• Home
  • »
  • News
  • »
  • uttara-kannada
  • »
  • Uttara Kannada: ಅಕ್ಕಸಾಲಿಗರಾದ ಗೂರ್ಖಾಗಳು! ಮಾಡ್ತಾರೆ ಸಖತ್ ಡಿಸೈನ್

Uttara Kannada: ಅಕ್ಕಸಾಲಿಗರಾದ ಗೂರ್ಖಾಗಳು! ಮಾಡ್ತಾರೆ ಸಖತ್ ಡಿಸೈನ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸಾಮಾನ್ಯವಾಗಿ ನೇಪಾಳಿಗರು ಭಾರತಕ್ಕೆ ಗೂರ್ಖಾ ಕೆಲಸಕ್ಕೆ ಬರುತ್ತಾರೆ ಅನ್ನೋ ಮಾತಿದೆ. ಆದ್ರೆ ಇವರು ಮಾತ್ರ ಡಿಫರೆಂಟ್!

  • News18 Kannada
  • Last Updated :
  • Mundgod, India
  • Share this:

    ಉತ್ತರ ಕನ್ನಡ: ಚಿನ್ನ, ಬೆಳ್ಳಿ, ತಾಮ್ರ ಹೀಗೆ ಎಂತಹದ್ದೇ ಲೋಹ ಇರ್ಲಿ ಅದಕ್ಕೊಂದು ಚೆಂದದ ರೂಪ ನೀಡಬಲ್ಲರು. ಸಾಮಾನ್ಯವಾಗಿ ಮಾಡಲಾಗದ ಕೆತ್ತನೆಯನ್ನು ಇವರು ಮೂಡಿಸಬಲ್ಲರು. ಇವ್ರು ತಯಾರಿಸಿದ ಲೋಹದ ಮೂರ್ತಿಗಳಿಗಂತೂ ಸಖತ್ ಡಿಮ್ಯಾಂಡ್ ಕೂಡಾ ಇದೆ. ಅಷ್ಟಕ್ಕೂ ಇವರೆಲ್ಲ ಗೂರ್ಖಾಗಳು. ಹೌದು, ನೇಪಾಳದಿಂದ ಬಂದು ಕರುನಾಡಲ್ಲಿ ಬದುಕು ಕಟ್ಟಿಕೊಂಡವರ ಯಶೋಗಾಥೆಯಿದೆ.


    ಯೆಸ್, ಹೀಗೆ ಬೆಂಕಿಯಲ್ಲಿ ಲೋಹಗಳನ್ನ ಕಾಯಿಸಿ, ಅದಕ್ಕೊಂದು ರೂಪ ನೀಡುವ ಇವರು ಮೂಲತಃ ನೇಪಾಳಿಗರು. ಆದ್ರೆ ಸದ್ಯ ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ನಮ್ಮೂರ ಅಕ್ಕಸಾಲಿಗರಂತೆ ಕೆಲಸ ಮಾಡುತ್ತಿರುವರು. ಇವರೆಲ್ಲರಿಗೂ ಕ್ಯಾಪ್ಟನ್ ನಂತಿರೋ ಇವರು ದಾವಾ ಅಂತ.


    1994ರಲ್ಲೇ  ನೇಪಾಳದಿಂದ ಬಂದಿದ್ರು
    1994ರಲ್ಲಿ ಮೈಸೂರಿನ ಟಿಬೇಟಿಯನ್ ವಲಸಿಗರ ತಾಣದಲ್ಲಿ ಅವರಿಗೆ ಸಂಬಂಧಿಸಿದ ಮೂರ್ತಿ ಕೆತ್ತನೆ ಮಾಡಲು ನೇಪಾಳದಿಂದ ಬಂದಿದ್ದರು. ನಂತರ ದಾವಾ ಸಂಗಡ ಎಂಟರಿಂದ ಹತ್ತು ಜನ ಈ ಕಲೆಯನ್ನು ಕರಗತ ಮಾಡಿಕೊಂಡರು. ಇಂದಿಗೂ ಇವರು ತಯಾರಿಸುವ ವಿಗ್ರಹಗಳು ಅತ್ಯಂತ ಆಕರ್ಷಕ, ಅಷ್ಟೇ ಗುಣಮಟ್ಟದ್ದಾಗಿರುತ್ತದೆ.


    ಗೂರ್ಖಾ ಕೆಲಸಕ್ಕೆ ಸೀಮಿತರಲ್ಲ!
    ಸಾಮಾನ್ಯವಾಗಿ ನೇಪಾಳಿಗರು ಭಾರತಕ್ಕೆ ಗೂರ್ಖಾ ಕೆಲಸಕ್ಕೆ ಬರುತ್ತಾರೆ ಅನ್ನೋ ಮಾತಿದೆ. ಆದ್ರೆ ಇವರು ಮಾತ್ರ ಸಾಂಪ್ರದಾಯಿಕ ಅಕ್ಕಸಾಲಿಗರ ಕೆಲಸವನ್ನು ಕಲಿತು, ಈಗ ಅದರಲ್ಲೇ ನಿಪುಣರಾಗಿ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಇತರೆ ಲೋಹಗಳ ಕರಕುಶಲ ವಸ್ತುಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.




    ವಿದೇಶಗಳಲ್ಲೂ ಇದೆ ಬೇಡಿಕೆ
    ಅದರಲ್ಲಿ ಸೂಕ್ಷ್ಮ ಕೆತ್ತನೆಗೆ ಹೆಸರುವಾಸಿಯಾಗಿರುವ ಈ ತಂಡದ ಈ ಕಲಾಕುಸುರಿಗೆ ವಿದೇಶಗಳಿಂದಲೂ ಬೇಡಿಕೆಯಿದೆ. ಚೀನಾ, ವಿಯೆಟ್ನಾಂ, ಸಿಂಗಾಪುರ ಹಾಗೂ ಕೆನಡಾ, ಅಮೇರಿಕಾದಲ್ಲೂ ಇವರು ಕೆತ್ತಿದ ಮೂರ್ತಿಗಳು ಜಾಗ ಪಡೆದಿವೆ.


    ಇದನ್ನೂ ಓದಿ: Bananti Devi Temple: ಬಲು ವಿಶೇಷ ಈ ಬಾಣಂತಿ ಜಾತ್ರೆ, ನೀರಿನಲ್ಲಿ ಮಕ್ಕಳನ್ನು ತೇಲಿಬಿಡುವ ಹರಕೆ!


    ಮಂದಿರ, ಪಾದುಕೆಗಳು, ಗುಡಿಯ ಹೊರಭಾಗದ ಕೆತ್ತನೆಗಳು ಹೀಗೆ ದೇವಾಲಯಕ್ಕೆ ಸಂಬಂಧಿಸಿದ ಮೆಟಲ್ ಡಿಸೈನ್ ಅನ್ನೂ ಇವರು ಮಾಡುತ್ತಾ ಬಂದಿದ್ದಾರೆ. ಕೇವಲ ಬೌದ್ಧ ದೇವಾಲಯಕ್ಕೆ ಸೀಮಿತವಾಗಿದ್ದ ಕೆಲಸ ಈಗ ಹಿಂದೂ ದೇಗುಲಗಳಿಗೂ ವ್ಯಾಪಿಸಿದೆ.


    ಇದನ್ನೂ ಓದಿ: Uttara Kannada: ಹೆರಿಗೆಯ ದಿನ ಬಂದ್ರೂ ಈ ಎಮ್ಮೆಗೆ ಕೆಚ್ಚಲೇ ಮೂಡಿಲ್ಲ!


    ಇವರಲ್ಲಿ ಯಾರೂ ಜಾಸ್ತಿ ಕಲಿತವರಿಲ್ಲ, ಆದರೂ ಇವರ ಕೈಚಳಕ್ಕೆ ತುಂಬಾ ಜನ ಮಾರು ಹೋಗಿದ್ದಾರೆ. ಒಟ್ಟಿನಲ್ಲಿ ಗೂರ್ಖಾರು ಅನ್ನೋ ಟ್ಯಾಗ್ ಲೈನ್ ಅಳಿಸಿ ಅತ್ಯುತ್ತಮ ಅಕ್ಕಸಾಲಿಗರಾಗಿ ಈ ನೇಪಾಳಿಗರು ಬದಲಾಗಿದ್ದಾರೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: