ಉತ್ತರ ಕನ್ನಡ: ನೀರಲ್ಲಿ (Water) ತೇಲಾಡೋ ಬೋಟ್ (Boat) ನಲ್ಲಿದೆ ಚೆಂದದ ಮನೆ. ಮೇಲೊಂದು ಪಾರ್ಟಿ ಮಹಡಿ, ಕೆಳಗಡೆ ಚೆಂದದ ಕೊಠಡಿ, ಹೀಗೆ ನೀರಲ್ಲಿ ತೇಲಾಡ್ತಾ ನದಿಯನ್ನೆಲ್ಲ ಸುತ್ತು ಹಾಕ್ತಾ ಬರೋ ಮಜಾನೇ ಬೇರೆ. ಅಂದಹಾಗೆ ಈ ಬೋಟ್ ಹೌಸ್ ಗಳೆಲ್ಲ ಇರೋದು ಕೇರಳ, ಗೋವಾದಲ್ಲೋ ಅಲ್ಲ, ನಮ್ಮದೇ ಉತ್ತರ ಕನ್ನಡ (Uttara Kannada) ಶರಾವತಿ ಹಿನ್ನೀರಿನಲ್ಲಿ.
ಶರಾವತಿ ಹಿನ್ನೀರಲ್ಲಿ ಬೋಟ್ ಹೌಸ್
ಯೆಸ್, ಬೋಟ್ ಹೌಸ್ ಗಳು ರಾಜ್ಯದ ಕರಾವಳಿ ತೀರಗಳಲ್ಲಿ ಅಪರೂಪ. ಇದೀಗ ಉತ್ತರ ಕನ್ನಡದ ಹೊನ್ನಾವರದ ಶರಾವತಿ ನದಿ ಹಿನ್ನೀರಿನಲ್ಲಿ ಬೋಟ್ ಹೌಸ್ ವೊಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈಗಾಗಲೇ ಇರೋ ಸ್ಪೀಡ್ ಬೋಟ್ ಗಳ ಅಬ್ಬರದ ನಡುವೆ ಈ ಬೋಟ್ ಹೌಸ್ ಗಳು ಸೈಲೆಂಟಾಗಿ ನೀರಲ್ಲಿ ತೇಲಾಡ್ತಾ ಮುದ ನೀಡುತ್ತೆ. ಇನ್ನು ಪಾರ್ಟಿ, ಟೈಂ ಪಾಸ್ ಹೀಗೆ ಏನೇ ಗೌಜಿ ಗಮ್ಮತ್ತ್ ಮಾಡೋದಿದ್ರೂ ಈ ಬೋಟ್ ಹೌಸ್ ಸೂಪರೋ ಸೂಪರ್.
ಹೀಗಿದೆ ಬೋಟ್ ಹೌಸ್
ಶರಾವತಿ ಹಿನ್ನೀರಿನ ಈ ಪ್ರದೇಶದಲ್ಲಿ ಸ್ಪೀಡ್ ಬೋಟ್ ಗಳು ಕೆಲವು ವರುಷಗಳಿಂದ ಇದ್ದಾವೆ. ಆದರೆ ಇಲ್ಲಿ ಬೋಟ್ ನಡೆಸುವವರೇ ಹೀಗ್ಯಾಕೆ ಒಂದು ಪ್ರಯೋಗ ಮಾಡಬಾರದು ಎಂದು ಬೋಟ್ ಹೌಸ್ ಅನ್ನು ಈ ಒಂದು ತಿಂಗಳ ಹಿಂದೆ ಪ್ರಾರಂಭಿಸಿದ್ದಾರೆ. ಕೇರಳದ ಬೋಟ್ ಹೌಸ್ ಮಾಡುವ ಜನರು ಬಂದು ಈ ಸಾಧನವನ್ನು ತಯಾರಿ ಮಾಡಿದ್ದಾರೆ. ಎರಡು ಕಂಪಾರ್ಟ್ ಮೆಂಟ್ನ ಈ ಬೋಟ್ನಲ್ಲಿ ಮೇಲುಗಡೆ ಪಾರ್ಟಿ ಮಾಡಲು ಓಪನ್ ಹಾಲ್ ಇದೆ. ಕೆಳಗಡೆ ಎರಡು ಕಪಲ್ ಬೆಡ್ ರೂಮ್ ಹಾಗೂ ಕಿಚನ್ ಇದೆ.
ಪಾರ್ಟಿಗಂತೂ ಸೂಪರ್!
ಇನ್ನು ಪಾರ್ಟಿ ಮೋಜು ಮಸ್ತಿ, ಭಾಷಣ ಹೀಗೆ ಏನೇ ಇದ್ರೂ ಅದ್ಕೆಲ್ಲ ದೊಡ್ಡ ಧ್ವನಿಯಾಗಲು ಸೌಂಡ್ ಸಿಸ್ಟಂಗಳು ಇದ್ದಾವೆ. ಜೊತೆಗೆ ಬೋಟ್ ತುಂಬಾ ಲೈಟಿಂಗ್ ಇದ್ದು ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸಬಹುದಾಗಿದೆ. ಆರಾಮಾಗಿ ಒಂದು ಹತ್ತಿಪ್ಪತ್ತು ಜನ ಏಕಕಾಲಕ್ಕೆ ಪ್ರಯಾಣ ಮಾಡಬಹುದಾದ ಬೋಟ್ ಹೌಸ್ ಇದಾಗಿದೆ. ಶರಾವತಿ ಹಿನ್ನೀರಿಂದ ಅರಬ್ಬೀ ಸಮುದ್ರದ ವರೆಗೆ ಸಂಜೆಯಿಂದ ರಾತ್ರಿಯ ತನಕ ಪ್ರಯಾಣ ಮಾಡಬಹುದು. ತಂಪು ಗಾಳಿ, ತೇಲುವ ಮನೆ, ಮಂದವಾಗಿ ಸಾಗುವ ನೀರಿನ ಗತಿ ಎಲ್ಲವೂ ಕೂಡಾ ಹೊಸ ಅನುಭವವವನ್ನು ನಿಮಗೆ ಕೊಡಲಿದೆ.
ರೇಟು ಹೇಗಿದೆ?
ಈ ಬೋಟ್ ಹೌಸ್ ನಲ್ಲಿ ಕಾಲಕಳೆಯಲು ಒಂದು ದಿನಕ್ಕೆ 1500 ರೂಪಾಯಿ ಚಾರ್ಜ್ ಮಾಡಲಾಗುತ್ತೆ. ಊಟದ ಜೊತೆಗೆ ಎಂದರೆ 2500 ರೂಪಾಯಿ ಭರಿಸಬೇಕಾಗುತ್ತದೆ. ಬೋಟ್ ಹೌಸ್ ನ ಪ್ರಯಾಣದ ನಂತರ ಸ್ಪೀಡ್ ಬೋಟಿಂಗ್ ಮೂಲಕ ಉಚಿತವಾಗಿ ಒಂದು ಕ್ವಿಕ್ ರೌಂಡಪ್ ಹೊಡೆಯುವ ಅವಕಾಶವೂ ಇದೆ. ಹಾಗಿದ್ರೆ ನೀವೂ ಈ ಬೋಟ್ ಹೌಸ್ ನಲ್ಲಿ ಎಂಜಾಯ್ ಮಾಡ್ಬೇಕಂದ್ರೆ ಮೊಬೈಲ್ ಸಂಖ್ಯೆ 93800 05924 ಅಥವಾ 87626 11377 ಈ ನಂಬರನ್ನು ಸಂಪರ್ಕಿಸಿ. ಆರಾಮಾಗಿ ಬೋಟಿಂಗ್ ಎಂಜಾಯ್ ಮಾಡಿ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ