ಉತ್ತರ ಕನ್ನಡ: ನೋಡೋದಕ್ಕೇನೋ ಮಂಗಳೂರು ಗೋಳಿಬಜೆ ಥರಾ ಕಾಣೋ ಮುಂಜಾನೆಯ, ಜೊತೆಗೆ ಸಂಜೆಯ ಸ್ಪೆಷಲ್ ತಿಂಡಿ. ಅತ್ತ ಗುಳಿ ಇರೋ ತವಾದಲ್ಲಿ ಬೇಯಿಸಿ, ಇತ್ತ ಎಣ್ಣೆಯಲ್ಲಿ ಕರಿದು ತಿನ್ನೋ ಇದ್ರ ಹೆಸ್ರು ಪಡ್ಡು ಅಂತ. ಸಾಮಾನ್ಯವಾಗಿ ಮಂಗಳೂರು ಭಾಗದಲ್ಲಿ ಅಪ್ಪ, ಗುಳಿಯಪ್ಪ ಅಂತಾ ಕರೆಯೋ ಈ ಪಡ್ಡು ಉತ್ತರ ಕನ್ನಡದ ಮುಂಡಗೋಡದಲ್ಲಿ ಇನ್ನಷ್ಟು ವೆರೈಟಿ (Paddu Varieties) ಪಡೆದುಕೊಂಡಿದೆ. ಹಾಗಿದ್ರೆ ಹೇಗಿರುತ್ತೆ ಈ ಪಡ್ಡು ಟೇಸ್ಟಿ (Paddu) ಅನ್ನೋದನ್ನ ನೋಡೋಣ ಬನ್ನಿ.
ಹೌದು, ಪಡ್ಡು ಅಂದ್ರೇನೆ ಬಾಯಲ್ಲಿ ನೀರೂರಿಸುವ ಸಖತ್ ಗುಂಡು ಗುಂಡಾಗಿರೋ ತಿಂಡಿ. ಬೆಳಗ್ಗಿನ ಚಾಗೂ ಓಕೆ, ಸಾಯಂಕಾಲದ ಕಾಫಿಗೂ ಓಕೆ ಅನ್ನೋ ಥರಹದ ತಿಂಡಿಯಿದು. ಇನ್ನು ಟೈಂ ಪಾಸ್ಗೂ, ಬಾಯಿ ಚಪ್ಪರಿಸೋದಕ್ಕೂ ಈ ಪಡ್ಡು ಹೇಳಿಟ್ಟ ತಿಂಡಿ.
50 ವರ್ಷಗಳ ಇತಿಹಾಸ!
ಅಂದಹಾಗೆ ಮುಂಡಗೋಡದ ದಿಗಂಬರ ಅಂಗಡಿ ಸ್ಪೆಷಲ್ ಈ ಪಡ್ಡುಗೆ ದಶಕಗಳ ಇತಿಹಾಸನೂ ಇದೆ. 50 ವರ್ಷಗಳಾಗ್ತಾ ಬಂದ ಈ ಪಡ್ಡು ಅಂಗಡಿಯಲ್ಲಿ ಜನ ಹೀಗೆ ಬಾಯಿ ಚಪ್ಪರಿಸುತ್ತಾ ಪಡ್ಡು ವಡಾ ತಿನ್ನೋದನ್ನ ನೋಡಬಹುದು.
ಇದನ್ನೂ ಓದಿ: Sharavati Hanging Bridge: ನದಿಯ ಮೇಲಿನ ತೂಗುಯ್ಯಾಲೆ, ಇಲ್ಲಿ ನಿಂತ್ರೆ ಗಾಳಿಯಲ್ಲೇ ತೇಲಿದಂತಾಗುತ್ತೆ!
ಗುಳಿ ತವಾದ ಪಡ್ಡು
ಕರಾವಳಿಯಲ್ಲಿ ಮಾಡೋ ಗೋಳಿಬಜೆ ಅಥವಾ ಬೋಂಡಾ ಮಾದರಿಯಲ್ಲೇ ಪಡ್ಡು ಹಿಟ್ಟು ಇರುತ್ತೆ. ಇದನ್ನ ಗುಳಿ ಹೊಂದಿರೋ ತವಾದಲ್ಲಿ ಬೇಯಿಸುತ್ತಾರೆ. ಅಷ್ಟಕ್ಕೇ ಅದ್ರ ಟೇಸ್ಟ್ ನೋಡಬಹುದಾದರೂ ಮತ್ತೆ ಅದನ್ನ ಎಣ್ಣೆಯಲ್ಲಿ ಬೇಯಿಸುವ ಮೂಲಕ ಅದ್ರ ಟೇಸ್ಟ್ ನ ಡಬಲ್ ಮಾಡ್ತಾರೆ. ಹೀಗಾಗಿ ಫ್ರೈ ಮಾಡಲಾಗೋ ಈ ಗರಿಗರಿಯಾದ ಪಡ್ಡು ಸವಿಯೋದಕ್ಕೂ ರುಚಿ ರುಚಿಯಾಗಿರ್ತವೆ. ಜೊತೆಗೆ ಆನ್ ದ ಸ್ಪಾಟ್ ಬಿಸಿ ಬಿಸಿಯಾಗಿ ರೆಡಿ ಮಾಡಿಕೊಡೋದ್ರಿಂದ ಫ್ರೆಶ್ ಹಾಗೂ ಹಾಟ್ ಆಗಿ ಇರುತ್ತೆ. ಹೀಗಾಗಿಯೇ ಗ್ರಾಹಕರು ಪಡ್ಡು ವಡಾಗಾಗಿ ಕ್ಯೂ ನಿಲ್ಲುತ್ತಾರೆ.
ಎಲ್ರಿಗೂ ಅಚ್ಚುಮೆಚ್ಚು
ಒಂದು ಪ್ಲೇಟ್ ಪಡ್ಡುಗೆ 30 ರೂಪಾಯಿಯಂತೆ ಎಂಟು ಗರಿಗರಿಯಾದ ಪಡ್ಡನ್ನು ಹಾಕಿ ಬಡಿಸಲಾಗುತ್ತದೆ. ಜೊತೆಗೆ ಗಟ್ಟಿ ಚಟ್ನಿ ಮತ್ತು ಪಾಲಕ್ ಚಟ್ನಿ ಸೇರ್ಸಿಕೊಂಡ್ರೆ ಹೆಚ್ಚು ರುಚಿ ನೀಡುತ್ತೆ. ಹೀಗಾಗಿ ಕೂಲಿ ಮುಗಿಸಿ ಬರುವವರಿಂದ ಹಿಡಿದು ಆಫೀಸ್ ಕೆಲಸ ಮುಗಿಸಿಕೊಂಡು ಬರುವವರಿಗೂ ಪಡ್ಡು ವಡಾ ಒಂಥರಾ ಎನರ್ಜಿ ನೀಡುತ್ತೆ.
ಇದನ್ನೂ ಓದಿ: Uttara Kannada News: ಈ 88ರ ಹರೆಯದ ಅಜ್ಜಿಯ ಜೀವನ ಪ್ರೀತಿಗೆ ಬಿಗ್ ಸೆಲ್ಯೂಟ್!
ಉತ್ತಮ ಆದಾಯ
ಸಂಜೆ 6 ಗಂಟೆಯಿಂದ ರಾತ್ರಿ 10ರವರೆಗೆ ಮಾತ್ರ ಓಪನ್ ಇರೋ ಈ ಪಡ್ಡುವಿನಿಂದ ಇದನ್ನ ನಡೆಸುತ್ತಿರೋ ಮಾಲೀಕರು ದಿನಕ್ಕೆ 4000 ರಿಂದ 5000 ರೂಪಾಯಿ ವರೆಗೆ ಆದಾಯ ಗಳಿಸುತ್ತಾರೆ. ಒಟ್ಟಿನಲ್ಲಿ ಮುಂಡಗೋಡದ ಲೋಕಲ್ ಫುಡ್ ಅಂತಾನೇ ಬ್ರ್ಯಾಂಡ್ ಪಡೆದುಕೊಂಡಿರೋ ಈ ಪಡ್ಡು ಮುಂದೆ ಇನ್ಯಾವ ಚೈನೀಸ್ ಫುಡ್ಡೂ ನಿಲ್ಲಲ್ಲ ಮಾರ್ರ್ರೆ ಅನ್ನೋದು ಆಹಾರಪ್ರಿಯರ ಅಂಬೋಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ