ತೆರೆ ಮೇಲೆ ಮಿಂಚಿನಂತೆ ಬೆಳಕು, ಗುಡುಗಿನಂತಹ ಧ್ವನಿ. ಸುರಿಮಳೆಯಂತೆ ನಡುಗಿಸುವ ಭಾವರಸದ ಮಳೆ. ಅಲ್ಲಲ್ಲೇ ಸೋನೆಯಾಗಿ ಸುರಿದು ಮುದ ನೀಡುವ ದೃಶ್ಯಾವಳಿಗಳು. ನೀಲಕಂಠೇಶ್ವರ ನಾಟ್ಯ ಸಂಘ ಅಥವಾ ನೀನಾಸಂ (NINASAM) ಹಮ್ಮಿಕೊಂಡ ಮುಕ್ತಧಾರಾ ನಾಟಕದ ಅದ್ಭುತ ದೃಶ್ಯಗಳಿವು. ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಲ್ಲಾಪುರದಲ್ಲಿ ನಡೆದ ಸಂಚಾರಿ ನಾಟಕ (Drama) ಪ್ರದರ್ಶನದಲ್ಲಿ ನೀನಾಸಂ ಕಲಾವಿದರು ಆಗಮಿಸಿ ಮನರಂಜಿಸಿದರು.
ಯಲ್ಲಾಪುರದ ಅಡಿಕೆ ವ್ಯಾಪಾರಸ್ಥರ ಸಂಘವು ನೀನಾಸಂ ಜೊತೆ ಸೇರಿ ಹಮ್ಮಿಕೊಂಡಿದ್ದ ಈ ಸಂಚಾರಿ ನಾಟಕಕ್ಕೆ ಜಿಲ್ಲೆಯ ಹಲವೆಡೆಯಿಂದ ಕಲಾರಸಿಕರು ಆಗಮಿಸಿದರು.
ಇದನ್ನೂ ಓದಿ: Soil Prasad: ಇಲ್ಲಿ ಮಣ್ಣೇ ಪ್ರಸಾದ! ಮಕ್ಕಳ ಹಠ ಕಡಿಮೆ ಆಗೋಕೆ ಈ ದೇಗುಲದ ಮಣ್ಣು ತಿನಿಸುವ ಪೋಷಕರು!
ಸಶಕ್ತವಾಗಿ ಮೂಡಿಬಂದ ನಾಟಕ
ಮೂಲತಃ ರವೀಂದ್ರನಾಥ್ ಟ್ಯಾಗೋರ್ ರಚಿಸಿದ ಮುಕ್ತಧಾರಾ ನಾಟಕವನ್ನು ಅಹೋಬಲ ಶಂಕರ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟ ಕಾಲದ ಭಾರತದ ಕಥೆಯನ್ನು ಒಳಗೊಂಡಿರೋ ನಾಟಕ ಪ್ರವೀಣ್ ಕುಮಾರ್ ಅವರ ನಿರ್ದೇಶನದಲ್ಲಿ ಸಶಕ್ತವಾಗಿ ಮೂಡಿಬಂತು.
ಇದನ್ನೂ ಓದಿ: Positive Story: ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ! ಇವರ ಸಾಹಸ ನೀವೇ ನೋಡಿ
ನಾಟಕಕ್ಕೆ ಮಾರುಹೋದ ಸ್ಥಳಿಯರು
ಯಲ್ಲಾಪುರದಲ್ಲಿ ನಡೆದ ನಾಟಕವನ್ನು ಸ್ಥಳೀಯ ಪರಿಸರದ ಜನರು ಆಸಕ್ತಿಯಿಂದ ಕಣ್ತುಂಬಿಕೊಂಡರು. ಕಲಾತ್ಮಕವಾಗಿ ನಾಟಕವನ್ನು ವೀಕ್ಷಿಸಿದ ಪ್ರೇಕ್ಷಕ ವರ್ಗವಂತೂ ಕೊನೆವರೆಗೂ ಇದ್ದು, ನಾಟಕದ ದೃಶ್ಯಗಳಿಗೆ ಮಾರು ಹೋಗುವಷ್ಟರ ಮಟ್ಟಿಗೆ ಕಥೆ ಹಿಡಿದಿರಿಸಿತ್ತು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ