• Home
  • »
  • News
  • »
  • uttara-kannada
  • »
  • Uttara Kannada: ಉತ್ತರ ಕನ್ನಡಿಗರಿಗೆ ಖುಷಿ ಸುದ್ದಿ! ಬಸ್​ಗೆ ದುಬಾರಿ ಹಣ ತೆರಬೇಕಿಲ್ಲ

Uttara Kannada: ಉತ್ತರ ಕನ್ನಡಿಗರಿಗೆ ಖುಷಿ ಸುದ್ದಿ! ಬಸ್​ಗೆ ದುಬಾರಿ ಹಣ ತೆರಬೇಕಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ರೈಲಿನ ಸೌಲಭ್ಯವನ್ನು ನಾಗರಿಕರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಭಾರತೀಯ ರೈಲ್ವೇ ಮನವಿ ಮಾಡಿದೆ. ಇನ್ಯಾಕೆ ತಡ? ಊರು ಕರಿಯುತಿದೆ ಹಬ್ಬಕ್ಕೆ ಬನ್ನಿ!

  • Share this:

    ಕಾರವಾರ:  ಉತ್ತರ ಕನ್ನಡದ ಜನರಿಗೆ ನವರಾತ್ರಿ ಅಂದ್ರೆ ತುಂಬಾ ಸಡಗರದ ಹಬ್ಬ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ (Uttara Kannada) ಜನ ಖುಷಿ ಪಡುವ ಸುದ್ದಿ ಇಲ್ಲೊಂದಿದೆ, ಅದೇನು ಗೊತ್ತಾ? ಯಶವಂತಪುರ-ಮುರ್ಡೇಶ್ವರ (Yeshvantpur Murdeshwar Trains) ನಡುವೆ ಹಬ್ಬದ ಪ್ರಯುಕ್ತ ವಿಶೇಷ ರೈಲನ್ನು ಪ್ರಾರಂಭಿಸಲಾಗುತ್ತಿದೆ.  ಈ ಮೂಲಕ ಉತ್ತರ ಕನ್ನಡ ಜನರಿಗೆ (Uttara Kannada) ವಿಶೇಷ ಸುದ್ದಿ ಹೊರಬಿದ್ದಿದೆ. 


    ಹೆಜ್ಜೆಗೊಂದು ಮಾಸ್ತಿ, ನಾಗಯಕ್ಷಿ,ಚೌಡೇಶ್ವರಿ ಊರಿಗೊಂದು ಗ್ರಾಮದೇವಿ. ಇದಕ್ಕೆಲ್ಲ ಗೋಪುರ ಕಳಶದಂತೆ ಶಿರಸಿಯ ಮಾರಿಕಾಂಬೆ, ಹೊನ್ನಾವರದ ಕರಿಕಾನ ಪರಮೇಶ್ವರಿ, ಸಿದ್ದಾಪುರದ ಭುವನೇಶ್ವರಿ, ಯಲ್ಲಾಪುರದ ದುರ್ಗಾಂಬಾ-ಕಾಳಿಕಾಂಬಾ, ಮುಂಡಗೋಡದ ಮಾರಿಕಾಂಬೆ, ಭಟ್ಕಳದ ಸೋಡಿಗದ್ದೆ ಮಹಾಸತಿ, ಕುಮಟಾದ ಭದ್ರಕಾಳಿ, ಹಳಿಯಾಳದ ದುರ್ಗಾದೇವಿ ಹೀಗೆ ಇಡೀ ಜಿಲ್ಲೆಗೆ ಜಿಲ್ಲೆಯೇ ನವರಾತ್ರಿ ಬಂತೆಂದರೆ ನವ ರಂಗಿನ ನವೋಲ್ಲಾಸದಲ್ಲಿ ಮಿಂದೇಳುತ್ತದೆ.


    ಪರ ಊರಲ್ಲಿ ದುಡಿಯುವವರೇ ಹೆಚ್ಚು
    ಆದರೆ  ಉತ್ತರ ಕನ್ನಡ ಜಿಲ್ಲೆಯಲ್ಲಿ ಪರ ಊರಿಗೆ ಹೋಗಿ ದುಡಿಯುವವರ ಸಂಖ್ಯೆಯೇ ಹೆಚ್ಚು! ಅವರು ಊರಿಗೆ ಬರುವ ಆತುರದಲ್ಲಿ ಬಸ್ಸನ್ನು ಆಶ್ರಯಿಸಹೋದರೆ ಖಾಸಗಿ ಸಾರಿಗೆಗಳ ದರ ಹೆಚ್ಚಿರುತ್ತದೆ, ಟಿಕೇಟ್ ಸಿಗುವುದೂ ಕಷ್ಟ!


    ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


    ಅಕ್ಟೋಬರ್ 1 ರಿಂದಲೇ ಈ ಸೇವೆ ಶುರು
    ಅಕ್ಟೋಬರ್ 1 ನೇ ತಾರೀಕಿಂದ ರೈಲಿನ ಸೇವೆ ಆರಂಭವಾಗಿದ್ದು ರಾತ್ರಿ 11.45 ಕ್ಕೆ ಯಶವಂತಪುರದಿಂದ ಹೊರಡುವ ಈ ರೈಲು (ರೈಲಿನ ಸಂಖ್ಯೆ-06563) ಮರುದಿನ ಮಧ್ಯಾಹ್ನ 12.55 ಕ್ಕೆ ಮುರುಡೇಶ್ವರವನ್ನು ತಲುಪಲಿದೆ.


    ಹಾಗೂ ಅಕ್ಟೋಬರ್ 2ರಂದು ಮಧ್ಯಾಹ್ನ 1.30ಗೆ ಹೊರಡುವ ರೈಲು, (ರೈಲಿನ ಸಂಖ್ಯೆ: 06564) ಮರುದಿನ ಸಂಜೆ 4 ಕ್ಕೆ ಯಶವಂತಪುರ ತಲುಪಲಿದೆ.


    ಇದನ್ನೂ ಓದಿ: Sirsi Marikamba: ದೊಡ್ಡಮ್ಮನಿಗೆ ನವರಾತ್ರಿ ಅಲಂಕಾರ! ಶಿರಸಿ ಮಾರಿಕಾಂಬೆಯ ದಿವ್ಯ ದರ್ಶನ ಪಡೆಯಿರಿ


    ಈ ರೈಲಿನ ಸೌಲಭ್ಯವನ್ನು ನಾಗರಿಕರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಭಾರತೀಯ ರೈಲ್ವೇ ಮನವಿ ಮಾಡಿದೆ. ಇನ್ಯಾಕೆ ತಡ? ಊರು ಕರಿಯುತಿದೆ ಹಬ್ಬಕ್ಕೆ ಬನ್ನಿ!


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: