Swarnavalli Mutt: ಇಲ್ಲಿ ಏನೇ ಸಂಭ್ರಮ-ಸಡಗರ ನಡೆದ್ರೂ ಕೃಷಿಕರಿಗೇ ಮೀಸಲು! ಎಂತೆಂಥಾ ಸ್ಪರ್ಧೆ ಇತ್ತು ನೋಡಿ!

X
ಇಲ್ಲಿ ವಿಡಿಯೊ ನೋಡಿ

"ಇಲ್ಲಿ ವಿಡಿಯೊ ನೋಡಿ"

ನಾವೆಲ್ಲ ಕೃಷಿ ಮೇಳ ಅನ್ನೋದನ್ನ ಕೇಳಿದ್ದೀವಿ. ಅಥವಾ ಇನ್ಯಾವುದೋ ಜಯಂತಿಗಳನ್ನ ಆಚರಿಸಿದ್ದೀವಿ. ಆದ್ರೆ ಉತ್ತರ ಕನ್ನಡದ ಶಿರಸಿಯ ಸ್ವರ್ಣವಲ್ಲಿ ಮಠದಲ್ಲಿ ನಡೆಯುವ ಈ ಕಾರ್ಯಕ್ರಮ ಕೃಷಿ ಜಯಂತಿ.

  • News18 Kannada
  • 4-MIN READ
  • Last Updated :
  • Uttara Kannada, India
  • Share this:

ಶಿರಸಿ: ತರಹೇವಾರಿ ತಿಂಡಿಗಳು, ಕೃಷಿ ಸಾಮಗ್ರಿಗಳು, ನರ್ಸರಿಯಿಂದ ಇಳಿದು ನಳನಳಿಸುತ್ತಿರುವ ಸಸಿಗಳು, ರಾಶಿ ರಾಶಿ ಪುಸ್ತಕಗಳು, ಗೋಮಯದ ಮೂರ್ತಿಗಳು. ಇನ್ನೊಂದೆಡೆ ಭಕ್ತಿಯಿಂದ ನಡೆಯುತ್ತಿರುವ ಪೂಜೆ ಪುನಸ್ಕಾರ, ಮತ್ತೊಂದೆಡೆ ಶಂಖವಾದನ, ತೆಂಗಿನಕಾಯಿ ಸುಲಿಯುವ (Farmers Competition) ಯುವಕರ ತಂಡ. ಹೀಗೆ ಇಡೀ ದೇಗುಲದ ಪ್ರಾಂಗಣದಲ್ಲಿ (Hindu Temple) ವಿಶೇಷ ಕಳೆ ತುಂಬಿದ್ದ ಈ ವಿಶೇಷ ಕಾರ್ಯಕ್ರಮ (Swarnavalli Mutt) ಭಾರೀ ಗಮನ ಸೆಳೆಯಿತು.


ಯೆಸ್,‌ ನಾವೆಲ್ಲ ಕೃಷಿ ಮೇಳ ಅನ್ನೋದನ್ನ ಕೇಳಿದ್ದೀವಿ. ಅಥವಾ ಇನ್ಯಾವುದೋ ಜಯಂತಿಗಳನ್ನ ಆಚರಿಸಿದ್ದೀವಿ. ಆದ್ರೆ ಉತ್ತರ ಕನ್ನಡದ ಶಿರಸಿಯ ಸ್ವರ್ಣವಲ್ಲಿ ಮಠದಲ್ಲಿ ನಡೆಯುವ ಈ ಕಾರ್ಯಕ್ರಮ ಕೃಷಿ ಜಯಂತಿ. ಅರೇ! ಇದ್ಯಾರ ಜಯಂತಿ ಅಂತಾ ಕೇಳ್ಬೇಡಿ. ಶ್ರೀ ನರಸಿಂಹ ಜಯಂತಿಯೇ ಕೃಷಿ ಜಯಂತಿ. ಅದ್ಯಾಕೆ ಇಲ್ಲಿ ನರಸಿಂಹ ಜಯಂತಿಯನ್ನ ಕೃಷಿ ಜಯಂತಿ ಆಚರಿಸ್ತಾರೆ ಅಂದ್ಕೊಂಡ್ರಾ?




ಎಲ್ಲ ವರ್ಷದವರನ್ನೂ ಒಂದುಗೂಡಿಸಿದ ಜಯಂತಿ
ನಿಜ, ಅದಕ್ಕೆ ಬೇರೆ ಯಾವುದೇ ಹಿನ್ನೆಲೆ ಇಲ್ದೇ ಹೋದ್ರೂ ಮಠದ ಕೃಷಿ ಆಸಕ್ತಿಯನ್ನ ತೋರ್ಪಡಿಸುತ್ತಿದೆ. ಆದ್ರಿಂದ ಶಾಸ್ತ್ರೀಯವಾಗಿ ಮುಗಿದುಹೋಗುತ್ತಿದ್ದ ಆಚರಣೆಯೊಂದು ಎಲ್ಲ ವರ್ಗದ ಮಂದಿಯನ್ನು ಒಂದುಗೂಡಿಸಿ‌ ಕೃಷಿಯಲ್ಲಿ ಆಸಕ್ತರನ್ನಾಗಿಸುವಂತೆ ಮಾಡಿದೆ. ರೈತರಿಗಾಗಿಯೇ ಸ್ಪರ್ಧೆ, ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತೆ. ಹೀಗೆ ಸ್ವರ್ಣವಲ್ಲಿ ಮಠ ಕೃಷಿಗೆ ವಿಶೇಷ ಪ್ರಾಧಾನ್ಯತೆ ನೀಡುತ್ತಾ ಬಂದಿದೆ.




ಆದಿ ಶಂಕರರು ಸ್ಥಾಪಿಸಿದ ಮಠ
1200 ವರ್ಷಗಳ ಹಿಂದೆ ಆದಿ ಶಂಕರರಿಂದ ಸ್ಥಾಪಿತವಾದ ಈ ಮಠದ ಈಗಿನ ಗುರುಗಳಾದ ಅಭಿನವ ಶಂಕರ ಉಪಾಧಿಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಅವರು ಸನ್ಯಾಸತ್ವ ಸ್ವೀಕರಿಸಿಕೊಂಡ ಕೆಲ ವರ್ಷಗಳ ನಂತರ ಮಠದ ಅದ್ದೂರಿ ಕಾರ್ಯಕ್ರಮವಾಗಿದ್ದ ನರಸಿಂಹ ಜಯಂತಿಯನ್ನು ಕೃಷಿ ಜಯಂತಿಯನ್ನಾಗಿಸಿದರು.


ಇದನ್ನೂ ಓದಿ: Inspiration: 300 ಕೆಜಿ ಭಾರ ಹೊತ್ತು ಸಾಗುತ್ತೆ ಈ ರೈತ ತಯಾರಿಸಿದ ಗಾಡಿ!


ಕೃಷಿಯತ್ತ ಜನರನ್ನು ಆಕರ್ಷಿಸುವ ಕಾರ್ಯಕ್ರಮಗಳು
ಮೊದಲು ಶಾಸ್ತ್ರೀಯ ಆಚರಣೆಗಳ ಪರಿಧಿಯಲ್ಲೇ ಇದ್ದಿದ್ದ ಸಂಭ್ರಮಗಳು ಸುತ್ತಲಿನ ಐದಾರು ಜಿಲ್ಲೆಗಳ ರೈತರು ತಮ್ಮ ಕೃಷಿ ಸಾಧನೆಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ. ಅಷ್ಟೇ ಅಲ್ಲದೇ, ಮಕ್ಕಳಿಗೆ ಶಂಖವಾದನ, ಯುವಕ-ಯುವತಿಯರಿಗೆ ಕಾಯಿ ಸುಲಿಯುವ, ಅಡಿಕೆ ಸುಲಿಯುವ ಸ್ಪರ್ಧೆ ಆಯೋಜಿಸಿ ಜನರನ್ನು ಕೃಷಿಯತ್ತ ಆಕರ್ಷಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ದೆಹಲಿಯ ಕೃಷಿ ತಜ್ಞರು ಬಂದು ಜನರಿಗೆ ಬೇಸಾಯಕ್ಕೆ ಬೇಕಾದ ಉಪನ್ಯಾಸ ಮಾಡುತ್ತಾರೆ.


ಹಲವು ಜಿಲ್ಲೆಗಳ ರೈತರು ಭಾಗಿ, ಸನ್ಮಾನ
ಉಡುಪಿ, ಮಂಗಳೂರು, ಧಾರವಾಡ, ಹಾವೇರಿ, ಶಿವಮೊಗ್ಗದ ರೈತರೂ ನರಸಿಂಹ ಜಯಂತಿಯ ಹಿಂದಿನ ದಿನವೇ ಮಠದಲ್ಲಿ ಬೀಡು ಬಿಟ್ಟಿರುತ್ತಾರೆ. ಕೃಷಿಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಗುತ್ತೆ, ಪರಿಸರದ ಕಾಳಜಿಗೆ ಒತ್ತು ಕೊಟ್ಟವರಿಗೆ ಗೌರವ ನೀಡಲಾಗುತ್ತೆ.


ಇದನ್ನೂ ಓದಿ: Positive Story: ಅಮೇರಿಕಾದ ಸಂಸ್ಥೆಯಿಂದ ಸಿದ್ಧಿ ಹುಡುಗಿಗೆ ಸ್ಕಾಲರ್‌ಶಿಪ್‌, ಇದು ಕಣ್ರೀ ಸಾಧನೆ ಅಂದ್ರೆ!


ಈ ಬಾರಿ 50 ಕ್ಕೂ ಹೆಚ್ಚು ಸ್ಟಾಲ್​ಗಳು ಕಾರ್ಯಕ್ರಮಕ್ಕೆ ಬಂದಿದ್ದವು. ಉತ್ತರಕನ್ನಡ ಜಿಲ್ಲೆಯ ಮಲೆನಾಡು ಸೀಮೆಯ ಹವ್ಯಕ ಕುಟುಂಬಗಳಿಗೆ ಇದು ಪ್ರಧಾನ ಮಠವಾದ್ದರಿಂದ ವೇದಘೋಷ, ರಾಜೋಪಚಾರಾದಿ ಸೇವೆಗಳು ಒಂದು ಕಡೆ ದೇವರಿಗೆ ಸಲ್ಲುತ್ತಿದ್ದರೆ, ಮತ್ತೊಂದೆಡೆ ಕೃಷಿ ಉಪನ್ಯಾಸ, ಕೃಷಿ ಸಂಬಂಧಿತ ಸ್ಪರ್ಧೆಗಳ ಭರಾಟೆ ಜೋರಾಗಿತ್ತು. ಹೀಗೆ ಸ್ವರ್ಣವಲ್ಲಿಯ ಮಠ ನಿಜಕ್ಕೂ ಕೃಷಿಕರ ಪಾಲಿನ ಆರಾಧ್ಯ ತಾಣವಾಗಿ ಬದಲಾಗಿತ್ತು.

First published: