಕಿ, ಮಂಜುಗುಣಿಯ ರೇತಿ ಮಿಶ್ರಿತ ಮಣ್ಣಿಗೆ ಮಾತ್ರ ಸರಿ ಹೊಂದುವ ಈ ಭತ್ತದ ತಳಿ. ಇದರ ಬೆಳೆಯು ಗಿಡ್ಡವಾಗಿ ಧಾನ್ಯಗಳು ದೂರ ದೂರಕ್ಕೆ ಇರುತ್ತವೆ. ಇದನ್ನು ಹೆಚ್ಚಾಗಿ ಕ್ಷೀರಾನ್ನ,ಕೇಸರಿಬಾತ್ ಹಾಗೂ ಮಸಾಲೆ ಅನ್ನ ತಯಾರಿಸಲು ಮಾತ್ರ ಬಳಸುತ್ತಾರೆ.


ಇದನ್ನೂ ಓದಿ: Lizard Dosha: ಹಲ್ಲಿ ದೋಷಕ್ಕೆ ಇಲ್ಲಿ ಸಿಗುತ್ತಂತೆ ಪರಿಹಾರ!


ದರ ಹೀಗಿದೆ
ಶಿರಸಿ, ಕುಮಟಾ ಜನರಿಗೆ ಮಂಜುಗುಣಿ ಅಕ್ಕಿ ಅಚ್ಚುಮೆಚ್ಚು. ಕೆಜಿಗೆ 75-78ರೂಪಾಯಿ ಈಗಿನ ದರ. ಭವಿಷ್ಯದಲ್ಲಿ ಇನ್ನೂ ಹೆಚ್ಚಾಗಬಹುದು. ಇನ್ನು ಉತ್ತರ ಕನ್ನಡದ ಮುಂಡಗೋಡಿನ ಮಣ್ಣಿಗೂ ಈ ತಳಿ ಒಗ್ಗಬಹುದು ಎನ್ನೋದು ರೈತರ ಅಂಬೋಣ. ಇನ್ನು ಇದರ ಪರಿಮಳದ ಗುಟ್ಟು ಅರಿಯಲು, ಅದೆಷ್ಟೋ ಮಂದಿ ಸಂಶೋಧಕರು ಈ ಬೆಳೆಯ ಬಗ್ಗೆ ಅಧ್ಯಯನ ನಡೆಸಿದ್ದೂ ಇದೆ.




ಇದನ್ನೂ ಓದಿ: Uttara Kannada: ಕಾರ್ ಓಡಿಸುವ ಮುನ್ನ ಈ ಯಂತ್ರದೊಳಗೆ ಕುಳಿತು ನೋಡಿ!


ಒಟ್ಟಿನಲ್ಲಿ ಪರಿಮಳ ಸಣ್ಣಕ್ಕಿ ಭಾರೀ ಪರಿಮಳ ಬೀರುವ ಅಕ್ಕಿಯಾದ್ರೂ, ಫಸಲು ನೀಡೋದಲ್ಲಿ ಚೌಕಾಸಿ ತೋರುತ್ತೆ. ಆದ್ರೆ ಊರಿಗೆಲ್ಲ ಸುವಾಸನೆಯ ಕಂಪು ಬೀರುವ ಈ ಅಕ್ಕಿಯ ಟೇಸ್ಟಿ ನೋಡುವ ಭಾಗ್ಯ ಸದ್ಯಕ್ಕಂತೂ ಕೆಲವೇ ಕೆಲವು ಮಂದಿಗಷ್ಟೇ ಲಭಿಸಿದೆ ಅನ್ನೋದೇ ವಿಶೇಷ.

top videos


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    First published: